ಬಿಕ್ಕೋಡು ಸುತ್ತಮುತ್ತ ಆನೆ ಓಡಿಸಲು ಸಜ್ಜಾದ ನಿಡುಮನಹಳ್ಳಿ ಬಾಯ್ಸ್‌

| Published : Sep 22 2024, 01:47 AM IST

ಬಿಕ್ಕೋಡು ಸುತ್ತಮುತ್ತ ಆನೆ ಓಡಿಸಲು ಸಜ್ಜಾದ ನಿಡುಮನಹಳ್ಳಿ ಬಾಯ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಕ್ಕೋಡು ಹೋಬಳಿ ಸುತ್ತಮುತ್ತ ಗ್ರಾಮಗಳಲ್ಲಿ ಬೀಟಮ್ಮ ಗ್ಯಾಂಗ್, ಬೀಟಮ್ಮ 2 ಆನೆ ಗ್ಯಾಂಗ್‌ ಬೀಡು ಬಿಟ್ಟಿದ್ದು ಗದ್ದೆ, ಕಾಫಿ ತೋಟ, ಅಡಿಕೆ, ಬಾಳೆ ತೋಟಗಳಿಗೆ ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿವೆ. ಇರುವೆ ಸಾಲಿನಂತೆ ಸಾಗುವ 25ಕ್ಕೂ ಹೆಚ್ಚು ಕಾಡಾನೆಗಳ ಗುಂಪಿನ ಹಾವಳಿಯಿಂದ ರೈತರು, ಕೂಲಿ ಕಾರ್ಮಿಕರು ಜಮೀನಿನ ಬಳಿ ಹೋಗಲು ಭಯಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಕ್ಕೋಡು ಹೋಬಳಿಯ ಅರೆಮಲೆನಾಡು ಭಾಗದಲ್ಲಿ ಬೀಟಮ್ಮ ಗ್ಯಾಂಗ್, ಬೀಟಮ್ಮ 2 ಆನೆ ಗ್ಯಾಂಗ್ ಬೀಡು ಬಿಟ್ಟಿದ್ದು, ಆನೆಗಳಿಂದ ಬೆಳೆ ಹಾನಿ ತಪ್ಪಿಸಲು ಸ್ಥಳೀಯ ಯುವಕರು ಅಹೋರಾತ್ರಿ ಕಾವಲು ಕಾಯುತ್ತಿದ್ದು, ಇವರ ಜೊತೆ ಅರಣ್ಯ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಬಿಕ್ಕೋಡು ಹೋಬಳಿಯ ಅರೆಮಲೆನಾಡು ಭಾಗದಲ್ಲಿ ಬೀಟಮ್ಮ ಗ್ಯಾಂಗ್, ಬೀಟಮ್ಮ 2 ಆನೆ ಗ್ಯಾಂಗ್ ಬೀಡು ಬಿಟ್ಟಿದ್ದು, ಆನೆಗಳಿಂದ ಬೆಳೆ ಹಾನಿ ತಪ್ಪಿಸಲು ಸ್ಥಳೀಯ ಯುವಕರು ಅಹೋರಾತ್ರಿ ಕಾವಲು ಕಾಯುತ್ತಿದ್ದು, ಇವರ ಜೊತೆ ಅರಣ್ಯ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ.

ಬಿಕ್ಕೋಡು ಹೋಬಳಿ ಸುತ್ತಮುತ್ತ ಗ್ರಾಮಗಳಲ್ಲಿ ಬೀಟಮ್ಮ ಗ್ಯಾಂಗ್, ಬೀಟಮ್ಮ 2 ಆನೆ ಗ್ಯಾಂಗ್‌ ಬೀಡು ಬಿಟ್ಟಿದ್ದು ಗದ್ದೆ, ಕಾಫಿ ತೋಟ, ಅಡಿಕೆ, ಬಾಳೆ ತೋಟಗಳಿಗೆ ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿವೆ. ಇರುವೆ ಸಾಲಿನಂತೆ ಸಾಗುವ 25ಕ್ಕೂ ಹೆಚ್ಚು ಕಾಡಾನೆಗಳ ಗುಂಪಿನ ಹಾವಳಿಯಿಂದ ರೈತರು, ಕೂಲಿ ಕಾರ್ಮಿಕರು ಜಮೀನಿನ ಬಳಿ ಹೋಗಲು ಭಯಪಡುತ್ತಿದ್ದಾರೆ. ಕೂಲಿ ಮಾಡಲು ಸಾಧ್ಯವಾಗದೆ ಕಾರ್ಮಿಕರು ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ಕಾಡಾನೆಗಳ ಗುಂಪು ಗ್ರಾಮದೊಳಗೆ ನುಗ್ಗಿದರೆ ಏನು ಮಾಡುವುದು ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ಈಗಾಗಲೇ ಆನೆಗಳ ದಾಳಿಯಿಂದ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಆನೆ ಹಾವಳಿ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಬಿಕ್ಕೋಡು ಗ್ರಾಮದ ನಿಡುಮನಹಳ್ಳಿ ಬಾಯ್ಸ್ ಒಂದು ತಂಡವನ್ನು ರಚಿಸಿಕೊಂಡು ರಾತ್ರಿವೇಳೆ ಆನೆಗಳು ಬರುವ ದಾರಿಯಲ್ಲಿ ಯಾವುದೇ ಪ್ರಾಣ ಹಾನಿಯಾಗಬಾರದೆಂದು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಳ ಬಿಕ್ಕೋಡು ಗ್ರಾಮದಲ್ಲಿ ಕಾವಲು ಕಾಯುತ್ತಿದ್ದಾರೆ. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯ ಆರ್‌ಆರ್‌ಟಿ ಮತ್ತು ಈಟಿಎಫ್ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಕಾವಲು ಪಡೆಯ ತಂಡದ ಜೊತೆಗೆ ತಾವು ಜೊತೆಗೂಡಿದರು. ಅಹೋರಾತ್ರಿ ಅರಣ್ಯ ಸಿಬ್ಬಂದಿಯವರ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾವಲು ಪಡೆಯಲ್ಲಿ ಭರತ್, ಪವನ್, ಪುನೀತ್, ಆದರ್ಶ, ಸಂಜಯ್ ಇನ್ನೂ ಮುಂತಾದವರು ಕಾರ್ಯನಿರ್ವಹಿಸುತ್ತಿದ್ದಾರೆ.