ನಗರದ ಕುಂಬಾರಕೇರಿ, ಗರಡಿಕೇರಿ, ಕುರುಬಕೇರಿಗಳಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ತಯಾರು ಮಾಡುವ ಅಂಗಡಿಗಳಲ್ಲಿ ಚಿನ್ನದ ಕೆಲಸದ ಮೇಜಾ ಕಳ್ಳತನ

ಕನ್ನಡಪ್ರಭ ವಾರ್ತೆ ಮೈಸೂರು

ಚಿನ್ನದ ಅಂಗಡಿಗಳಲ್ಲಿ ಮೇಜಾ ಕಳ್ಳತನ ಆಗುತ್ತಿರುವ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಚಿನ್ನ, ಬೆಳ್ಳಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.ನಗರದ ಕುಂಬಾರಕೇರಿ, ಗರಡಿಕೇರಿ, ಕುರುಬಕೇರಿಗಳಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ತಯಾರು ಮಾಡುವ ಅಂಗಡಿಗಳಲ್ಲಿ ಚಿನ್ನದ ಕೆಲಸದ ಮೇಜಾ ಕಳ್ಳತನ ಆಗಿದ್ದು, ಕಳ್ಳರು ಹಾಡು ಹಗಲೇ ಬಾಗಿಲ ಬಳಿ ಇರುವ ಮೇಜಾ ಕದ್ದಿದ್ದಾರೆ.ಈ ಸಂಬಂಧ ಡಿಸಿಪಿ ಕೆ.ಎಸ್. ಸುಂದರ್ ರಾಜ್ ಅವರನ್ನು ಭೇಟಿ ಮಾಡಿ, ನಡೆದ ಕಳ್ಳತನಗಳ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದ್ದಾರೆ. ಬಳಿಕ ಲಷ್ಕರ್ ಠಾಣೆಯ ಇನ್ಸ್‌ ಪೆಕ್ಟರ್ ಲೋಲಾಕ್ಷಿ ಅವರಿಗೆ ಮನವಿ ಸಲ್ಲಿಸಿದ್ದಾರೆ.ಈ ವೇಳೆ ಸಂಘದ ಗೌರವಾಧ್ಯಕ್ಷ ರವಿಪ್ರಕಾಶ್, ಅಧ್ಯಕ್ಷ ಟಿ. ಸುರೇಶ್, ಉಪಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಗುರು, ಪದಾಧಿಕಾರಿಗಳಾದ ಅಣ್ಣಯ್ಯಚಾರ್, ಶಿವಕುಮಾರ್ ಮೊದಲಾದವರು ಇದ್ದರು.