ಸಾರಾಂಶ
ಮುದ್ದಂಡ ಹಾಕಿ ಕಪ್‌ನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ, ಕೂತಂಡ, ಪುದಿಯೊಕ್ಕಡ, ಕರವಂಡ ತಂಡಗಳು ಜಯ ಸಾಧಿಸಿವೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ, ಕೂತಂಡ, ಪುದಿಯೊಕ್ಕಡ, ಕರವಂಡ ತಂಡಗಳು ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿವೆ.ನೆಲ್ಲಮಕ್ಕಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪರ ಸಚಿನ್, ರಾಕೇಶ್ ಸುಬ್ರಮಣಿ, ರೋಶನ್ ಬೋಪಣ್ಣ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕೋಳೇರ ನಿಶಿಕ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೂತಂಡ ಮತ್ತು ಅಮ್ಮಣಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕೂತಂಡ ಜಯ ಸಾಧಿಸಿತು. ಕೂತಂಡ ಪರ ಬೋಪಣ್ಣ 4 ಗೋಲು ದಾಖಲಿಸಿ ಗಮನ ಸೆಳೆದರೆ, ಸುರೇಶ್ ಅಪ್ಪಯ್ಯ 1 ಗೋಲು ಬಾರಿಸಿದರು. ಅಮ್ಮಣಿಚಂಡ ಯಶ್ವಂತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ನಾಳಿಯಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಮಿಥನ್ ಪೊನ್ನಪ್ಪ ಹಾಗೂ ವಿಪನ್ ಸೋಮಯ್ಯ ತಲಾ 1 ಗೋಲು ದಾಖಲಿಸಿದರು. ನಾಳಿಯಂಡ ಪರ ಚರಣ್ ಚಿಣ್ಣಪ್ಪ 1 ಗೋಲು ಬಾರಿಸಿದರು. ನಾಳಿಯಂಡ ರತ್ನ ಬೆಳ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕರವಂಡ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಕರವಂಡ ಜಯ ಸಾಧಿಸಿತು. ಕರವಂಡ ಪರ ಕೃತನ್ ಅಪ್ಪಚ್ಚು 2 ಗೋಲು ದಾಖಲಿಸಿದರು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ಹಾಗೂ ಕೌಶಿಕ್ ಕುಶಾಲಪ್ಪ ತಲಾ 1 ಗೋಲು ಬಾರಿಸಿದರು. ಕಾಂಡಂಡ ಕೌಶಿಕ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.