ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಂಸ್ಕೃತ ಭಾಷೆಯಲ್ಲಿದ್ದ ವೇದ-ಉಪನಿಷತ್‌ಗಳ ಅರ್ಥ ತಿಳಿಯದೆ ಕನ್ನಡಿಗರು ಕಷ್ಟ ಪಡುತ್ತಿದ್ದ ಕಾಲದಲ್ಲಿ ನಿಜಗುಣರು ಅವುಗಳನ್ನು ಕನ್ನಡಕ್ಕೆ ಅನುವಾದಿಸಿದ ನಾಡುಕಂಡ ಶ್ರೇಷ್ಠ ತತ್ವಜ್ಞಾನಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳೀಯ ನೀಲಕಂಠೇಶ್ವರ ಮಠದಲ್ಲಿ ಕುರುವಿನಶೆಟ್ಟಿ ಸಮಾಜದ ಆಶ್ರಯದಲ್ಲಿ ನಡೆದ ವಿಶ್ವ ಶಾಂತಿಗಾಗಿ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ, ನಿಜಗುಣರು ನಾಡಿನ ಮುಕ್ತಿ ಪದ್ಧತಿ (ಕೈವಲ್ಯ ಪದ್ಧತಿ) ಪ್ರತಿಪಾದಕರು. ಅವರು ರಾಜ ಮನೆತನದಲ್ಲಿ ಹಳೆಯ ಮೈಸೂರು ಜಿಲ್ಲೆಯ ಚೀಲಕವಾಡಿ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿದರು, ರಾಜ್ಯ ಬಿಟ್ಟು ವೈರಾಗ್ಯ ತಾಳಿ ಶಂಭುಲಿಂಗ ಬೆಟ್ಟದಲ್ಲಿ 12 ವರ್ಷ ತಪಸ್ಸು ಮಾಡಿ ನಾಡಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಸಂಸ್ಕೃತ ಮತ್ತು ಕನ್ನಡ ಭಾಷೆ ಪಂಡಿತರಾಗಿದ್ದ ಅವರು, ಅಮೂಲ್ಯ ಏಳು ಗ್ರಂಥ ರಚಿಸಿ ಕೊಡುಗೆ ನೀಡಿದ್ದಾರೆ ಎಂದರು.ಮುಖ್ಯ ಪ್ರವಚನಕಾರ ಕೋಲೂರಿನ ಕೃಷ್ಣಗೌಡ ಪಾಟೀಲ ಮಾತನಾಡಿ, ಯಾವ ಕಾಲಕ್ಕೂ ಎಲ್ಲರಿಗಿಂತಲೂ ಗುರು ದೊಡ್ಡವನು. ಹರ ಮುನಿದರೆ ಗುರು ಕಾಯುವನು. ಗುರು ಮುನಿದರೆ ಹರ ಕಾಯಲಾರ, ಗುರುವಿನ ಉಪದೇಶ ಆಲಿಸಬೇಕು. ಅದರಂತೆ ಆಚರಿಸಿದರೆ ಮಾನವನಿಗೆ ಮುಕ್ತಿ ದೊರೆಯುತ್ತದೆ, ಶಿವಾ ತಮ್ಮನ್ನು ಕರುಣೆ ತೋರಿ ನೋಡಬೇಕು. ತಮ್ಮ ಮನಸ್ಸಿನಲ್ಲಿದ್ದ ಕತ್ತಲೆ ಕಳೆಯಬೇಕು ಎಂದರು.
ಶರಣ ದುಂಡಪ್ಪ ಮೆಟಗುಡ್ಡ ಮಾತನಾಡಿ, ನಿಜಗುಣರು ಹುಟ್ಟಿನಿಂದಲೇ ಕವಿ ಹೃದವುಳ್ಳವರಾಗಿದ್ದು ಸಂಗೀತದಲ್ಲೂ ಪಾಂಡಿತ್ಯವಿತ್ತು. ಅಧ್ಯಾತ್ಮದಂತಹ ಕಠಿಣ ವಿಷಯದ ಬಗ್ಗೆ ಸರಳ, ಸುಂದರವಾದ, ಕನ್ನಡದಲ್ಲಿ ಕವನ ರಚಿಸಿದ್ದಾರೆ ಎಂದರು. ಕೈವಲ್ಯ ಎಂದರೆ ಮುಕ್ತಿ ಪದ್ಧತಿ ಎಂದರೆ ಮಾರ್ಗ ಈ ಕೈವಲ್ಯ ಪದ್ಧತಿ ಪುಸ್ತಕದಲ್ಲಿ ಮುಕ್ತಿ ಪಡೆಯುವ ಮಾರ್ಗ ತೋರಿದ್ದಾರೆ. ಪರಮೇಶ್ವರನ ಗುರುವಿನ ಸ್ತುತಿಯಿಂದ ಈ ಗ್ರಂಥ ಆರಂಭವಾಗುತ್ತದೆ. ಅದರಂತೆ ನಿಜಗುಣರು ನೂರೆಂಟು ನಾಮಗಳಿಂದ ಪರಮೇಶ್ವರನನ್ನು ಸ್ತುತ್ತಿಸಿದ್ದಾರೆ. ನಾಡಿನ ಎಲ್ಲಾ ಮಹಾತ್ಮರು ನಿಜಗುಣರು ಬರೆದ ಕೈವಲ್ಯ ಪದ್ಧತಿ ವಿಷಯಗಳನ್ನೇ ಪ್ರವಚನದ ಮುಖ್ಯ ವಿಷಯವಾಗಿಟ್ಟುಕೊಂಡು ಮಾತನಾಡುತ್ತಾರೆ ಎಂದರು. ಸ್ವಾಮೀಜಿಗಳನ್ನು ಸಮಾಜ ಬಂದುಗಳು ಸನ್ಮಾನಿಸಿದರು.ಮೆರವಣಿಗೆ:
ನಿಜಗುಣರ ಭಾವ ಚಿತ್ರವಿರುವ ಪಾಲಿಕೆಯನ್ನು ಹೊತ್ತು ಶಾಸಕರು ಮೆರವಣಿಗೆಗೆ ಚಾಲನೆ ನೀಡಿದರು. ಸಕಲ ಮಂಗಲ ವಾದ್ಯಗಳೊಂದಿಗೆ ನಗರದ ಪ್ರಮುಖ ಬಿದಿಗಳಲ್ಲಿ ಸಾಗಿ ನೀಲಕಂಟೇಶ್ವರ ದೇವಸ್ಥಾನ ತಲುಪಿತು. ನಂತರ ಮುತ್ತೈದೆಯರು ತೊಟ್ಟಿಲೋತ್ಸವ ಕಾರ್ಯ ನೆರವೇರಿಸಿ ನಾಮಕರಣ ಮಾಡಿದರು. ಈಶ್ವರಪ್ಪಾ ಮುಂಡಗನೂರ ಪ್ರಾರ್ಥನೆ ಗೀತೆ, ಈರಣ್ಣ ಹಲಗತ್ತಿ ನಿರೂಪಿಸಿ, ವಂದಿಸಿದರು. ಮಹಾಮಂಗಲದೊಂದಿಗೆ ಮಹಾ ಪ್ರಸಾದ ಜರುಗಿತು.ಮುಖಂಡರಾದ ಎಂ.ಆರ್.ತೇರದಾಳ , ಎಂ.ಎಸ್ ಮುಗಳಖೋಡ, ರವಿ ಮುಂಡಗನೂರ, ಮಲ್ಲಪ್ಪ ಹುಣಶ್ಯಾಳ, ಶ್ರೀಮಂತ ಹಳ್ಳಿ, ಚೇತನ ಹುಣಶ್ಯಾಳ, ಶ್ರೀಶೈಲ ಬಿಸನಕೊಪ್ಪ, ಶಿವಾನಂದ ಹುಣಶ್ಯಾಳ, ಈರಪ್ಪ ಜಿಡ್ಡಿಮನಿ, ಅಡಿವೆಪ್ಪ ಹುಣಶ್ಯಾಳ, ಪ್ರಕಾಶ ಮರೆಗುದ್ದಿ, ರಾಜು ಮುಗಳಖೊಡ, ಶಿವರುದ್ರ ಮುಂಡಗನೂರ, ರಾಜೇಂದ್ರ ಮಿರ್ಜಿ, ಕುಬೇರ ಹಟ್ಟಿ, ಶ್ರೀಶೈಲ್ ಕೋಟಿ, ರಾಜು ಚಿಕ್ಕನರಗುಂದ, ಮಲ್ಲಪ್ಪ ಮುದಕಪ್ಪಗೋಳ, ಶಿವಾನಂದ ಬೆಳವಿ, ಹೊಳೆಪ್ಪ ಬಾಡಗಿ, ಈರಪ್ಪ ನಾಗರಾಳ, ಶಂಕರ ಯಾದವಾಡ ಹಲವರಿದ್ದರು.