ಭಾರತವು ಪೋಲಿಯೋ ಮುಕ್ತವಾಗಿದೆ. ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ಇನ್ನೂ ಭೀತಿಯನ್ನುಂಟು ಮಾಡುತ್ತಿದ್ದು, ನಮ್ಮ ದೇಶದಲ್ಲೂ ಮರಳುವ ಸಾಧ್ಯತೆ ಇದೆ
ಕನ್ನಡಪ್ರಭ ವಾರ್ತೆ ಮೈಸೂರುನಗರದ ರೋಟರಿ ಮೈಸೂರು ಅಂಬಾರಿ ವತಿಯಿಂದ ಪೋಲಿಯೋ ಹನಿ ಹಾಕಲಾಯಿತು.ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ರೋಟರಿ ಮೈಸೂರು ಅಂಬಾರಿ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ವಿ. ಮಂಜುನಾಥ್, ಎಲ್. ಜಗದೀಶ್, ರವಿಚಂದ್ರ ಮತ್ತು ದಾದಿಯರು, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವಾಗಿದೆ. ಭಾರತವು ಪೋಲಿಯೋ ಮುಕ್ತವಾಗಿದೆ. ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ಇನ್ನೂ ಭೀತಿಯನ್ನುಂಟು ಮಾಡುತ್ತಿದ್ದು, ನಮ್ಮ ದೇಶದಲ್ಲೂ ಮರಳುವ ಸಾಧ್ಯತೆ ಇದೆ. ನಿಮ್ಮ ಮಗುವಿಗೆ ಪ್ರತಿ ಬಾರಿ ಎರಡು ಬಾರಿ ಪೋಲಿಯೋ ಹನಿ ಹಾಕಿಸಿ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಿ ಎಂದು ಪಲ್ಸ್ ಪೋಲಿಯೋ ಚೇರ್ಮನ್ ಜಗದೀಶ್ ತಿಳಿಸಿದರು.