ನಿಯಮ ಉಲ್ಲಂಘಿಸಿದ ಏಳು ಅಂಗಡಿಗಳಿಗೆ ನೋಟಿಸ್

| Published : Jun 01 2024, 12:47 AM IST

ಸಾರಾಂಶ

ರೈತರಿಗೆ ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು. ದರಪಟ್ಟಿಯಲ್ಲಿ ದಾಸ್ತಾನು ವಿವರ ಹಾಗೂ ದರ ನಮೂದಿಸಬೇಕು.

ಕಂಪ್ಲಿ: ತಾಲೂಕಿನ ವಿವಿಧೆಡೆಯಲ್ಲಿನ ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ ನಿಯಮ ಉಲ್ಲಂಘಿಸಿದ 7 ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್ ಮಾತನಾಡಿ, ಕಂಪ್ಲಿ ಹಾಗೂ ದೇವಸಮುದ್ರ, ದೇವಲಾಪುರ ಗ್ರಾಮಗಳ ಕೃಷಿ ಪರಿಕರಗಳ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ನಾನಾ ನ್ಯೂನತೆಗಳು ಕಂಡು ಬಂದಿವೆ. ದರ ಪಟ್ಟಿಯಲ್ಲಿ ದರ 1.21 ನಮೂದಿರುವುದು, ರಸೀದಿಯಲ್ಲಿ ರೈತರ ಸಹಿ ಇಲ್ಲದಿರುವುದು, ಪರಿಕರ ದಾಸ್ತಾನು ಮತ್ತು ಮಾರಾಟ ಪುಸ್ತಕಗಳನ್ನು ನಿಯಮಾನುಸಾರ ನಿರ್ವಹಿಸದಿರುವುದು, ಕಂಪನಿಯಿಂದ ಹೊಸ ಪ್ರಿನ್ಸಿಪಲ್ ಸರ್ಟಿಫಿಕೆಟ್ ಬಾರದಿರುವುದು ಸೇರಿದಂತೆ ಇತರೆ ಸೇರಿ ನಾನಾ ನ್ಯೂನತೆಗಳಿರುವ ಏಳು ಜನ ಕೃಷಿ ಪರಿಕರ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ಮುಂದೆ ರೈತರಿಗೆ ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು. ದರಪಟ್ಟಿಯಲ್ಲಿ ದಾಸ್ತಾನು ವಿವರ ಹಾಗೂ ದರ ನಮೂದಿಸಬೇಕು. ಅಧಿಕೃತ ಕಂಪನಿಗಳ ಕೃಷಿ ಪರಿಕರಗಳನ್ನು ಮಾತ್ರ ಮಾರಾಟ ಮಾಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘನೆಯಾಗಿದ್ದು ಕಂಡು ಬಂದಲ್ಲಿ ಕಠಿಣ ಕ್ರಮ ಜರುಜಿಸಲಾಗುವುದು ಎಂದು ಮಳೆಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು. ಸಹಾಯಕ ಕೃಷಿ ಅಧಿಕಾರಿ ಟಿ.ಜ್ಯೋತಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೇಣುಕರಾಜ್ ಇದ್ದರು.