ಸಾರಾಂಶ
ಹೊನ್ನಾವರ; ತಾಲೂಕಿನ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿಗೆ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ವಿಜ್ಞಾನಿಗಳು ಭೇಟಿ ನೀಡಿದರು.ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ವಿಜ್ಞಾನಿಗಳ ಭೇಟಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಸಂಸ್ಥಾಪಕ ಡಾ.ಸಿ.ಎನ್.ಆರ್.ರಾವ್ ಹಾಗೂ ಇಂದುಮತಿ ರಾವ್ ಆನ್ ಲೈನ್ ಮೂಲಕ ಹಾಜರಿದ್ದು, ಎಸ್.ಡಿಎಂ ಕಾಲೇಜು ನಡೆಸುತ್ತಿರುವ ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿದರು.
ಅಧ್ಯಕ್ಷ ಜಿ.ಯು.ಕುಲಕರ್ಣಿ ಆನ್ ಲೈನ್ ನಲ್ಲಿ ವರ್ಚುವಲ್ ಮೋಡ್ ನಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹೊನ್ನಾವರದ ಎಸ್.ಡಿ.ಎಂ.ಕಾಲೇಜು ಉತ್ತಮ ಹಿನ್ನೆಲೆ ಹೊಂದಿರುವ ಕಾಲೇಜು. ನ್ಯಾಕ್ ನಿಂದ ಎ+ ಶ್ರೇಣಿ ಹೊಂದಿದೆ. ಹಳ್ಳಿಯ ಭಾಗದಲ್ಲಿದ್ದರೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದರು.ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿವಾನಿ ಮಾತನಾಡಿದರು.
ಪ್ರೊ.ಈಶ್ವರಮೂರ್ತಿ ಎಂ., ಪ್ರೊ. ಸುಬಿ ಜೆ.ಜಾರ್ಜ್, ಡಾ.ಶ್ವೇತಾ ಶಿವಪ್ರಸಾದ್, ಡಾ.ಪ್ರತಾಪ್ ವಿಷ್ಣೋಯಿ, ಎ.ಎನ್. ಜಯಚಂದ್ರ ಉಪಸ್ಥಿತರಿದ್ದರು.ಪದವಿ ಪ್ರಾಚಾರ್ಯ ಡಾ.ಡಿ.ಎಲ್. ಹೆಬ್ಬಾರ್ ಸ್ವಾಗತಿಸಿದರು. ಕಾಲೇಜಿನ ಐಕ್ಯೂಎಸಿ ಕೋ ಆರ್ಡಿನೇಟರ್ ಡಾ. ಸುರೇಶ್ ಎಸ್. ವಂದಿಸಿದರು. ಕಾಲೇಜಿನ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವೆಲೆನ್ಸಿಯಾ ಡಿಸೋಜಾ ಹಾಗೂ ಕೆ ಆರ್ ಶ್ರೀಲತಾ ನಿರೂಪಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕಿಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು.