ತಲಕಾವೇರಿ ಪುಣ್ಯ ತೀರ್ಥ ಸಂಗ್ರಹಿಸಿ ಎನ್‌ಸಿಸಿ ತಂಡ

| Published : Dec 07 2024, 12:33 AM IST

ಸಾರಾಂಶ

ಮಡಿಕೇರಿಯ 19 ಕೆಎಆರ್‌ ಎನ್‌ಸಿಸಿ ಬೆಟಾಲಿಯನ್‌ ತಂಡ, ಸಿಬ್ಬಂದಿ ವರ್ಗ, ಮೂರ್ನಾಡು ಪ.ಪೂ.ಕಾಲೇಜು ಎನ್‌ಸಿಸಿ ಕೆಡೆಟ್‌ಗಳು ಇವರಿಂದ ಎನ್‌ಸಿಸಿ ಅಧಿಕಾರಿ ಕ್ಯಾ. ಕಾವೇರಪ್ಪ ಪಿ.ಎಂ. ನೇತೃತ್ವದಲ್ಲಿ ತಲಕಾವೇರಿಯಲ್ಲಿ ಪುಣ್ಯ ತೀರ್ಥ ಸಂಗ್ರಹ ಕಾರ್ಯ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮಡಿಕೇರಿಯ 19 ಕೆಎಆರ್‌ ಎನ್‌ಸಿಸಿ ಬೆಟಾಲಿಯನ್‌ ತಂಡ, ಸಿಬ್ಬಂದಿ ವರ್ಗ, ಮೂರ್ನಾಡು ಪ.ಪೂ.ಕಾಲೇಜು ಎನ್‌ಸಿಸಿ ಕೆಡೆಟ್‌ಗಳು ಇವರಿಂದ ಎನ್‌ಸಿಸಿ ಅಧಿಕಾರಿ ಕ್ಯಾ. ಕಾವೇರಪ್ಪ ಪಿ.ಎಂ. ನೇತೃತ್ವದಲ್ಲಿ ತಲಕಾವೇರಿಯಲ್ಲಿ ಪುಣ್ಯ ತೀರ್ಥ ಸಂಗ್ರಹ ಕಾರ್ಯ ನಡೆಯಿತು.

ಭಾರತೀಯ ನೌಕಾದಳದ ಐಎನ್ಎಸ್ ತರಂಗಿಣಿ ಎಂಬ ಹಡಗು ಗುಜರಾತ್‌ನಿಂದ ತನ್ನ ಯಾನ ಆರಂಭಿಸಿ ಅರಬ್ಬೀ ಸಮುದ್ರ, ಹಿಂದೂ ಮಹಾಸಾಗರದ ಮೂಲಕ ಬಂಗಾಳ ಕೊಲ್ಲಿಯಲ್ಲಿ ಯಾನ ಕೊನೆಗೊಳಿಸುತ್ತದೆ. ಇದು ಪ್ರಯಾಣ ಬೆಳೆಸಿದ ಉದ್ದಗಲಕ್ಕೂ ಪುಣ್ಯ ಕ್ಷೇತ್ರಗಳಿಂದ ತೀರ್ಥ ಸಂಗ್ರಹಿಸಿ ತೆರಳುತ್ತಿದು ಈ ಉದ್ದೇಶದಿಂದ ತಲಕಾರಿ ತೀರ್ಥ ಸಂಗ್ರಹಿಸಲಾಯಿತು. ಸಂಗ್ರಹಿಸಿದ ಪುಣ್ಯತೀರ್ಥ ಭಾರತದಾದ್ಯಂತ ಸಂಚಾರಿಸಿ ಎಲ್ಲ ಭಾರತೀಯರಿಗೂ ಆರೋಗ್ಯ, ಸಮೃದ್ಧಿ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

ಸುಬೇದಾರ್ ದೇವದಾಸ್, ನಿಖಿಲ್‌ ಸೆಲ್ವ, ಎನ್‌ಸಿಸಿ ಸಿಬ್ಬಂದಿ, ಕೆಡೆಟ್‌ಗಳು ಇದ್ದರು.

ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಸತೀಶ್‌ ನಾರಾಯಣ್‌

ಸಿದ್ದಾಪುರ: ನೆಲ್ಯಹುದಿಕೇರಿ ಕೆಪಿಎಸ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸತೀಶ್‌ ನಾರಾಯಣ್ ಆಯ್ಕೆಯಾಗಿದ್ದಾರೆ. ಕೆಪಿಎಸ್ ಶಾಲಾ‌ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೆಪಿಎಸ್ ಶಾಲಾ ಉಪಾಧ್ಯಕ್ಷ ಪಿ ಕೆ ಮುಸ್ತಫಾ ನೇತೃತ್ವದಲ್ಲಿ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಅಫ್ಸಲ್, ಕೋಶಾಧಿಕಾರಿಯಾಗಿ ಸಂಯುಕ್ತ, ಸಂಘಟನಾ ಕಾರ್ಯದರ್ಶಿಗಳಾಗಿ ಸುಜಾತ, ಬೆಳ್ಳಿಯಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರಾಗಿ ಶುಭ, ವಿನೋದ್, ನಿಶಾ, ಜಿಶಾ ಆಯ್ಕೆಯಾದರು. ಶಾಲೆಯ ಪ್ರಾಂಶುಪಾಲ ಆಲ್ವರೀಸ್, ಉಪಪ್ರಾಂಶುಪಾಲ ಅನಿಲ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಭಾರತಿ ಹಾಜರಿದ್ದರು.