ಜಗತ್ತಿನಲ್ಲಿ ಜ್ಞಾನದ ಮುಂದೆ ಯಾವುದೂ ಮುಖ್ಯವಲ್ಲ

| Published : Feb 04 2025, 12:32 AM IST

ಸಾರಾಂಶ

ಜಗತ್ತಿನಲ್ಲಿ ಜ್ಞಾನದ ಮುಂದೆ ಯಾವುದೂ ಕೂಡ ಮುಖ್ಯವಾಗಲಾರದು. ಜ್ಞಾನಮಾರ್ಗದಲ್ಲಿ ಸಾಗಿದರೆ ಬದುಕು ಉಜ್ವಲವಾಗುತ್ತದೆ ಎಂದು ಹಾಸನ ಎವಿಕೆ ಕಾಲೇಜು ಪ್ರಾಂಶುಪಾಲ ಡಾ. ಎಸ್. ಸಿ. ಯತೀಶ್ವರ್‌ ತಿಳಿಸಿದರು. ಋಷಿಮುನಿಗಳ ಕಾಲದಿಂದಲೂ ಭಾರತ ದೇಶದ ಜ್ಞಾನದ ಶಕ್ತಿ ಜಗತ್ತಿಗೆ ತಿಳಿದಿದೆ. ನಿತ್ಯ ಏಕಾಗ್ರತೆಯಿಂದ ಸ್ವಲ್ಪ ಸಮಯ ಧ್ಯಾನ ಮಾಡಿ ಜ್ಞಾನ ಸಂಪಾದಿಸಿಕೊಳ್ಳಿ ಶಿಕ್ಷಣದ ಮಹತ್ವ ಉನ್ನತಿಯಾಗಲು ಸಾಧ್ಯವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಜಗತ್ತಿನಲ್ಲಿ ಜ್ಞಾನದ ಮುಂದೆ ಯಾವುದೂ ಕೂಡ ಮುಖ್ಯವಾಗಲಾರದು. ಜ್ಞಾನಮಾರ್ಗದಲ್ಲಿ ಸಾಗಿದರೆ ಬದುಕು ಉಜ್ವಲವಾಗುತ್ತದೆ ಎಂದು ಹಾಸನ ಎವಿಕೆ ಕಾಲೇಜು ಪ್ರಾಂಶುಪಾಲ ಡಾ. ಎಸ್. ಸಿ. ಯತೀಶ್ವರ್‌ ತಿಳಿಸಿದರು.

ನುಗ್ಗೇಹಳ್ಳಿ ಪಿ. ಎಚ್. ದೇಶಪಾಂಡೆ ಪಬ್ಲಿಕ್ ಶಾಲೆಯ 15ನೇ ವರ್ಷದ ಹೊಯ್ಸಳ ಉತ್ಸವದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಋಷಿಮುನಿಗಳ ಕಾಲದಿಂದಲೂ ಭಾರತ ದೇಶದ ಜ್ಞಾನದ ಶಕ್ತಿ ಜಗತ್ತಿಗೆ ತಿಳಿದಿದೆ. ನಿತ್ಯ ಏಕಾಗ್ರತೆಯಿಂದ ಸ್ವಲ್ಪ ಸಮಯ ಧ್ಯಾನ ಮಾಡಿ ಜ್ಞಾನ ಸಂಪಾದಿಸಿಕೊಳ್ಳಿ ಶಿಕ್ಷಣದ ಮಹತ್ವ ಉನ್ನತಿಯಾಗಲು ಸಾಧ್ಯವಾಗುತ್ತದೆ ಎಂದರು.

ಇಂದಿನ ಮಕ್ಕಳಿಗೆ ಮೂಲಜ್ಞಾನದ ಪರಂಪರೆ ಬಿಟ್ಟು ಬೇರೊಂದು ಜ್ಞಾನದ ಪರಂಪರೆ ಕಡೆ ಕರೆದೊಯ್ಯುತ್ತಿದ್ದೇವೆ. ಆ ದೃಷ್ಟಿಯಿಂದ ಕರುಣೆ, ಪ್ರೀತಿ, ಅನುಕಂಪ, ಸೌಹಾರ್ದತೆ, ಸಂಸ್ಕಾರ, ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿದೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸುವುದು ಮುಖ್ಯವಾಗಿದೆ ಎಂದರು.

ಹುಟ್ಟು ಹಬ್ಬದ ಸಂದರ್ಭಗಳಲ್ಲಿ ಮೇಣದಬತ್ತಿ ಹಚ್ಚಿ ಆರಿಸುವುದು ಭಾರತೀಯ ಸಂಸ್ಕೃತಿಯಲ್ಲ, ಬದಲಾಗಿ ದೀಪ ಜ್ಯೋತಿ ಬೆಳಗಿಸಿ ಸಾಧ್ಯವಾದರೆ ನಿಮ್ಮ ಭೂಮಿಯಲ್ಲಿ ಒಂದು ಗಿಡ ನೆಟ್ಟು ಬೆಳೆಸಿದರೆ ಪರಿಸರಕ್ಕೆ ಕೊಡುಗೆಯಾಗುತ್ತದೆ ಸಮಾಜಕ್ಕೆ ರಾಷ್ಟ್ರಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ದೀಪ ಮಾತನಾಡಿ, ಸಾಧ್ಯವಾದಷ್ಟು ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಷ್ಟು ಬೇಕೋ ಅಷ್ಟಿದ್ದರೆ ಸಾಕು, ಧಾರಾವಾಹಿ ಟಿವಿ ನೋಡುವುದರಿಂದ ಓದಿನ ಕಡೆ ಗಮನ ಕಡಿಮೆಯಾಗುತ್ತದೆ ಎಂದು ಪೋಷಕರನ್ನು ಎಚ್ಚರಿಸಿದರು.

ಸಮಾರಂಭದಲ್ಲಿ ದೇಶಪಾಂಡೆ ಪಬ್ಲಿಕ್ ಶಾಲಾ ಕಾರ್ಯದರ್ಶಿ ಶಶಿಕಲಾ ಮಂಜುನಾಥ್, ಅನಿಲ್, ಕರಿಯಪ್ಪ ಗೌಡ, ಎಸ್. ಶ್ರೀಕಾಂತ್, ಮಂಜೇಗೌಡ, ಡಾ. ಶಿವರಾಂ, ಮುಖ್ಯ ಶಿಕ್ಷಕ ಜೆ.ಎಲ್. ರವಿ, ಶ್ರೀನಿವಾಸ್, ಧರ್ಮಪ್ಪ, ಕನಕಲತಾ ರವೀಶ್, ಸರೋಜಾ ಕೆಂಪರಾಜ್, ಉಷಾ ರಾಜ್, ವಿಶ್ವಾಸ್, ಚಿನ್ಮಯಿ, ಚಿರಾಗ್, ರೋಜಾ, ರೇಷ್ಮಾ, ವಾಸು, ಮಲ್ಲೇಶ್, ಶಿಕ್ಷಕರು ಇತರರು ಹಾಜರಿದ್ದರು.