ಹರಿಹರ ಜಾತ್ರೆಯಲ್ಲಿ ಪ್ರಾಣಿಬಲಿ ಬೇಡ: ದಯಾನಂದ ಶ್ರೀ ಮನವಿ

| Published : Feb 18 2025, 12:31 AM IST

ಹರಿಹರ ಜಾತ್ರೆಯಲ್ಲಿ ಪ್ರಾಣಿಬಲಿ ಬೇಡ: ದಯಾನಂದ ಶ್ರೀ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಜಾತ್ರೆ ಮಾ.18ರಿಂದ 22ರವರೆಗೆ ನಡೆಯಲಿದ್ದು, ಜಾತ್ರೆಯಲ್ಲಿ ದೇವರು, ಧರ್ಮದ ಹೆಸರಿನಲ್ಲಿ ಹರಕೆ ರೂಪದಲ್ಲಿ ಕೋಣ, ಕುರಿ, ಕೋಳಿ, ಆಡು ಮತ್ತಿತರೆ ಪ್ರಾಣಿಗಳ ಬಲಿ ನಡೆಯುತ್ತದೆ. ಇದಕ್ಕೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಬಸವ ಧರ್ಮ ಜ್ಞಾನ ಪೀಠ ಮತ್ತು ಪಶು-ಪ್ರಾಣಿ ಬಲಿ ನಿರ್ಮೂಲನ ಮಹಾಸಂಘ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಜಾತ್ರೆ ಮಾ.18ರಿಂದ 22ರವರೆಗೆ ನಡೆಯಲಿದ್ದು, ಜಾತ್ರೆಯಲ್ಲಿ ದೇವರು, ಧರ್ಮದ ಹೆಸರಿನಲ್ಲಿ ಹರಕೆ ರೂಪದಲ್ಲಿ ಕೋಣ, ಕುರಿ, ಕೋಳಿ, ಆಡು ಮತ್ತಿತರೆ ಪ್ರಾಣಿಗಳ ಬಲಿ ನಡೆಯುತ್ತದೆ. ಇದಕ್ಕೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಬಸವ ಧರ್ಮ ಜ್ಞಾನ ಪೀಠ ಮತ್ತು ಪಶು-ಪ್ರಾಣಿ ಬಲಿ ನಿರ್ಮೂಲನ ಮಹಾಸಂಘ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಕೆ ರೂಪದಲ್ಲಿ ಯಾವುದೇ ಪ್ರಾಣಿಬಲಿ ಆಗಬಾರದು. ಈ ಬಗ್ಗೆ ಇಂದಿನಿಂದ ಒಂದು ವಾರ ಕಾಲ ಹರಿಹರ ಸುತ್ತಮುತ್ತಲ ಊರುಗಳಲ್ಲಿ ಅಹಿಂಸಾ ಪ್ರಾಣಿ ದಯಾ ಸಂದೇಶ ಯಾತ್ರೆ ಕೈಗೊಳ್ಳುತ್ತಿದ್ದೇವೆ. ಭಕ್ತರು, ಸಮಾಜ, ದೇವಾಲಯ ಆಡಳಿತ ಮಂಡಳಿ ಹಾಗೂ ಸರ್ಕಾರ ಈ ವಿಚಾರದ ಬಗ್ಗೆ ಅಗತ್ಯ ಗಮನಹರಿಸಬೇಕು ಎಂದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಮತ್ತು ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ, ಐಜಿ, ದಾವಣಗೆರೆ ಡಿಸಿ, ಎಸ್ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಖುದ್ದಾಗಿ ಜಾತ್ರಾ ಸ್ಥಳಗಳಿಗೆ ತೆರಳಿ ಪ್ರಾಣಿಬಲಿ ಮಾಡದಂತೆ ಮನವಿ ಮಾಡುತ್ತೇವೆ. ಪ್ರಾಣಿಬಲಿಯನ್ನು ಸಂಬಂಧಿಸಿದ ಇಲಾಖೆ, ಕಾನೂನು, ಹೈ ಕೋರ್ಟ್ ಆದೇಶಗಳಡಿ ಸಂಪೂರ್ಣ ತಡೆಗಟ್ಟಬೇಕು. ಪ್ರಾಣಿಗಳನ್ನು ಜಾತ್ರಾ ಪರಿಸರಕ್ಕೆ ಬಾರದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಸರ್ಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸ್ವಾಮೀಜಿ ಮನವಿ ಮಾಡಿದರು.

- - - -17ಕೆಡಿವಿಜಿ6.ಜೆಪಿಜಿ:

ಶ್ರೀ ದಯಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.