ಎಲೆಕ್ಟ್ರಿಕ್‌ ವಾಹನಕ್ಕೆ ತೆರಿಗೆ ಇಲ್ಲ: ಸರ್ಕಾರ

| Published : Dec 14 2023, 01:30 AM IST

ಎಲೆಕ್ಟ್ರಿಕ್‌ ವಾಹನಕ್ಕೆ ತೆರಿಗೆ ಇಲ್ಲ: ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಕ್ಟ್ರಿಕ್, ವಾಣಿಜ್ಯ ಮತ್ತು ಹಳದಿ ಫಲಕದ ವಾಹನಗಳನ್ನು ಹೊರತುಪಡಿಸಿ ನೂತನ ವಾಹನಗಳಿಗೆ ಜೀವಮಾನ ತೆರಿಗೆ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕವೂ ಬುಧವಾರ ಸದನದಲ್ಲಿ ಅಂಗೀಕಾರಗೊಂಡಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆಎಲೆಕ್ಟ್ರಿಕ್, ವಾಣಿಜ್ಯ ಮತ್ತು ಹಳದಿ ಫಲಕದ ವಾಹನಗಳನ್ನು ಹೊರತುಪಡಿಸಿ ನೂತನ ವಾಹನಗಳಿಗೆ ಜೀವಮಾನ ತೆರಿಗೆ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕವೂ ಬುಧವಾರ ಸದನದಲ್ಲಿ ಅಂಗೀಕಾರಗೊಂಡಿತು. ಬುಧವಾರ ಸಚಿವ ರಾಮಲಿಂಗಾರೆಡ್ಡಿ ಈ ವಿಧೇಯಕವನ್ನು ಮಂಡಿಸಿದರು. ಎಲೆಕ್ಟ್ರಿಕ್‌ ವಾಹನಗಳಿಗೆ ತೆರಿಗೆ ವಿಧಿಸಬಾರದು. ಅವುಗಳಿಗೆ ಸಬ್ಸಿಡಿ ನೀಡಬೇಕು ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯ ಆರ್‌.ವಿ.ದೇಶಪಾಂಡೆ ಕೂಡ ಇದಕ್ಕೆ ಬೆಂಬಲಿಸಿ ಎಲೆಕ್ಟ್ರಿಕ್‌ ವಾಹನಗಳಿಗೆ ತೆರಿಗೆ ಹಾಕಬಾರದು ಎಂದು ಸಲಹೆ ಮಾಡಿದರು.ಹೀಗಾಗಿ ಸಚಿವ ರಾಮಲಿಂಗಾರೆಡ್ಡಿ ಅದನ್ನು ತಿದ್ದುಪಡಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕವಷ್ಟೇ ಅದಕ್ಕೆ ಅಂಗೀಕಾರವಾಯಿತು.