ಜಲಾನಯನ ಪ್ರದೇಶದ ಅಭಿವೃದ್ಧಿಗೆ ನರೇಗಾ ಬಲ: ಜಿಪಂ ಸಿಇಒ ಅಕ್ಷಯ ಶ್ರೀಧರ

| Published : Jul 06 2024, 12:49 AM IST

ಜಲಾನಯನ ಪ್ರದೇಶದ ಅಭಿವೃದ್ಧಿಗೆ ನರೇಗಾ ಬಲ: ಜಿಪಂ ಸಿಇಒ ಅಕ್ಷಯ ಶ್ರೀಧರ
Share this Article
  • FB
  • TW
  • Linkdin
  • Email

ಸಾರಾಂಶ

ಜಲಾನಯನ ಪ್ರದೇಶದ ಅಭಿವೃದ್ಧಿಗೆ ನರೇಗಾ ಬಲ ತುಂಬಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ ಹೇಳಿದರು.

ರಾಣಿಬೆನ್ನೂರು: ಜಲಾನಯನ ಪ್ರದೇಶದ ಅಭಿವೃದ್ಧಿಗೆ ನರೇಗಾ ಬಲ ತುಂಬಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ ಹೇಳಿದರು. ತಾಲೂಕಿನ ಸುಣಕಲ್‌ಬಿದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಕೃಷಿ, ಅರಣ್ಯ, ತೋಟಗಾರಿಕೆ ಹಾಗೂ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯ ಸಹಕಾರದೊಂದಿಗೆ ಜಲಾನಯನ ಪ್ರದೇಶವನ್ನು ಗುರುತಿಸಿ ಜಲಾನಯನ ಪ್ರದೇಶದ ಉಪಚಾರ ಇಂದಿನ ಅಗತ್ಯವಾಗಿದೆ. ನರೇಗಾ ಯೋಜನೆಯಡಿ ಸುಮಾರು 27 ಲಕ್ಷ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಕೆಲಸವನ್ನು ಪ್ರಸಕ್ತ ವರ್ಷದಲ್ಲಿ ಮೇಲ್ ಸ್ತರದಲ್ಲಿ ಬರುವ ರೈತರ ಗುಂಪುಗಳನ್ನು ರಚನೆ ಮಾಡಿ ಕಾಮಗಾರಿ ಪ್ರಾರಂಭಿಸಬೇಕು ಎಂದರು. ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಎಸ್.ಡಿ. ಬಳಿಗಾರ ಮಾತನಾಡಿ, ಸುಮಾರು 153 ಎಕರೆ ಪ್ರದೇಶದಲ್ಲಿ ಮೇಲ್ತರದಲ್ಲಿರುವ ಈಗಾಗಲೇ 35 ಎಕರೆ ಪ್ರದೇಶದಲ್ಲಿ ಬದು ನಿರ್ಮಾಣ ಕೃಷಿಯ ಅರಣ್ಯ ಬದು ಬೇಸಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ ಇದರಿಂದ ರೈತರಿಗೆ ಹೊಲದಲ್ಲಿ ಬದು ನಿರ್ಮಾಣ ಬದು ಬೇಸಾಯ ಅರಣ್ಯೀಕರಣ ಕಾಮಗಾರಿ ಮಾಡಿಕೊಳ್ಳೋದರೊಂದಿಗೆ ಸುಮಾರು 3.60 ಲಕ್ಷ ರು. ಖರ್ಚಾಗಿದ್ದು, ಕೂಲಿ ಕಾರ್ಮಿಕರಿಗೆ ನೇರವಾಗಿ ಪಾವತಿಯಾಗಿದೆ. ಇದರಿಂದ 1050 ಮಾನವ ದಿನಗಳು ಸೃಜನೆಯಾಗಿದೆ ಎಂದರು. ತಾಪಂ ಇಒ ಸುಮಲತಾ ಎಸ್.ಪಿ. ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ, ಕೃಷಿ ವಿಜ್ಞಾನಿಗಳಾದ ಗುರುಪ್ರಸಾದ್ ಜಿ.ಎಸ್., ಸಂತೋಷ್ ಎಚ್.ಎಂ., ಸಿದ್ದಗಂಗಮ್ಮ ಕೆ.ಆರ್., ಲಕ್ಷ್ಮಿ ಪಾಟೀಲ ಮತ್ತಿತರರಿದ್ದರು.