ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಬಳಿ ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ನಡೆಸುವ ಬದಲು ಸರ್ಕಾರ ಕೆರೆ, ಕಟ್ಟೆ ನಾಲೆಗಳ ಅಭಿವೃದ್ಧಿಪಡಿಸಲಿ ಎಂದು ಸಾಹಿತಿ ಮಜ್ಜಿಗೆಪುರ ಶಿವರಾಮು ಒತ್ತಾಯಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಜೀವನಾಡಿ ಕಾವೇರಿ ತುಂಬಿ ಹರಿದು ಕಟ್ಟೆ ತುಂಬಿದರೆ ಅಷ್ಟೇ ರೈತರ ಹೊಟ್ಟೆ ತುಂಬುವುದು ಎಂಬ ವಾಡಿಕೆಯಂತೆ ಮೈಸೂರಿನ ದೊರೆ, ಮರೆಯಲಾಗದ ಮಹಾ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಕನಸಿನ ಕೂಸು ಕನ್ನಂಬಾಡಿ ಅಣೆಕಟ್ಟೆಯಾಗಿದೆ ಎಂದು ತಿಳಿಸಿದ್ದಾರೆ. ಬರಡಾಗಿದ್ದ ಮಂಡ್ಯ ಭೂಮಿಯಲ್ಲಿ ಹಸಿರು ಉಸಿರಾಡುವಂತೆ ಮಾಡಿ ಕೃಷಿ ಭೂಮಿಗೆ ನೀರನ್ನು ಒದಗಿಸುವ ಜೊತೆಗೆ ಪಕ್ಕದ ಮೈಸೂರಿಗೆ ಕುಡಿಯುವ ನೀರನ್ನು ಒದಗಿಸಲಾಗಿದ್ದು, ಆದರೆ, ಅಲ್ಲಿ ಡಿಸ್ನಿಲ್ಯಾಂಡ್, ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಮಾಡಬೇಕು ಎಂಬ ಇಲ್ಲಸಲ್ಲದ ಅರ್ಥ ವಿಲ್ಲದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರ ಬಹಳ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
92 ಕೋಟಿ ರು. ವೆಚ್ಚದಲ್ಲಿ ಕಾವೇರಿ ಆರತಿ ಮಾಡುವ ಅನಿವಾರ್ಯವಾದರೂ ಏನು? ಅದರ ಬದಲು ಜಿಲ್ಲೆಯ ಕೆರೆ- ಕಟ್ಟೆ, ಕಾಲುವೆಗಳನ್ನು ನವೀಕರಣ ಮಾಡುವುದು, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ನೀರು ಕುಡಿಯುವ ನೀರಿನ ವ್ಯವಸ್ಥೆ, ಸುಲಭವಾಗಿ ಕೃಷಿ ಭೂಮಿಯ ಕೊನೆ ಹಂತದವರೆಗೂ ನೀರು ಸುಗಮವಾಗಿ ಹರಿಯುವಂತೆ ಮಾಡುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.ಸೋಪಾನ ಕಟ್ಟೆಗಳು, ಜಾನುವಾರುಗಳಿಗೆ ಕುಡಿಯುವ ತೊಟ್ಟಿಗಳು, ಕೃಷಿಗೆ ಸಕಾಲಕ್ಕೆ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು, ಎಲ್ಲಕ್ಕಿಂತ ಹೆಚ್ಚಾಗಿ ಕಂದಾಯ ಗ್ರಾಮವಾಗಿ ರೂಪುಗೊಂಡ ಕೃಷ್ಣರಾಜ ಸಾಗರ ಗ್ರಾಮವನ್ನು ಆಧುನೀಕರಣ ಗೊಳಿಸಬೇಕು ಎಂದು ಶಿವರಾಮು ಸರ್ಕಾರವನ್ನು ಒತ್ತಾಯಿಸಿದ್ದಾರೆ.
;Resize=(128,128))
;Resize=(128,128))