ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರನಗರದ ಮಹೇಂದ್ರಗಿರಿ ಕ್ಷೇತ್ರದಲ್ಲಿನ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿಯ ನಿರ್ವಾಣ ಮಹೋತ್ಸವವನ್ನು ಶ್ರವಣಬೆಳಗೋಳದ ಶ್ರೀಮಧ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ 5.30 ರಿಂದ ಮಂಗಲ ವಾದ್ಯ ಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ, ರಥಯಾತ್ರೆ, ಜನಕಲ್ಯಾಣ ಯೋಜನೆಗಳ ಉದ್ಘಾಟನೆ ಭಗವಂತರಿಗೆ ಮಹಾ ಮಸ್ತಾಭಿಷೇಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನಪ್ರಸಾದ ನೆರವೇರಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಮಹೇಂದ್ರಗಿರಿ ಕ್ಷೇತ್ರದಲ್ಲಿನ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿಯ ನಿರ್ವಾಣ ಮಹೋತ್ಸವವನ್ನು ಶ್ರವಣಬೆಳಗೋಳದ ಶ್ರೀಮಧ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ 5.30 ರಿಂದ ಮಂಗಲ ವಾದ್ಯ ಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ, ರಥಯಾತ್ರೆ, ಜನಕಲ್ಯಾಣ ಯೋಜನೆಗಳ ಉದ್ಘಾಟನೆ ಭಗವಂತರಿಗೆ ಮಹಾ ಮಸ್ತಾಭಿಷೇಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನಪ್ರಸಾದ ನೆರವೇರಿತು. ಕೊನೆಯಲ್ಲಿ ನಡೆದ ಧರ್ಮಸಭೆಯಲ್ಲಿ ನಿವೃತ್ತ ನ್ಯಾಯಾಧೀಶ ಸುಭಾಸ ಹೊಸಕಲ್ಲೆ ಹಾಗೂ ಶಿಕ್ಷಣ ಇಲಾಖೆ ನಿವೃತ್ತರಾದ ಬಾಬು ಅನಾಜೆ, ಶಾಂತಿನಾಥ ಶಿವಣ್ಣವರ ಅವರನ್ನು ಸನ್ಮಾನಿಸಲಾಯಿತು. ಧರ್ಮಸಭೆಯಲ್ಲಿ ನ್ಯಾಯಾಧೀಶೆ ಸೌ.ಸ್ಮೀತಾ ಮಾಲಗುಂದಿ, ಲೋಕೇಶ ಹವಲೆ, ರಮೇಶ ಮಹಾಜನ ಹಾಗೂ ಕೆ.ಜೆ.ಎ. ಸದಸ್ಯರಾದ ಪ್ರವೀಣ ಕಾಸಾರ, ಕಾರ್ಯದರ್ಶಿ ಶೀತಲ ಓಗಿ, ಪಾರ್ಶ್ವನಾಥ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಕವಟೇಕರ, ವ್ಯವಸ್ಥಾಪಕ ರವಿ ನಾಗಾವಿ, ಟ್ರಸ್ಟಿಗಳಾದ ಪ್ರಕಾಶ ಚಂಕೇಶ್ವರ, ಸಮಾಜದ ಗಣ್ಯರಾದ ಮಿಲಿಂದ ಪಾಟೀಲ, ಭರಮಣ್ಣ ಶೆಟ್ಟಿ, ಶೀತಲ್ ಪಾಟೀಲ, ಬಾಹುಬಲಿ ಕಡಕೋಳ, ಅಶೋಕ ಬೋಗಾರ, ಚೇತನ ಸಗರೆ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.