ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಾಗಾರ

| Published : May 19 2024, 01:47 AM IST

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಸ್ತೂರ್ಬಾ ಆಸ್ಪತ್ರೆಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ಶಿರನ್ ಶೆಟ್ಟಿ, ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮದ ಅವಲೋಕನವನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ಅಬಾಟ್ ಹೆಲ್ತ್‌ಕೇರ್ ಪ್ರೈ.ಲಿ. ಸಹಯೋಗದೊಂದಿಗೆ ಚಿಕಿತ್ಸಕ ಪೌಷ್ಟಿಕಾಂಶ ಅಭ್ಯಾಸಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ‘ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್’ ಎಂಬ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ. ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ಉಪ ವೈದ್ಯಕೀಯ ಅಧೀಕ್ಷಕರು ಮತ್ತು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಪ್ರಾಧ್ಯಾಪಕ ಡಾ.ಶಿರನ್ ಶೆಟ್ಟಿ ಮತ್ತು ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಪ್ರಭಾರಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಸುವರ್ಣ ಹೆಬ್ಬಾರ್ ಭಾಗವಹಿಸಿದ್ದರು.

ಈ ಸಂದರ್ಭ ಡಾ.ಶಿರನ್ ಶೆಟ್ಟಿ, ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ನಿರಂತರ ಆರೈಕೆಯಲ್ಲಿ ಅಪೌಷ್ಟಿಕತೆ ಮತ್ತು ಸ್ನಾಯುವಿನ ನಷ್ಟವು ಪ್ರಚಲಿತವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ವೈದ್ಯಕೀಯ ಅಭ್ಯಾಸದಲ್ಲಿ ಪೌಷ್ಟಿಕತೆಯ ಪ್ರಾಮುಖ್ಯತೆಯನ್ನು ಮತ್ತು ರೋಗಿಗಳಿಗೆ ಸಾರ್ಕೊಪೆನಿಯಾ ಮೌಲ್ಯಮಾಪನದ ಅಗತ್ಯವನ್ನು ಒತ್ತಿ ಹೇಳಿದರು.

ಅಬಾಟ್ ಹೆಲ್ತ್‌ಕೇರ್‌ನ ಮನೋಜ್, ಕಸ್ತೂರ್ಬಾ ಆಸ್ಪತ್ರೆಗೆ ಪೌಷ್ಟಿಕಾಂಶದ ಮಾಪನ ಕಿಟ್ (ನ್ಯೂಟ್ರಿಷನ್ ಎಸ್ಸೇಸ್ಮೆಂಟ್ ಕಿಟ್) ಹಸ್ತಾಂತರಿಸಿದರು. ಇದು ಪೌಷ್ಟಿಕಾಂಶದ ಆರೈಕೆಯನ್ನು ಮುಂದುವರಿಸಲು ಸಹಯೋಗದ ಬದ್ಧತೆಯನ್ನು ಸಂಕೇತಿಸುತ್ತದೆ. ಸುವರ್ಣ ಹೆಬ್ಬಾರ್ ವಂದಿಸಿದರು.