ಕೊಳ್ಳೇಗಾಲದಲ್ಲಿ ಕುಖ್ಯಾತ ಕಳ್ಳನ ಬಂಧನ: 204 ಗ್ರಾಂ ಚಿನ್ನಾಭರಣ ವಶ

| Published : Aug 04 2024, 01:19 AM IST

ಸಾರಾಂಶ

ವಿವಿಧ ಪೊಲೀಸ್ ಠಾಣೆಗಳ ಐದು ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಕೊಳ್ಳೇಗಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

5 ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿವಿಧ ಪೊಲೀಸ್ ಠಾಣೆಗಳ ಐದು ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಕೊಳ್ಳೇಗಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ಗಿರೀಶ್ ಕುಮಾರ್ @ ಹ್ಯಾಂಡ್ ಕಾಪ್ ಗಿರಿ ಬಂಧಿತ ಆರೋಪಿ. ಈತನಿಂದ 10 ಲಕ್ಷದ 65 ಸಾವಿರ ಮೌಲ್ಯದ 204 ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಡಾಮೀನರ್ ಬೈಕ್ (ಕೆಎ09 ಜೆಕೆ 0852) ಜಪ್ತಿ ಮಾಡಲಾಗಿದೆ.

ಈತನು ಜುಲೈ 29 ರಂದು ಪಟ್ಟಣದ ಭಾರತ್ ಬೇಕರಿ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿದ್ದ ಚಿನ್ನದ ಚೈನ್‌ಗಳು ಹಾಗೂ ಜುಲೈ 30 ರಂದು ಶಿವನಸಮುದ್ರದ ಮಾರಮ್ಮನ ದೇವಸ್ಥಾನದ ಬಳಿ ನಿಲ್ಲಿಸಿದ್ದ ಬೈಕ್‌ಲ್ಲಿದ್ದ ಬ್ಯಾಗ್ ನಲ್ಲಿದ ಚಿನ್ನದ ಚೈನ್‌ಗಳು, ಜುಲೈ 2 ರಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯ ಚಿನ್ನದ ಸರ ಹಾಗೂ ಒಂದು ವರ್ಷದ ಹಿಂದೆ ಚಿಲಕವಾಡಿ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಗಂಡ ಹೆಂಡತಿಯನ್ನು ಹಿಂಬಾಲಿಸಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ನಕ್ಲೆಸ್‌ನ್ನು ಕಿತ್ತುಕೊಂಡಿದ್ದು ಸೇರಿದಂತೆ ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಯಲ್ಲಿ ಐದು ಪ್ರಕರಣಗಳು ಹಾಗೂ ಮೈಸೂರು ಜಿಲ್ಲೆಯಲ್ಲಿ ಎರಡು ಪ್ರಕರಣಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕುಖ್ಯಾತ ಕಳ್ಳನನ್ನು ಪತ್ತೆ ಮಾಡುವಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್ ಪ್ರಂಶಸಿದರು.ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವಮಾದಯ್ಯ, ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗ ಕ್ರೈಂಪಿಎಸ್ಐ ಉಮಾವತಿ, ಎಎಸ್ಐ ತಖೀವುಲ್ಲಾ, ಹೆಡ್ ಕಾನ್ಸ್‌ಟೇಬಲ್‌ಗಳಾದ ರವಿಕುಮಾರ್, ಕಿಶೋರ್, ವೆಂಕಟೇಶ್, ಕಾನ್ಸ್‌ಟೇಬಲ್‌ಗಳಾದ ಬಿಳೀಗೌಡ, ಶಿವಕುಮಾರ್, ಅಮರೇಶ್, ಸವಿರಾಜು, ಬಸವರಾಜು, ರೋಹಿತ್, ಸಚಿನ್ ಇದ್ದರು.