ನೆಟ್‌ಬಾಲ್ ಪಂದ್ಯಾವಳಿ: ವಿವಿ ಕಲಾ ಕಾಲೇಜಿಗೆ ಗೆಲುವು

| Published : May 08 2025, 12:32 AM IST

ನೆಟ್‌ಬಾಲ್ ಪಂದ್ಯಾವಳಿ: ವಿವಿ ಕಲಾ ಕಾಲೇಜಿಗೆ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಕೊರಟಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಪುರುಷರ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ತಂಡ ಗೆಲುವು ಸಾಧಿಸಿದೆ.

ತುಮಕೂರು: ಕೊರಟಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಪುರುಷರ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ತಂಡ ಗೆಲುವು ಸಾಧಿಸಿದೆ. ತಂಡವು ರೋಹನ್ ಆರ್., ದರ್ಶನ್ ಪಿ., (ತೃತೀಯ ಬಿಕಾಂ), ಪ್ರದೀಪ್ ಕುಮಾರ್ ಆರ್., ಮಾರುತಿ ಜಿ. ಆರ್. (ಪ್ರಥಮ ಬಿಬಿಎ), ಗೋಪಾಲಕೃಷ್ಣ (ದ್ವಿತೀಯ ಬಿಎ), ವಿನಯ್ ಆರ್. (ದ್ವಿತೀಯ ಬಿಬಿಎ), ಈಶ್ವರ್ ಬಿ., ಪಿ. ಲಾಲೂಪ್ರಸಾದ್, ಟಿ. ಸುದೀಪ್ (ದ್ವಿತೀಯ ಬಿಕಾಂ), ತೇಜಸ್ ಎಸ್., ನಿರಂಜನ್ ವಿ. (ತೃತೀಯ ಬಿಎ), ಯೋಗವರ್ಧನ್ ಟಿ. (ಪ್ರಥಮ ಬಿಎ) ಇವರನ್ನು ಒಳಗೊಂಡಿತ್ತು.ಪ್ರಥಮ ಸ್ಥಾನ ಗಳಿಸಿದ ತಂಡವನ್ನು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸುದೀಪ್ ಕುಮಾರ್ ಆರ್. ಅಭಿನಂದಿಸಿದ್ದಾರೆ.