ಬೀಡಾಡಿ ದನಗಳನ್ನು ಪಿಂಜರಪೋಲ್‌ಗೆ ಬಿಡಲು ಸೂಚನೆ

| Published : Jul 31 2024, 01:03 AM IST / Updated: Jul 31 2024, 01:04 AM IST

ಸಾರಾಂಶ

ಪಟ್ಟಣದಲ್ಲಿ ಬೀಡಾಡಿ ದನ, ಕರುಗಳ ಹಾವಳಿಯಿಂದ ಸಾವು, ನೋವು ಉಂಟಾಗಿರುವ ಕಾರಣ ಮೈಸೂರು ಪಿಂಜರ ಪೋಲ್‌ಗೆ ಬಿಡಲು ಕ್ರಮ ವಹಿಸಬೇಕು ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದಲ್ಲಿ ಬೀಡಾಡಿ ದನ, ಕರುಗಳ ಹಾವಳಿಯಿಂದ ಸಾವು, ನೋವು ಉಂಟಾಗಿರುವ ಕಾರಣ ಮೈಸೂರು ಪಿಂಜರ ಪೋಲ್‌ಗೆ ಬಿಡಲು ಕ್ರಮ ವಹಿಸಬೇಕು ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಜು.30 ರ ಕನ್ನಡಪ್ರಭ ಪತ್ರಿಕೆಯಲ್ಲಿ ಬೀಡಾಡಿ ದನಗಳ ಹಾವಳಿಗೆ ಇನ್ನೆಷ್ಟು ಬಲಿಬೇಕು ಎಂದು ವರದಿಗೆ ಸ್ಪಂದಿಸಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಪುರಸಭೆಗೆ ಪತ್ರ ಬರೆದಿದ್ದು, ಬೀಡಾಡಿ ಜಾನುವಾರುಗಳ ಸ್ಥಳಾಂತರಿಸಲು ನಿಯಮಾನುಸಾರ ಕ್ರಮ ವಹಿಸಲು ಹಾಗೂ ಇನ್ನು ಮುಂದೆ ಪಟ್ಟಣದಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮ ವಹಿಸಬೇಕು. ತಾವು ಕೈಗೊಂಡ ಕ್ರಮದ ಬಗ್ಗೆ ತುರ್ತಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಯಥಾವತ್ತಾಗಿ ಪತ್ರದಲ್ಲಿ ಬರೆದಿದ್ದಾರೆ. ಕನ್ನಡಪ್ರಭ ವರದಿಗೆ ಸ್ಪಂದಿಸಿ ಪತ್ರ ಬರೆದಿದ್ದಕ್ಕೆ ಪಟ್ಟಣದ ಸಾರ್ವಜನಿಕರು ಪ್ರಶಂಶಿಸಿದ್ದಾರೆ.

ಪಿಐಗೂ ಸೂಚನೆ:ಗುಂಡ್ಲುಪೇಟೆ ಪಟ್ಟಣದಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ಅಹಿತರ ಘಟನೆಗಳು ನಡೆದಿವೆ. ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಬೈಕ್‌ ಸವಾರರು ಹೆದ್ದಾರಿಯಲ್ಲಿ ಅತೀ ವೇಗವಾಗಿ ಸಂಚರಿಸದಂತೆ ಹಾಗೂ ಹೆಲ್ಮೆಟ್‌ ಕಡ್ಡಾಯವಾಗಿ ಬಳಸುವಂತೆ ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.