ಸಾರಾಂಶ
ಇಂದಿನ ಜಾಗತಿಕ ವಲಯದಲ್ಲಿ ಓದು ಬರಹದ ಜೊತೆಗೆ ವಿವಿಧ ಕೌಶಲ್ಯಗಳನ್ನು ಕಲಿಯುವುದು ಮುಖ್ಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣಿಬೆನ್ನೂರು: ಇಂದಿನ ಜಾಗತಿಕ ವಲಯದಲ್ಲಿ ಓದು ಬರಹದ ಜೊತೆಗೆ ವಿವಿಧ ಕೌಶಲ್ಯಗಳನ್ನು ಕಲಿಯುವುದು ಮುಖ್ಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ತಾಲೂಕಿನ ಮಾಗೋಡ ಗ್ರಾಮದಲ್ಲಿ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್ನೆಸ್ಸೆಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು, ಗ್ರಾಮೀಣ ಭಾಗದ ಜೀವನ ಶೈಲಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಎನ್ನೆಸ್ಸೆಸ್ ಸೇತುವೆಯಾಗಿದೆ. ಸೌಹಾರ್ದ, ಭಾವನೆ, ಪರಸ್ಪರ ಸ್ನೇಹ ಭಾಂಧವ್ಯ ಹಾಗೂ ವಿಶಾಲ ವಿಚಾರವಂತಿಕೆಯಿಂದ ಮಾತ್ರ ಕಲಿಯಲು ಸಾಧ್ಯವಾಗುತ್ತದೆ. ಎನ್ನೆಸ್ಸೆಸ್ ಶಿಬಿರಗಳು ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸುವ ಜೊತೆಗೆ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ.ಇದರ ಜೊತೆಗೆ ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹ ಭರಿತವಾಗಿ ಭಾಗವಹಿಸಲು ಮುನ್ನಡಿ ಬರೆಯುತ್ತದೆ ಎಂದರು.
ಮಹಾವಿದ್ಯಾಲಯದ ಪ್ರಾ. ಪ್ರೊ. ನಾರಾಯಣ ನಾಯಕ ಎ. ಮಾತನಾಡಿ, ಗ್ರಾಮದ ಜನತೆ ಶಿಬಿರದ ಜೊತೆ ಕೈಜೋಡಿಸಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸಹಕಾರ ನೀಡಿದ್ದು ಅವಿಸ್ಮರಣೆಯಾಗಿದೆ ಎಂದರು.ಎಸ್‌ಡಿಎಮ್‌ಸಿ ಅಧ್ಯಕ್ಷ ಗಿರೀಶ ಮುದಿಗೌಡ್ರ ಅಧ್ಯಕ್ಷತೆ ವಹಿಸಿದ್ದರು.ಪಿಡಿಒ ಸಾವಿತ್ರಮ್ಮ ಜಿ.ಎಸ್., ನಿಂಗರೆಡ್ಡಿ ಕೆಂಚರೆಡ್ಡಿ, ಉಜ್ಜಪ್ಪ ಕಮದೋಡ, ನಿಜಪ್ಪ ಹಾದಿಮನಿ, ನಿಂಗಪ್ಪ ಹಾಲಭಾವಿ, ಉಜ್ಜಪ್ಪ ಹಾಲಭಾವಿ, ಹನುಮಂತಪ್ಪ ಬಸನಗೌಡ್ರ, ಹನುಮಂತಪ್ಪ ಕೆಂಚರೆಡ್ಡಿ, ಪ್ರೊ ವೀರೇಶ ಕುರಹಟ್ಟಿ, ಡಾ.ಕವಿತಾ ಗಡ್ಡದಗೂಳಿ, ಪ್ರೊ.ಕೃಷ್ಣ ಎಲ್.ಎಚ್., ಪ್ರೊ. ಮಂಜಪ್ಪ ಸಿ ಎಸ್, ಪ್ರೊ.ಚನಬಸಪ್ಪ ಮಾಳಿ, ಸಂಗೀತಾ ಸಾಲಗೇರಿ, ಅಕ್ಷತಾ ಅಲಗಿಲವಾಡ, ಜ್ಯೋತಿ ಅಂಕಸಾಪುರ, ರೋಹಿಣಿ ಹಿರೇಮಠ, ಅಮ್ರುತಾ ತೋರಗಲ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.