ಡಿಸೆಂಬರ್ ೮ರಂದು ನಮ್ಮನೆ ಹಬ್ಬದಲ್ಲಿ ಸಾಂಸ್ಕೃತಿಕ ಸಡಗರ

| Published : Nov 30 2024, 12:46 AM IST

ಡಿಸೆಂಬರ್ ೮ರಂದು ನಮ್ಮನೆ ಹಬ್ಬದಲ್ಲಿ ಸಾಂಸ್ಕೃತಿಕ ಸಡಗರ
Share this Article
  • FB
  • TW
  • Linkdin
  • Email

ಸಾರಾಂಶ

ಅಂದು ಸಂಜೆ ೫ರಿಂದ ಇಳಿಹೊತ್ತಿನಲ್ಲಿ ಸಂಗೀತ ಕಾರ್ಯಕ್ರಮವನ್ನು ಗಾಯಕ ರವಿ‌ ಮೂರೂರ ನಡೆಸಿಕೊಡಲಿದ್ದಾರೆ.

ಶಿರಸಿ: ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ೧೩ನೇ ವರ್ಷದ ನಮ್ಮನೆ ಹಬ್ಬ ಡಿ. ೮ರಂದು ಸಂಜೆ ೫ರಿಂದ ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ನಡೆಯಲಿದೆ.ವಿಶ್ವಶಾಂತಿ‌ ಸೇವಾ ಟ್ರಸ್ಟ್ ಕರ್ನಾಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ಗಾನ ಸಂಭ್ರಮ, ಯಕ್ಷರೂಪಕದ ದಶಮಾನೋತ್ಸವ, ನೂತನ ರೂಪಕ ಲೋಕಾರ್ಪಣೆ, ಪ್ರಶಸ್ತಿ‌, ಪುರಸ್ಕಾರ ಪ್ರದಾನ, ಕ್ಯಾಲೆಂಡರ್ ಲೋಕಾರ್ಪಣೆ ನಡೆಯಲಿದೆ. ಈ ಮೂಲಕ ಸಾಂಸ್ಕೃತಿಕ, ಕಲಾ ವೈಭವ ಸಾರುವ ಪ್ರಯತ್ನ ನಡೆಸಲಾಗಿದೆ ಎಂದು‌ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.

ಅಂದು ಸಂಜೆ ೫ರಿಂದ ಇಳಿಹೊತ್ತಿನಲ್ಲಿ ಸಂಗೀತ ಕಾರ್ಯಕ್ರಮವನ್ನು ಗಾಯಕ ರವಿ‌ ಮೂರೂರ ನಡೆಸಿಕೊಡಲಿದ್ದಾರೆ. ಹಾರ್ಮೋನಿಯಂನಲ್ಲಿ ಸತೀಶ ಹೆಗ್ಗಾರು, ತಬಲಾದಲ್ಲಿ ಗಣೇಶ ಗುಂಡ್ಕಲ್ ಸಾತ್‌ ನೀಡಲಿದ್ದಾರೆ. ೬.೧೦ಕ್ಕೆ ವಿಶ್ವಶಾಂತಿ ಸರಣಿಯ ೧೦ನೇ ನೂತನ ಯಕ್ಷ ನೃತ್ಯ ರೂಪಕ ಭಾವ ಸೌಂದರ್ಯದ ದಿವ್ಯದರ್ಶನ ವಿಶ್ವಾಭಿಗಮನಮ್ ಅನಾವರಣಗೊಳ್ಳಲಿದೆ.

ಸಾಹಿತ್ಯವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ‌ ನೀಡಿದ್ದು, ನಿರ್ದೇಶನವನ್ನು ವಿ. ಉಮಾಕಾಂತ ಭಟ್ಟ‌ ಒದಗಿಸಿದ್ದಾರೆ.

ನಮ್ಮನೆ ಹಬ್ಬದ ಉದ್ಘಾಟನೆಯನ್ನು ನಟಿ ಪೂಜಾ ಗಾಂಧಿ ನೆರವೇರಿಸುವರು. ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಪ್ರದಾನ ಮಾಡಲಿದ್ದಾರೆ.

ನಟ ನೀರ್ನಳ್ಳಿ ರಾಮಕೃಷ್ಣ, ಬೆಂಗಳೂರಿನ ಅವಿನಾಶಿ ಸಂಸ್ಥೆ‌ ಮುಖ್ಯಸ್ಥ ಅಣ್ಣಾರಾಯ ತಳವಾರ ಅವರಿಗೆ ನಮ್ಮನೆ ಪ್ರಶಸ್ತಿ, ಧಾರವಾಡದ ಯುವ ಗಾಯಕಿ ಐಶ್ವರ್ಯ ದೇಸಾಯಿ ಅವರಿಗೆ ನಮ್ಮನೆ ಯುವ ಪ್ರಶಸ್ತಿ ಪ್ರದಾನವಾಗಲಿದೆ.

ಅಭ್ಯಾಗತರಾಗಿ ವಿ. ಉಮಾಕಾಂತ ಭಟ್ಟ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ರವೀಂದ್ರ ಭಟ್ಟ ಐನಕೈ ವಹಿಸಿಕೊಳ್ಳಲಿದ್ದಾರೆ. ಇದೇ ವೇಳೆ ೨೦೨೫ರ ನೂತನ ಕ್ಯಾಲೆಂಡರ್ ಕೂಡ ಬಿಡುಗಡೆ ಆಗಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ

ಅಂಕೋಲಾ: ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ ಎಂದು ಪುರಸಭೆಯ ಅಧ್ಯಕ್ಷ ಸೂರಜ್ ನಾಯ್ಕ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಮತ್ತು ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಂಡ ಅಂಕೋಲಾ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ- 2024 ಉದ್ಘಾಟಿಸಿ ಮಾತನಾಡಿದರು.ಪುರಸಭೆಯ ಸದಸ್ಯೆ ಕರುಣಾ ಮಹಾಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ ಎಂದರು.ಪುರಸಭೆಯ ಸದಸ್ಯರಾದ ಶಾಂತಲಾ ನಾಡಕರ್ಣಿ, ತಾರಾ ನಾಯ್ಕ, ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಪಪೂ ಕಾಲೇಜಿನ ಪ್ರಾಚಾರ್ಯೆ ರೇಖಾರಾವ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಯ ನಾಯಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ ನಾಯ್ಕ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪದ್ಮಾ ನಾಯ್ಕ, ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಜಯಾ, ನಾಯಕ ಇದ್ದರು.ಬಿಆರ್‌ಪಿ ಸಮನ್ವಯಾಧಿಕಾರಿ ದೇವರಾಯ ನಾಯಕ ಸ್ವಾಗತಿಸಿದರು. ಕ್ಷೇತ್ರ ಶಿಕ್ಣಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಆರ್‌ಪಿ ಮಂಜುನಾಥ ನಾಯಕ ವಂದಿಸಿದರು.