ಅರಕಲಗೂಡು ತಾಲೂಕಿನ ಹಳ್ಳಿಮೈಸೂರಿನಲ್ಲಿ ಬಸ್ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು. ಶ್ರೀ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ನೂತನ ಬಸ್ಸಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಪೂಜೆ ಬಳಿಕ ಬಸ್ಸಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಸಂಪ್ರದಾಯಬದ್ಧವಾಗಿ ಶುಭಾಶಯ ಕೋರಿ ಹರಸಿ ಬೀಳ್ಕೊಟ್ಟರು. ಈ ನೂತನ ಬಸ್ ಸೇವೆಯಿಂದ ಧರ್ಮಸ್ಥಳ ಹಾಗೂ ಕುಕ್ಕೆಸುಬ್ರಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ, ಮೈಸೂರು ನಗರಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ. ಇದುವರೆಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮೀಣ ಜನತೆಗೆ ಈ ಬಸ್ ಸೇವೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಪುತ್ತೂರು ವಿಭಾಗದ ವತಿಯಿಂದ ಧರ್ಮಸ್ಥಳದಿಂದ ಕುಕ್ಕೆಸುಬ್ರಮಣ್ಯ, ಬಿಸಲೆ, ಶನಿವಾರಸಂತೆ, ಮಲ್ಲಿಪಟ್ಟಣ, ಅರಕಲಗೂಡು ಹಾಗೂ ಹಳ್ಳಿ ಮೈಸೂರು ಮಾರ್ಗವಾಗಿ ಮೈಸೂರು ತಲುಪುವ ನೂತನ ಬಸ್ ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಈ ಬಸ್ ಸೇವೆ ಆರಂಭಗೊಂಡಿರುವುದು ಗ್ರಾಮೀಣ ಪ್ರದೇಶದ ಜನತೆಗೆ ಮಹತ್ವದ ಅನುಕೂಲ ಕಲ್ಪಿಸುವ ನಿರೀಕ್ಷೆ ಮೂಡಿಸಿದೆ.

ಅರಕಲಗೂಡು ತಾಲೂಕಿನ ಹಳ್ಳಿಮೈಸೂರಿನಲ್ಲಿ ಬಸ್ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು. ಶ್ರೀ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ನೂತನ ಬಸ್ಸಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಪೂಜೆ ಬಳಿಕ ಬಸ್ಸಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಸಂಪ್ರದಾಯಬದ್ಧವಾಗಿ ಶುಭಾಶಯ ಕೋರಿ ಹರಸಿ ಬೀಳ್ಕೊಟ್ಟರು. ಈ ನೂತನ ಬಸ್ ಸೇವೆಯಿಂದ ಧರ್ಮಸ್ಥಳ ಹಾಗೂ ಕುಕ್ಕೆಸುಬ್ರಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ, ಮೈಸೂರು ನಗರಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ. ಇದುವರೆಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮೀಣ ಜನತೆಗೆ ಈ ಬಸ್ ಸೇವೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.ಈ ಸಂದರ್ಭದಲ್ಲಿ ಗ್ರಾಮ ಮುಖಂಡರಾದ ಎಚ್. ಎಸ್. ಮಂಜುನಾಥ್, ಬಾಲಗಂಗಾಧರ್‌, ಎಚ್.ಎಸ್. ಕುಮಾರಸ್ವಾಮಿ, ಎಚ್.ಪಿ. ಸೋಮಶೇಖರ್‌, ದೊಡ್ಡಮನೆ ರಾಜಣ್ಣ, ಎಚ್. ಸಿ. ಶ್ರೀಕಂಠಮೂರ್ತಿ, ನಾಗರಾಜಪ್ಪ, ಎಚ್. ಬಿ. ಕುಮಾರಸ್ವಾಮಿ, ಪೆಟ್ರೋಲ್ ಬಂಕ್ ಮಂಜುನಾಥ್, ಎಚ್. ಟಿ. ಕಾಳೇಗೌಡ, ಎಚ್. ಪಿ. ನಟೇಶ್, ಲೋಕೇಶ್, ಸ್ವಾಮಿಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.