ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ರನ್ನಬೆಳಗಲಿಯ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವ ಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ನಾಡಹಬ್ಬ ದಸರಾ ಹಾಗೂ ನವರಾತ್ರಿ ಉತ್ಸವದ ಪ್ರಯುಕ್ತ ಅ.1ರ ಬೆಳಿಗ್ಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪುಣ್ಯಕೋಟಿ ಸಿದ್ಧಾಶ್ರಮದ ಡಾ.ರಮೇಶಕುಮಾರ ಶಾಸ್ತ್ರಿ ಹೇಳಿದರು.ಸಮೀಪದ ರನ್ನಬೆಳಗಲಿಯ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ನವರಾತ್ರಿ ಉತ್ಸವದ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಶ್ರೀಶೈಲಂನ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಹಾಗೂ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮಹಾಕಾಳಿ ಭುವನೇಶ್ವರಿ ವನದ ಅಡಿಗಲ್ಲು ಸಮಾರಂಭ ಹಾಗೂ ಜಾನಪದ ಕಲಾ ಸಂಸ್ಕೃತಿ ಉತ್ಸವ, ಆಯುತ ಮಹಾಚಂಡಿಕಾ ಯಾಗ, ಕುಂಭಮೇಳ, ಮಹಾ ಜಂಬೂಸವಾರಿ ಮಹೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.ಸಕಲ ವಾದ್ಯ ಮೇಳ, ವೀರಗಾಸೆ, ಕುಂಭಮೇಳದೊಂದಿಗೆ ದೇವಿಯ ಭವ್ಯ ಮೆರವಣಿಗೆ ಉಡಿತುಂಬುವ ಕಾರ್ಯ, ದೇವಿ ಪುರಾಣ ಮತ್ತು ಪ್ರವಚನ, ಮಲ್ಲಗಂಬ ಪ್ರದರ್ಶನ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಸಂಸದ ಗೋವಿಂದ ಕಾರಜೋಳರ ಅಧ್ಯಕ್ಷತೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸುವರು. ಪದ್ಮಶ್ರೀ ಡಾ.ಮಂಜಮ್ಮ ಜೋಗತಿ, ಸಂಸದ ಪಿ.ಸಿ.ಗದ್ದಿಗೌಡ, ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿ, ದುರ್ಯೋಧನ ಐಹೊಳೆ, ಅರುಣ ಕಾರಜೋಳ, ಪ್ರತಾಪರಾವ ಪಾಟೀಲ, ಡಿವೈಎಸ್ಪಿ ಶಾಂತವೀರ, ಸಿದ್ದು ಪಾಟೀಲ, ಪಪಂ ಅಧ್ಯಕ್ಷರಾದ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗ್ಲಿಕರ ಭಾಗವಹಿಸುವರು ಎಂದು ತಿಳಿಸಿದರು.ಚಿಮ್ಮಡ ವಿರಕ್ತ ಮಠದ ಪ್ರಭು ಸ್ವಾಮೀಜಿ, ಎಂ.ಚಂದರಗಿ ಕಡಕೋಳದ ವೀರಭದ್ರ ಶಿವಾಚಾರ್ಯ ಶ್ರೀ, ಕೊಣ್ಣೂರು ಕಲ್ಯಾಣ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀ, ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರು, ಕುಂಚನೂರ ಜಕನೂರಮಠದ ಡಾ.ಮಾಧುಲಿಂಗ ಮಹಾರಾಜರು, ಗುರುಲಿಂಗದೇವರು, ಸಿದ್ಧರಾಮ ಶ್ರೀ, ಡಾ.ಕಾಡಯ್ಯ ಶಾಸ್ತ್ರಿ, ಗುರುಮೂರ್ತಿ ದೇವರು, ಶಿವಕುಮಾರ ಶಾಸ್ತ್ರಿ, ಮಹಾಲಿಂಗಯ್ಯ ಮಠಪತಿ, ದಾನಯ್ಯ ಶಾಸ್ತ್ರಿ, ಗಣೇಶಕುಮಾರ ಶಾಸ್ತ್ರಿ ಮತ್ತು ಗಣ್ಯಮಾನ್ಯರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಮುಖಂಡರಾದ ಗಣೇಶ ಪೂಜೇರಿ, ಮಹಾದೇವ ನೇಸೂರ, ರವಿ ಸೈದಾಪುರ, ಮಾರುತಿ ಸೈದಾಪುರ, ಹನಮಂತ ಸೈದಾಪುರ, ನಾಗರಾಜ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ಸದಾಶಿವ ಮೈಸೂರ, ಸಿದ್ದು ಅಥಣಿ, ಲಕ್ಕಪ್ಪ ಹನಗಂಡಿ, ಸೈದು ದಡ್ಡಿವನರ, ರಾಘವೇಂದ್ರ ನೀಲನ್ನವರ ಇತರರಿದ್ದರು.