ಎನ್‍ಐಟಿಕೆ: ಎಸ್‍ಎಐ ಇಂಡಿಯಾ ಕರಾವಳಿ ಕರ್ನಾಟಕ ವಿಭಾಗ ಉದ್ಘಾಟನೆ

| Published : Oct 10 2024, 02:25 AM IST

ಎನ್‍ಐಟಿಕೆ: ಎಸ್‍ಎಐ ಇಂಡಿಯಾ ಕರಾವಳಿ ಕರ್ನಾಟಕ ವಿಭಾಗ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‍ಐಟಿಕೆ)ಯಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಎಂಜಿನಿಯರಿಂಗ್ ಸಮುದಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸೊಸೈಟಿ ಆಫ್ ಆಟೋಮೇಟಿವ್ ಎಂಜಿನಿಯರ್ಸ್ ಇಂಡಿಯಾ (ಎಸ್‍ಎಇ ಇಂಡಿಯಾ) ಕರಾವಳಿ ಕರ್ನಾಟಕ ವಿಭಾಗವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‍ಐಟಿಕೆ)ಯಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಎಂಜಿನಿಯರಿಂಗ್ ಸಮುದಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸೊಸೈಟಿ ಆಫ್ ಆಟೋಮೇಟಿವ್ ಎಂಜಿನಿಯರ್ಸ್ ಇಂಡಿಯಾ (ಎಸ್‍ಎಇ ಇಂಡಿಯಾ) ಕರಾವಳಿ ಕರ್ನಾಟಕ ವಿಭಾಗವನ್ನು ಉದ್ಘಾಟಿಸಲಾಯಿತು.

ಎನ್‍ಐಟಿಕೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಧಾಕರ್ ಸಿ.ಜಂಬಗಿ ಅವರನ್ನು ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶ್ರೀನಿಧಿ ಮೋಟಾರ್ ವರ್ಕ್ಸ್‌ ಮಾಲೀಕ ಕುಮಾರ್ ಚಂದ್ರ ಉಪಾಧ್ಯಕ್ಷ, ಎಂಐಟಿ- ಮಾಹೆ ಮಣಿಪಾಲದ ಏರೋನಾಟಿಕಲ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ (ಏರೋಸ್ಪೇಸ್) ಡಾ.ಬಲ್ಬೀರ್ ಸಿಂಗ್ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಸದಸ್ಯರಾಗಿ ಎನ್‍ಎಂಎಎಂಐಟಿ ನಿಟ್ಟೆಯ ರೊಬೊಟಿಕ್ಸ್ ಮತ್ತು ಎಐ ಮುಖ್ಯಸ್ಥ ಡಾ.ಮುರಳೀಧರ, ಮೂಡುಬಿದಿರೆ ಎಂಐಟಿಇ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಡಾ.ಸಿ.ಆರ್. ರಾಜಶೇಖರ್, ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಮತ್ತು ರೊಬೊಟಿಕ್ಸ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ರತೀಶ್ಚಂದ್ರ ಆರ್.ಗಟ್ಟಿ,

ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪರ ಸುವರ್ಣ, ಸಿಐಐ ಮಂಗಳೂರು ವಿಭಾಗ ಅಧ್ಯಕ್ಷ ಅಜಿತ್ ಕಾಮತ್, ದುರ್ಗಾ ಗ್ರೂಪ್‌ ಆಫ್‌ ಕಂಪನೀಸ್‌ ಪಾಲುದಾರ ಉದಯ್ ಕುಮಾರ್, ಅದಾನಿ ಪವರ್‌ನ ಪರಿಸರ ಮುಖ್ಯಸ್ಥ ಡಾ.ಸುನೀಲ್ ನಾಯ್ಕ್ ಕಾರ್ಯ ನಿರ್ವಹಿಸಲಿದ್ದಾರೆ.

ಎನ್‍ಎಂಎಎಂಐಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮಾಜಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಮತ್ತು ಡೆಂಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಡಾ.ಶಶಿಕಾಂತ ಕಾರಿಂಕಾ ಅವರನ್ನು ವಿಭಾಗದ ಸಲಹೆಗಾರರನ್ನಾಗಿ ನೇಮಿಸಲಾಗಿದೆ.