ಸಾರಾಂಶ
ರಾವಂದೂರು : ಗ್ರಾಮೀಣ ಜನರ ಉತ್ತಮ ಬದುಕಿಗೆ ಹೈನುಗಾರಿಕೆಯು ತುಂಬಾ ಸಹಕಾರಿಯಾಗಿದೆ ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.ಪಿರಿಯಾಪಟ್ಟಣ ತಾಲೂಕು ಕುಡುಕೂರು ಕೊಪ್ಪಲಿನಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯು ಗ್ರಾಮೀಣ ಜನರ ಉತ್ತಮ ಬದುಕಿಗೆ ತುಂಬ ಸಹಕಾರಿಯಾಗಿದ್ದು ಇದರ ಜೊತೆಗೆ ರೈತರು ಉಪಕಸುಬುಗಳನ್ನ ಅಳವಡಿಸಿಕೊಳ್ಳಬೇಕು.
ರೇಷ್ಮೆ ಬೆಳೆಗೂ ಕೂಡ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರದಿಂದ ಬರುವ ಸೌಲಭ್ಯವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಈ ವೇಳೆ ಜೆಡಿಎಸ್ ಮುಖಂಡ ರವಿಕುಮಾರ್ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಮುಲ್ ನಿರ್ದೇಶಕ ಪ್ರಕಾಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕೆ ಹೊಲದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರ್ ಲೋಕೇಶ್, ಸಚಿನ್, ಡಿ.ಎಸ್. ನಂದೀಶ್ , ಕೀರ್ತಿ, ಸಹಕಾರ ಇಲಾಖೆ ಮೇಲ್ವಿಚಾರಕ ಯತೀಂದ್ರ, ನಿಶ್ಚಿತ್, ಹಾಲು ಉತ್ಪದಕರ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಸ್ವಾಮಿಗೌಡ, ವಿಜೇಂದ್ರ, ಕಾರ್ಯದರ್ಶಿ ಪುನೀತ್, ಸಚಿವರ ಆಪ್ತ ಕಾರ್ಯದರ್ಶಿ ಮಹೇಂದ್ರ ಮೊದಲಾದವರು ಇದ್ದರು.