ಸಾರಾಂಶ
ತರೀಕೆರೆ: ನವರಾತ್ರಿಯಲ್ಲಿ ವಿವಿಧ ಅಲಂಕಾರಗಳಿಂದ ಶೋಭಿಸುತ್ತಿರುವ ಪಟ್ಟಣದ ತುದಿಪೇಟೆ ಶ್ರೀ ಅನ್ನಪೂರ್ಣೇಶ್ವರಿ 6ನೇ ದಿನದಂದು ಕಾತ್ಯಾಯಿನಿಯಾಗಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದಳು. ಅನ್ನಪೂರ್ಣೇಶ್ವರಿ ದೇವಿ ವಜ್ರಾಯುಧ ಧರಿಸಿ ದೇವೆಂದ್ರನ ಪಟ್ಟಮಹಿಷಿಯಾಗಿ ವೃತ್ರಾಸುರ ಮೊದಲಾದ ದುಷ್ಟದೃತ್ಯರ ಸಂಹರಿಸುವ ಮನೋಹರ ದೃಶ್ಯದಲ್ಲಿ ಕಂಗೊಳಿಸಿದಳು ಎಂದು ಶರನ್ನವರಾತ್ರಿ ಮಹೋತ್ಸವದ ಸದಸ್ಯ ರಾಜಣ್ಣ ಹೇಳಿದರು.ಶರವನ್ನರಾತ್ರಿ ಮಹೋತ್ಸವಲ್ಲಿ ಶ್ರೀ ಸಪ್ತಗಿರಿ ಭಜನಾ ಮಂಡಳಿ ಸದಸ್ಯೆ ಮಂಜುಳಾದೇವೇಂದ್ರ ಮಾತನಾಡಿ ಮಹಿಷಾಸುರನನ್ನು ವಧಿಸಲು ಬ್ರಹ್ಮ, ವಿಷ್ಟು ಮತ್ತು ಮಹೇಶ್ವರರ ತೇಜಸ್ಸಿನಿಂದ ಹುಟ್ಟಿ ಬಂದ ಕಾತ್ಯಾಯಿನಿ ದೇವಿ, ನಮ್ಮೊಳಗಿನ ಅಜ್ಞಾನ, ಭಯ ಹಾಗೂ ಕೆಟ್ಟ ಆಲೋಚನೆಗಳನ್ನು ನಾಶ ಮಾಡಲಿ, ಕಾತ್ಯಾಯಿನಿ ದೇವಿ ಸಿಂಹದ ಮೇಲೆ ಕುಳಿತು ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದು ಮಹಿಷಾಸುರನನ್ನು ಕೊಂದ ದೇವಿ ಶತ್ರುಗಳಿಂದ ಹಾಗೂ ತೊಂದರೆಗಳಿಂದ ಮುಕ್ತಿ ನೀಡುವವಳು ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ವಿಶೇಷವಾಗಿ ವಿವಾಹಕ್ಕೆ ಎದುರಾಗುವ ಅಡೆತಡೆಗಳ ನಿರ್ವಹಣೆ, ವೈವಾಹಿಕ ಜೀವನದಲ್ಲಿ ಸಾಮರಸ್ಯ ಮತ್ತು ಶಾಂತಿ ವೃದ್ಧಿ ಯಾಗುವುದು ಎಂದು ಹೇಳಿದರು.ಸಂಜೆ ಲೀಲಾಸೋಮಶೇಖರಯ್ಯ ನೇತೃತ್ವದಲ್ಲಿ ಶ್ರೀಸಪ್ತಗಿರಿ, ಶ್ರೀ ಶೇಷಗಿರಿ ಭಜನಾ ಮಂಡಳಿಯಿಂದ ಲಲಿತಾ ಸಹಸ್ರ ನಾಮ, ಸೌಂದರ್ಯ ಲಹರಿ ದೇವಿಯ ಹಾಡು ಹಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. ನಂತರ ಹರಿದಾಸರಿಂದ ಶ್ರಿದೇವಿ ಪಾರಾಯಣ ನಡೆಸಲಾಯಿತು. ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮಿತಿ ಸದಸ್ಯರು, ಭಕ್ತರು, ಭಜನಾ ಮಂಡಳಿ ಸದಸ್ಯನೀಯರು ಉಪಸ್ಥಿತರಿದ್ದರು.28ಕೆಟಿಆರ್.ಕೆ.2ಃ
ನವರಾತ್ರಿಯಲ್ಲಿ ವಿವಿಧ ಅಲಂಕಾರಗಳಿಂದ ಶೋಭಿಸುತ್ತಿರುವ ತರೀಕೆರೆ ಪಟ್ಟಣದ ತುದಿಪೇಟೆ ಶ್ರೀ ಅನ್ನಪೂರ್ಣೇಶ್ವರಿ ಕಾತ್ಯಾಯಿನಿಯಾಗಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದಳು.