ಕೊಟ್ಟ ಅರ್ಜಿಗಳಿಗೆ ಉತ್ತರವಿಲ್ಲ, ಜನಸ್ಪಂದನದಿಂದ ಲಾಭವೇನು?

| Published : Jun 27 2024, 01:10 AM IST

ಕೊಟ್ಟ ಅರ್ಜಿಗಳಿಗೆ ಉತ್ತರವಿಲ್ಲ, ಜನಸ್ಪಂದನದಿಂದ ಲಾಭವೇನು?
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ನೇಕಾರರು ಮೂಲಭೂತ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಸಾಕಷ್ಟು ಅರ್ಜಿಗಳನ್ನು ನೀಡಿದ್ದಾರೆ. ಈ ಬಗ್ಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ೧೪ ತಿಂಗಳಿಂದ ವಿದ್ಯುತ್ ಬಿಲ್ ನೀಡಿಲ್ಲ. ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ಅದು ಕ್ಲೀಯರ್‌ ಆಗಿಲ್. ಡಚ್ ಯೋಜನೆಯಡಿ ಮನೆಗಳಿಗೆ ಉತಾರಗಳಿಲ್ಲ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿದ್ದರೂ ಸ್ಪಂದಿಸಿಲ್ಲ. ಈ ಜನ ಸ್ಪಂದನ ಕಾರ್ಯಕ್ರಮದಿಂದ ಲಾಭವೇನು? ಎಂದು ನೇಕಾರರು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನೇಕಾರರು ಮೂಲಭೂತ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಸಾಕಷ್ಟು ಅರ್ಜಿಗಳನ್ನು ನೀಡಿದ್ದಾರೆ. ಈ ಬಗ್ಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ೧೪ ತಿಂಗಳಿಂದ ವಿದ್ಯುತ್ ಬಿಲ್ ನೀಡಿಲ್ಲ. ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ಅದು ಕ್ಲೀಯರ್‌ ಆಗಿಲ್. ಡಚ್ ಯೋಜನೆಯಡಿ ಮನೆಗಳಿಗೆ ಉತಾರಗಳಿಲ್ಲ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿದ್ದರೂ ಸ್ಪಂದಿಸಿಲ್ಲ. ಈ ಜನ ಸ್ಪಂದನ ಕಾರ್ಯಕ್ರಮದಿಂದ ಲಾಭವೇನು? ಎಂದು ನೇಕಾರರು ಪ್ರಶ್ನಿಸಿದರು.

ತಾಲೂಕಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ಮಂಗಳವಾರ ತಹಸೀಲ್ದಾರ್‌ ಕಚೇರಿಯಲ್ಲಿ ನಡೆಯಿತು. ಈ ವೇಳೆ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ಸೇರಿದಂತೆ ಕೈಮಗ್ಗ ನೇಕಾರರು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರ ಮುಂದೆ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಡಿಸಿ ಮುಂದೆ ನಾಗರಿಕರು ಅಳಲು

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಲ್ಲ ದಾಖಲೆಗಳ ಕುರಿತು ಆಯಾ ಇಲಾಖೆಗಳಿಗೆ ಸೂಚನೆ ನೀಡಿದ್ದು, ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಂತರ ತಹಸೀಲ್ದಾರ್‌ ಕಚೇರಿಯಲ್ಲಿ ಸಾರ್ವಜನಿಕ ಕುಂದು-ಕೊರತೆಗಳ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ, ಭೂ ವಿವಾದ, ಗೃಹಲಕ್ಷ್ಮೀ, ಮಾಸಾಶನ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಆಯಾ ಇಲಾಖೆಗಳಿಗೆ ಅರ್ಜಿ ವಿಲೇವಾರಿ ಮಾಡಿದರು. ಈ ವೇಳೆ ಹಿಂದೂ ರುದ್ರಭೂಮಿ ಅಭಿವೃದ್ಧಿ, ರಸ್ತೆ ವಿಭಜಕ, ತಾಲೂಕ ಕಚೇರಿ ಪೂರ್ಣ ಪ್ರಮಾಣದಲ್ಲಿ ನಿರ್ವಹಣೆಯಾಗಬೇಕು, ಉಪನೋಂದಣಿ ಇಲಾಖೆ, ಸಮುದಾಯ ಆಸ್ಪತ್ರೆ ಮೇಲ್ದರ್ಜಗೆ ಏರಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅರ್ಜಿ ಗಮನ ಸೆಳೆದವು.

ರಬಕವಿಗೆ ಬೇಕು ಪೊಲೀಸ್‌ ಠಾಣೆ

ರಬಕವಿ ನಗರದಲ್ಲಿ 23 ಸಾವಿರ ಜನಸಂಖ್ಯೆ ದಾಟಿದ್ದರೂ ಹಲವು ದಶಕಗಳ ಬೇಡಿಕೆಯಾಗಿರುವ ಪ್ರತ್ಯೇಕ ಪೊಲೀಸ್‌ ಠಾಣೆ ನಗರಕ್ಕೆ ಮಂಜೂರಾಗಿಲ್ಲ. ಯಾವುದೇ ಚಿಕ್ಕಪುಟ್ಟ ವ್ಯಾಜ್ಯಗಳಿಗೂ ೮ ಕಿಮೀ ದೂರದ ತೇರದಾಳಕ್ಕೆ ತೆರಳಬೇಕು. ದುರಡಿಯವರು ಪೊಲೀಸ್‌ ಠಾಣೆಗೆ ನೀಡಿದ ಜಾಗೆಯಲ್ಲಿ ಪ್ರತ್ಯೇಕ ಠಾಣೆ ನಿರ್ಮಿಸಿ. ಇಲ್ಲವೇ ೧ ಕಿಮೀ ಕೂಗಳತೆಯಲ್ಲಿರುವ ಬನಹಟ್ಟಿ ಪೊಲೀಸ್‌ ಠಾಣೆಗೆ ರಬಕವಿ ನಗರವನ್ನು ಸೇರ್ಪಡೆಗೊಳಿಸಿ ಎಂದು ನಗರಾಧ್ಯಕ್ಷ ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಗಿರೀಶ ಮುತ್ತೂರ, ಬಸವರಾಜ ತೆಗ್ಗಿ, ಮಹೇಶ ಭಿಲವಡಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿತು.

ನಗರದಲ್ಲಿ ವಾಹನ ದಟ್ಟನೆ ಹೆಚ್ಚುತ್ತಿದ್ದು ಶಾಲಾ ಮಕ್ಕಳು, ವೃದ್ಧರು ಸಂಚಾರಕ್ಕೆ ತೊಂದರೆ ಪಡುತ್ತಿದ್ದಾರೆ. ರಸ್ತೆಗಳು ಅತಿಕ್ರಮಣಗೊಂಡು ರಬಕವಿಯಲ್ಲಿ ಸಂಚಾರವೇ ಸಂಚಕಾರವಾಗಿದೆ. ಸಂಚಾರ ದಟ್ಟನೆ ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಈ ಬಗ್ಗೆ ಜೂ.3 ರಂದು ವರದಿ ಮಾಡಿದ್ದ ಕನ್ನಡಪ್ರಭ ಪತ್ರಿಕೆಯ ವರದಿಯನ್ನು ಲಗತ್ತಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರವೀಂದ್ರ ಕಾಮಗೌಡ, ತಹಸೀಲ್ದಾರ್‌ ಗಿರೀಶ ಸ್ವಾದಿ, ಪೌರಾಯುಕ್ತ ಜಗದೀಶ ಈಟಿ, ಗ್ರೇಡ್-೨ ತಹಸೀಲ್ದಾರ್‌ ಎಸ್.ಬಿ.ಕಾಂಬಳೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

-------------------------------------------ಬಾಕ್ಸ್‌ಕಾದು ಸುಸ್ತಾದ ಶಾಸಕ ಸಿದ್ದು ಸವದಿ

ಮಧ್ಯಾಹ್ನ ೨.೩೦ಕ್ಕೆ ನಡೆಯಬೇಕಿದ್ದ ಜನಸ್ಪಂದನ ಕಾರ್ಯಕ್ರಮವು ಜಿಲ್ಲಾಧಿಕಾರಿಗಳು ನಿಗದಿತ ಸಮಯಕ್ಕೆ ಬಾರದ ಹಿನ್ನಲೆಯಲ್ಲಿ ೪ ಗಂಟೆಯಾದರೂ ಆರಂಭವಾಗಲಿಲ್ಲ. ಸಮಯ ಮೀರಿದ್ದರಿಂದ ಮತ್ತು ಜಿಲ್ಲಾಧಿಕಾರಿ ಆಗಮಿಸದ ಕಾರಣ ಶಾಸಕ ಸಿದ್ದು ಸವದಿ ಕಾಯ್ದ ಕಾಯ್ದು ಸುಸ್ತಾದವರು. ಬಳಿಕ, ಗರಂ ಆಗಿ ತೆರಳುವ ಸಂದರ್ಭದಲ್ಲೇ ಜಿಲ್ಲಾಧಿಕಾರಿಗಳು ಆಗಮಿಸಿದರು. ಅಲ್ಲದೇ, ನೇರ ಜನಸ್ಪಂದನ ಸ್ಥಳಕ್ಕೆ ಆಗಮಿಸದೆ ಶಾಸಕರನ್ನು ಮಾತನಾಡಿದಸೇ ಜನರ ಬಳಿ ತೆರಳಿ ಅಹವಾಲು ಆಲಿಸಲು ಮುಂದಾದರು. ಇದರಿಂದ ಮತ್ತಷ್ಟು ಕೆರಳಿದ ತೇರದಾಳ ಶಾಸಕ ಸಿದ್ದು ಸವದಿ ಮುನಿಸಿಕೊಂಡು ಸ್ಥಳದಿಂದ ತೆರಳಿದ ಘಟನೆ ಕೂಡ ನಡೆಯಿತು.