ಬಿಡದಿಯಲ್ಲಿ ಗೂಂಡಾಗಿರಿ ಅಲ್ಲ, ಎಫೆಕ್ಟೆಡ್ ಪರ್ಸನ್ ಗಲಾಟೆ ಮಾಡಿದ್ದಾರೆ. ಅದಕ್ಕೂ ಮುಖ್ಯಮಂತ್ರಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಜಾರಕಿಹೊಳಿ ಗೂಂಡಾಗಿರಿ ಮಾಡಿ ಬಿಡದಿ ಟೌನ್ ಶಿಪ್ ಮಾಡಲು ಸಾಧ್ಯವಿಲ್ಲವೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆ: ಬಿಡದಿಯಲ್ಲಿ ಗೂಂಡಾಗಿರಿ ಅಲ್ಲ, ಎಫೆಕ್ಟೆಡ್ ಪರ್ಸನ್ ಗಲಾಟೆ ಮಾಡಿದ್ದಾರೆ. ಅದಕ್ಕೂ ಮುಖ್ಯಮಂತ್ರಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಜಾರಕಿಹೊಳಿ ಗೂಂಡಾಗಿರಿ ಮಾಡಿ ಬಿಡದಿ ಟೌನ್ ಶಿಪ್ ಮಾಡಲು ಸಾಧ್ಯವಿಲ್ಲವೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಹರಿಹರದ ತಾಲೂಕಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ವಿಚಾರವಾಗಿ ಸ್ಥಳೀಯ ಮಟ್ಟದಲ್ಲಿ ಪೊಲೀಸರು, ಅಲ್ಲಿನ ಜಿಲ್ಲಾಡಳಿತ ನೋಡಿಕೊಳ್ಳುತ್ತವೆ. ಅಲ್ಲಿ ಯಾರೂ ಗೂಂಡಾಗಿರಿ ಮಾಡುತ್ತಿಲ್ಲ. ಯಾರಿಗೆ ತೊಂದರೆ ಆಗುತ್ತದೆನ್ನುವ ರೈತರಿದ್ದಾರೋ ಅಂತಹವರು ಗಲಾಟೆ ಮಾಡಿದ್ದಾರಷ್ಟೇ ಎಂದರು.ಟೌನ್ ಶಿಪ್‌ಗಾಗಿ ಬಿಡದಿಯಲ್ಲಿ ಕೆಲವರು ಜಮೀನು ಕೊಡುತ್ತಿದ್ದಾರೆ. ಮತ್ತೆ ಕೆಲವರು ಕೊಡುತ್ತಿಲ್ಲ. ಯಾರು ಭೂಮಿ ಕೊಡುತ್ತಿದ್ದಾರೋ ಅಂತಹವರ ಭೂಮಿಯನ್ನು ಅಳೆಯುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸ್ವಯಂಪ್ರೇರಿತರಾಗಿ ಭೂಮಿ ನೀಡಿದಂತಹ ಜಮೀನುಗಳನ್ನು ಮಾತ್ರವೇ ಅಳೆಯುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮಳೆ ಕೈ ಕೊಟ್ಟಿದ್ದರಿಂದ ಬರಪೀಡಿತ ತಾಲೂಕು ಘೋಷಣೆಗೆ ವಿಪಕ್ಷಗಳು ಸೇರಿದಂತೆ ಅನೇಕ ಕಡೆ ಒತ್ತಾಯಿಸುತ್ತಿದ್ದಾರೆ. ಯಾವುದೇ ತಾಲೂಕು, ಜಿಲ್ಲೆಯನ್ನು ಬರಪೀಡಿತವೆಂದು ಘೋಷಣೆ ಮಾಡಬೇಕಿದ್ರೆ ಅದಕ್ಕಾಗಿಯೇ ಕೇಂದ್ರ, ರಾಜ್ಯ ಸರ್ಕಾರಗಳಿಂದ ನಿಯಮಾವಳಿ ಇದೆ. ನೋಡೋಣ ಆದಷ್ಟು ಬೇಗನೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.ಬೆಳಗಾವಿ ಜಿಲ್ಲೆಗೆ ಸಂಪುಟದಲ್ಲಿ ಹೆಚ್ಚು ಸ್ಥಾನಕ್ಕೆ ಡಿಮ್ಯಾಂಡ್ ಮಾಡುತ್ತೇವೆ. ಸಂಪುಟ ವಿಸ್ತರಣೆಯಲ್ಲಿ ನಮ್ಮ ಜಿಲ್ಲೆಗೆ ಹೆಚ್ಚಿನ ಸ್ಥಾನ ನೀಡಬೇಕಾಗುತ್ತದೆ. ತಮ್ಮದು ಅತಿ ದೊಡ್ಡ ಜಿಲ್ಲೆಯಾಗಿದೆ. ಹಾಗಾಗಿ, ಹೆಚ್ಚು ಸಚಿವ ಸ್ಥಾನಗಳನ್ನು ನೀಡಲಿ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು ಎಂದು ಸಚಿವ ಸತೀಶ್ ಹೇಳಿದರು.
ಉತ್ತರ ಕರ್ನಾಟಕದಲ್ಲಿ ತಾವೊಬ್ಬರೇ ಅಲ್ಪಸಂಖ್ಯಾತರ ಸಚಿವ ಎಂಬುದಾಗಿ ಆಸೀಫ್ ಸೇಠ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ಆಶೀಫ್ ಸೇಠ್ ಸಚಿವ ಸ್ಥಾನ ಕೇಳುವುದರಲ್ಲಿ ಏನೂ ತಪ್ಪಿಲ್ಲ ಎಂದು ಪ್ರತಿಕ್ರಿಯಿಸಿದರು.- - -
(-ಫೋಟೋ: ಸತೀಶ ಜಾರಕಿಹೊಳಿ)