ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀಕಾಳಿಕಾಂಬ ದೇವಸ್ಥಾನ ಸಮಿತಿಯಿಂದ ಬುಧವಾರ ಶ್ರೀಕಾಳಿಕಾಂಬ ದೇವಾಲಯದ ಆವರಣದಲ್ಲಿ ೧೯ನೇ ವರ್ಷದ ನವಚಂಡಿಕಾ ಮಹಾಯಾಗ ನಡೆಯಿತು.ಮಂಗಳವಾರ ಸಂಜೆಯಿಂದಲೇ ದೇವಳದಲ್ಲಿ ವಿಶೇಷ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿದ ಋತ್ವಿಜರು, ಸಂಜೆ ೫.೩೦ರಿಂದ ಸಾಮೂಹಿಕ ದೇವತಾ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಋತ್ವಿಕ್ ವರ್ಣನೆ, ನವಚಂಡಿಕಾ ಪಾರಾಯಣ ಹಾಗೂ ಮಹಾಸುದರ್ಶನ ಹೋಮ ನಡೆಯಿತು.
ಬಳಿಕ ರಾತ್ರಿ ೮ ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಬುಧವಾರ ಬೆಳಗ್ಗೆ ೬ ಗಂಟೆಗೆ ಶ್ರೀ ಕಾಳಿಕಾಂಬ ದೇವಿಯ ಸನ್ನಿಯಲ್ಲಿ ಫಲ ಪಂಚಾಮೃತ ಸಹಿತ ನವಕಳಶಾಭಿಷೇಕ, ೮.೩೦ ರಿಂದ ನವಚಂಡಿಕಾ ಮಹಾಯಾಗ ಪ್ರಾರಂಭವಾಯಿತು.ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪೂರ್ಣಾಹುತಿ, ಸುವಾಸಿನಿ, ಕನ್ನಿಕಾ ಪೂಜೆ, ಶ್ರೀ ದೇವಿಯ ಮೂಲ ಸನ್ನಿಧಿಯಲ್ಲಿ ಮಹಾನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಶ್ರೀಬಲಮುರಿ ಮಹಾಗಣಪತಿ ದೇವಸ್ಥಾನದ ಅರ್ಚಕ ಅರ್ಚುನ್ ಎಸ್. ರಾವ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.ಶಾಸಕ ಪಿ.ರವಿಕುಮಾರ್ ದಂಪತಿ, ದೇವಾಲಯ ಸಮಿತಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್), ಕಾರ್ಯದರ್ಶಿ ಎಂ.ಎಸ್. ಶ್ರೀನಿವಾಸಯ್ಯಘಿ ಸೇರಿದಂತೆ ದೇವಾಲಯ ಸಮಿತಿ ಪದಾಧಿಕಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಕ್ಷ್ಮೀದೇವಿ ದೇಗುಲ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಗೌರವಕಿಕ್ಕೇರಿ:
ಬೋಳಮಾರನಹಳ್ಳಿಯಲ್ಲಿ ನೂತನವಾಗಿ ಲಕ್ಷ್ಮೀದೇವಿ ದೇಗುಲ ಲೋಕಾರ್ಪಣೆ, ಪೂಜಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಅಭಿನಂದಿಸಲಾಯಿತು.ದೇವಿಗೆ ವಿವಿಧ ಪೂಜಾ ಹೋಮ ಹವನಾದಿ, ದೇವಿಯ ಉತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನಪ್ರಸಾದ ನಡೆಯಿತು. ಅದಿಚುಂಚನಗಿರಿ ಕ್ಷೇತ್ರದ ಶಾಖಾಮಠದ ಪುರುಷೋತ್ತಮನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಸಂಸದ ಡಾ.ಸಿ.ಎನ್. ಮಂಜುನಾಥ್, ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಟಿ.ಮಂಜು, ಸಿ.ಎನ್. ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಮತ್ತಿತರ ಗಣ್ಯರು ದೇವಿಯ ದರ್ಶನ ಪಡೆದು ಮಾತನಾಡಿದರು.ಸುಮಾರು 75 ಲಕ್ಷ ಪು.ವೆಚ್ಚದಲ್ಲಿ ದೇಗುಲ ನಿರ್ಮಾಣವಾಗಲು ಸಹಕರಿಸಿದ ಪ್ರಥಮವಾಗಿ ನೆರವು ನೀಡಿ ಉತ್ತೇಜಿಸಿದ ಎಂಎಲ್‌ಸಿ ಸೂರಜ್ ರೇವಣ್ಣ, ಶಾಸಕರಾದ ಎಚ್.ಟಿ.ಮಂಜು, ಸಿ.ಎನ್. ಬಾಲಕೃಷ್ಣ, ದಾನಿಗಳಾದ ಆರ್‌ಟಿಒ ಮಲ್ಲಿಕಾರ್ಜುನ, ಸಿ.ಎನ್. ಪುಟ್ಟಸ್ವಾಮಿಗೌಡ, ಸಿ.ಎನ್. ಪುಟ್ಟರಾಜು, ಸ್ಟಾರ್‌ಚಂದ್ರು, ಡಾಲುರವಿ, ಜಯಲಿಂಗೇಗೌಡ, ನಿಖಿತಡಾ. ಹರ್ಷಿತ್, ಕೃಷ್ಣಮೂರ್ತಿ ಚರಣ್, ಶಿವಮ್ಮ ಚಿಕ್ಕೇಗೌಡ, ಬಿ.ಎಂ. ಪೂಜಾರಿ ಕಿರಣ್‌ಕುಮಾರ್, ರಾಜೇಗೌಡ, ರಾಮಚಂದ್ರೇಗೌಡ, ಸರ್ವೇ ಮಂಜುನಾಥ್, ಸಿ.ಎನ್. ಶಶಿಧರ್, ವೆಂಕಟೇಶ್, ನಂದಿನಿ, ರಮೇಶ್, ಭ್ರಮೇಶ್, ಬಾಬು, ಲೋಕೇಶ್ ಮತ್ತಿತರರನ್ನುದೇಗುಲ ಸಮಿತಿಯಿಂದ ಗೌರವಿಸಲಾಯಿತು.