ಅಧಿಕಾರಿಗಳ ದಾಳಿ: ಬಸವ ಪಾಲಿ ಕ್ಲಿನಿಕ್‌ ಸೀಜ್‌

| Published : Jun 27 2024, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೀಳಗಿ ಇತ್ತೀಚೆಗೆ ಪಟ್ಟಣದ ಬಸವ ಪಾಲಿ ಕ್ಲಿನಿಕ್ ಆಸ್ಪತ್ರೆಯ ಮುಂಭಾಗದಲ್ಲಿ ಬಾಣಂತಿ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಬುಧವಾರ ಸಂಜೆ ತಾಲೂಕ ಆರೋಗ್ಯ ಅಧಿಕಾರಿ ಡಾ.ಕುಸುಮಾ ಮಾಗಿ ನೇತೃತ್ವದ ತಂಡ ದಾಳಿ ಮಾಡಿದೆ. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ವೈದ್ಯರು ಆಯುರ್ವೇದ ಬಿಎಎಂಎಸ್ ಅಧ್ಯಯನ ಮಾಡಿದ್ದು, ಆಸ್ಪತ್ರೆಯಲ್ಲಿ ಆಯುರ್ವೇದಿಕ ಔಷಧಿಗಳು ಕಾಣದೇ ಅಲೋಪಥಿಕ್ ಔಷಧಿಗಳು ಕಂಡುಬಂದವೆ.

ಕನ್ನಡಪ್ರಭ ವಾರ್ತೆ ಬೀಳಗಿಇತ್ತೀಚೆಗೆ ಪಟ್ಟಣದ ಬಸವ ಪಾಲಿ ಕ್ಲಿನಿಕ್ ಆಸ್ಪತ್ರೆಯ ಮುಂಭಾಗದಲ್ಲಿ ಬಾಣಂತಿ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಬುಧವಾರ ಸಂಜೆ ತಾಲೂಕ ಆರೋಗ್ಯ ಅಧಿಕಾರಿ ಡಾ.ಕುಸುಮಾ ಮಾಗಿ ನೇತೃತ್ವದ ತಂಡ ದಾಳಿ ಮಾಡಿದೆ. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ವೈದ್ಯರು ಆಯುರ್ವೇದ ಬಿಎಎಂಎಸ್ ಅಧ್ಯಯನ ಮಾಡಿದ್ದು, ಆಸ್ಪತ್ರೆಯಲ್ಲಿ ಆಯುರ್ವೇದಿಕ ಔಷಧಿಗಳು ಕಾಣದೇ ಅಲೋಪಥಿಕ್ ಔಷಧಿಗಳು ಕಂಡುಬಂದವೆ. ಕೆಪಿಎಂಇ ಕಾಯ್ದೆ ಅನ್ವಯ ಕೆಲವು ಲೋಪದೋಷಗಳು ಆಸ್ಪತ್ರೆಯಲ್ಲಿ ಕಾಣಿಸಿದ್ದು, ಪ್ರಯುಕ್ತ ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದ ಮೇರೆಗೆ ತಹಸೀಲ್ದಾರ್‌ ಸುಹಾಸ ಇಂಗಳೆ ಮತ್ತು ತಾಲೂಕಾ ಆರೋಗ್ಯ ಅಧಿಕಾರಿ ಡಾ.ಕುಸುಮಾ ಮಾಗಿ ನೇತತ್ವದಲ್ಲಿ ಬಸವ ಪಾಲಿ ಕ್ಲಿನಿಕ್‌ನ್ನು ಸೀಜ್‌ ಮಾಡಲಾಗಿದೆ. ಈ ವೇಳೆ ಪಿಎಸ್‌ಐ ಮಂಜುನಾಥ ತಿರಕನ್ನವರ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು.ಅಧಿಕಾರಿಗಳ ದೌರ್ಜನ್ಯ: ನನಗೆ ಯಾವುದೇ ನೋಟಿಸ್ ನೀಡದೆ ಆಸ್ಪತ್ರೆ ಸೀಜ್ ಮಾಡುತ್ತಿರುವುದು ಖಂಡನೀಯ. ಅಧಿಕಾರಿಗಳ ದೌರ್ಜನ್ಯದ ಬಗ್ಗೆ ಈಗಾಗಲೇ ನಮ್ಮ ಅಸೋಷಿಯೇಷನ್ ಅವರಿಗೆ ತಿಳಿಸಿದ್ದು, ನನಗೆ ನ್ಯಾಯ ಸಿಗುವವರಿಗೂ ಹೋರಾಟ ಮಾಡುತ್ತೇನೆ. ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ನೀಡದೆ ದೌರ್ಜನ್ಯ ಮಾಡುತ್ತಿರುವುದು ಸೂಕ್ತವಲ್ಲ. ಇದನ್ನು ಎಲ್ಲರಿಗೂ ತಿಳಿಸುತ್ತೇನೆ ಎಂದು ಬಸವ ಪಾಲಿ ಕ್ಲಿನಿಕ್‌ ನ ಡಾ.ಮೋಹನ ಚೆಟ್ಟೇರ ತಿಳಿಸಿದರು.

ಇತ್ತೀಚೆಗೆ ಬಾಣಂತಿಯೊಬ್ಬಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಈ ಆಸ್ಪತ್ರೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಬಾಣಂತಿಯನ್ನು ಕಳೆದುಕೊಂಡಿದ್ದೇವೆ ಎಂದು ಕುಟುಂಬದವರು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.