ಸಾರಾಂಶ
ರಂಗೂಪುರ ಶಿವಕುಮಾರ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬೇಸಿಗೆ ರಜೆ ಆರಂಭವಾಗಿದೆ ಊಟಿ ಪ್ರವಾಸಕ್ಕೆ ಹೋಗ್ಬೇಕು ಎಂದ್ಕೊಂಡಿದ್ರೆ ಏ.೨ ರಂದು ಯಾವುದೇ ಕಾರಣಕ್ಕೂ ಊಟಿಗೆ ಹೋಗ್ಬೇಡಿ, ಒಂದ್ವೇಳೇ ಹೋದ್ರೆ ಪರಿತಪಿಸಬೇಕಾಗುತ್ತೇ? ಇದೇನಪ್ಪ ಕನ್ನಡಪ್ರಭದವ್ರು ಹೀಗೆ ಹೇಳ್ತಾರೆ ಅಂದ್ಕೊಂಡ್ರ, ತಮಿಳುನಾಡಿನ ಹೈಕೋರ್ಟ್ ನೀಲಗಿರಿ ಜಿಲ್ಲೆಗೆ ಇ-ಪಾಸ್ ಕಡ್ಡಾಯ ಮಾಡಿದೆ ಆ ಕಾರಣಕ್ಕೆ ಏ.೨ ರಂದು ನೀಲಗಿರಿ ಜಿಲ್ಲೆ ಸಂಪೂರ್ಣ ಸ್ಥಬ್ದವಾಗಲಿದೆ.
ನೀಲಗಿರಿ ಜಿಲ್ಲೆಯ ವ್ಯಾಪಾರಿಗಳು ಹಾಗೂ ಸಾರ್ವಜನಿಕ ಕಲ್ಯಾಣ ಸಂಘಟನೆಗಳ ಒಕ್ಕೂಟ ಏ.೨ ರಂದು ಬಂದ್‌ಗೆ ಕರೆ ಕೊಟ್ಟಿರುವ ಕಾರಣ ಪ್ರವಾಸಿಗರು ಊಟಿಗೆ ಏ.೨ ರಂದು ಹೋಗಲು ನಿರ್ಧರಿಸಿದ್ದರೆ ಪ್ರವಾಸಿಗರು ಕ್ಯಾನ್ಸಲ್ ಮಾಡ್ಕೊಳ್ಳಿ ಎಂದು ಸಂಘಟಕರು ಕೋರಿದ್ದಾರೆ.ಹೈಕೋರ್ಟ್ ಆದೇಶದಂತೆ ಪ್ರತಿ ನಿತ್ಯ ಆರು ಸಾವಿರ ವಾಹನಗಳಿಗೆ ಅವಕಾಶ ಮಾಡಿ ಕೊಟ್ಟಿದೆ. ಅಲ್ಲದೆ ಇ - ಪಾಸ್ ಕಡ್ಡಾಯಗೊಳಿಸಿರುವ ಕಾರಣ ನೀಲಗಿರಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟಿಕೆ ದಕ್ಕೆಯಾಗಿದೆ ಎಂದು ಸಂಘಟಕ ಬಾದ್ ಷಾ ಹೇಳಿದ್ದಾರೆ.
ಬೇಸಿಗೆ ಆರಂಭವಾಗಿದೆ ಇಂತಹ ಸಮಯದಲ್ಲಿ ಏ.೧ ರಿಂದಲೇ ಇ-ಪಾಸ್ ಕಡ್ಡಾಯವಾದರೆ ವ್ಯಾಪಾರ ವಹಿವಾಟಿಗೆ ಪೆಟ್ಟು ಬೀಳಲಿದೆ. ಅಲ್ಲದೆ ಪ್ರವಾಸೋದ್ಯಮಕ್ಕೂ ಹೊಡೆತ ಬೀಳಲಿದೆ. ಪ್ರತಿ ದಿನ ಊಟಿಗೆ ೨೫ ಸಾವಿರಕ್ಕೂ ಹೆಚ್ಚು ವಾಹನಗಳು ಬರುತ್ತವೆ, ಆರು ಸಾವಿರ ವಾಹನಗಳಿಗೆ ಅವಕಾಶ ಕೊಟ್ಟರೆ ವ್ಯಾಪಾರ ವಹಿವಾಟು ನಂಬಿರುವ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ಪ್ರವಾಸೋದ್ಯಮದಿಂದಲೇ ಜೀವನ ನಡೆಸುವ ಜನರಿಗೆ ತೀವ್ರ ತೊಂದರೆಯಾಗಲಿದೆ ಎಂದು ಸಂಘಟಕ ಫಯಾಜ್ ಹೇಳಿದ್ದಾರೆ.ಈ-ಪಾಸ್ ರದ್ದು ಪಡಿಸಬೇಕು ಎಂದು ನೀಲಗಿರಿ ಜಿಲ್ಲೆಯ ಜನರು ಹಾಗೂ ಪ್ರವಾಸೋದ್ಯಮ ಹಾಗೂ ವ್ಯಾಪಾರ, ವಹಿವಾಟು ನಂಬಿದ ಜನರು ಸ್ವಯಂ ಪ್ರೇರಣೆಯಿಂದ ಏ.೨ ರಂದು ನೀಲಗಿರಿ ಜಿಲ್ಲೆ ಬಂದ್‌ಗೆ ಕರೆ ಕೊಟ್ಟಿದ್ದಾರೆ ಹಾಗಾಗಿ ರಾಜ್ಯದ ಪ್ರವಾಸಿಗರು ಏ.೨ ರಂದು ಊಟಿಗೆ ಹೊರಟಿದ್ದಾರೆ ಒಂದು ದಿನ ಮುಂದೂಡಿ ಎಂಬುದು ಕನ್ನಡಪ್ರಭದ ಕಳಕಳಿ.