ಸಾರಾಂಶ
ನಗರದ ನ್ಯೂ ಕೆಎಚ್‌ಬಿ ಕಾಲೋನಿ, ಬಂಡೇಮಠ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ.
ಕೆಂಗೇರಿ: ನಗರದ ನ್ಯೂ ಕೆಎಚ್‌ಬಿ ಕಾಲೋನಿ, ಬಂಡೇಮಠ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ.
ಬಂಡೇಮಠದ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕೆಲಸ ನಡೆಯಲಿರುವ ಹಿನ್ನೆಲೆಯಲ್ಲಿ ನ್ಯೂ ಕೆಎಚ್‌ಬಿ ಕಾಲೋನಿ, ಬಂಡೇಮಠ, ಕೆಎಸ್‌ಟಿ, ಕೆಎಚ್‌ಬಿ, ಅರುಂಧತಿ ನಗರ, ಶಿರ್ಕೆ, ಹೊಯ್ಸಳ ಸರ್ಕಲ್, ವಲಗೇರಹಳ್ಳಿ, ಚಿಕ್ಕನಹಳ್ಳಿ, ಗಾಂಧಿನಗರ, ಹುಣಸೇಮರದ ಪಾಳ್ಯ, ಬೈರೋಹಳ್ಳಿ, ಅರ್ಚಕರ ಲೇಔಟ್, ಹೊಪಾಳ್ಯ, ಚಲ್ಲಘಟ್ಟ, ಬೆಟ್ಟನಪಾಳ್ಯ, ರಾಮೋಹಳ್ಳಿ, ಮಾಲಿಗೊಂಡನಹಳ್ಳಿ, ಗೇರುಪಾಳ್ಯ, ಕೈಗಾರಿಕಾ ಪ್ರದೇಶ, ಕೊಮ್ಮಘಟ್ಟ, ಸೂಲಿಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (ಬೆಸ್ಕಾಂ) ಪಶ್ವಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ನಾರಾಯಣ ಸ್ವಾಮಿ ಪ್ರಕಟಣೆಯಲ್ಲಿ ತಿಳಿದ್ದಾರೆ.