ಗಬ್ಬು ನಾರುತ್ತಿರುವ ಯಾದವಗಿರಿ ವಿವೇಕಾನಂದ ರಸ್ತೆ

| Published : Sep 06 2025, 01:00 AM IST

ಸಾರಾಂಶ

ಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ,

ಎಲ್‌.ಎಸ್‌. ಶ್ರೀಕಾಂತ್‌ಕನ್ನಡಪ್ರಭ ವಾರ್ತೆ ಮೈಸೂರುನಗರದ ಯಾದವಗಿರಿ ಸಣ್ಣಕೈಗಾರಿಕಾ ಪ್ರದೇಶ ಬಳಿ ವಿವೇಕಾನಂದ ರಸ್ತೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮ್ಯಾನ್‌ ಹೋಲ್‌ ತುಂಬಿ ರಸ್ತೆ ತುಂಬ ಕೊಳಚೆ ನೀರು ಹರಿದು ಗಬ್ಬು ನಾರುತ್ತಿದ್ದರು ಇದುವರೆಗೂ ದುರಸ್ತಿಗೆ ನಗರಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ.ಯಾದವಗಿರಿ ಜಾಯ್‌ ಐಸ್‌ ಕ್ರೀಂ ಫ್ಯಾಕ್ಟರಿ ಹಿಂಭಾಗ ಹಾಗೂ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಮಂದಿ ಸಂಚಾರ ಮಾಡುತ್ತಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತ್ತಿದ್ದು, ಕೊಳಚೆ ನೀರು ರಸ್ತೆ ತುಂಬ ಹರಿಯುತ್ತಿರುವುದರಿಂದ ಸಾರ್ವಜನಿಕರು ಈ ರಸ್ತೆಯಲ್ಲೇ ಓಡಾಡುವುದನ್ನು ಬಿಟ್ಟಿದ್ದಾರೆ.ನಗರಪಾಲಿಕೆ ಸದಸ್ಯರು ಇದಿದ್ದರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದು ಮ್ಯಾನ್‌ ಹೋಲ್‌ ಗಳನ್ನು ದುರಸ್ತಿ ಪಡಿಸುತ್ತಿದ್ದರು, ಈಗ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳುವುದಿಲ್ಲ. ಇದು ನಿತ್ಯ ಸಂಚಾರ ಮಾಡುವ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಎರಡು ಮ್ಯಾನ್‌ ಹೋಲ್‌ ಗಳನ್ನು ದುರಸ್ತಿ ಪಡಿಸಿ ಉಳಿದ ಮ್ಯಾನ್‌ ಹೋಲ್‌ ಗಳನ್ನು ಹಾಗೆ ಬಿಟ್ಟ ಕಾರಣ ದುರಸ್ತಿ ಮಾಡಿದರೂ ಸಹ ಯಾವುದೇ ಪ್ರಯೋಜವಾಗದಂತೆ ಆಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮ್ಯಾನ್‌ ಹೋಲ್‌ ಗಳನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.ಕುಡುಕರ ವೇದಿಕೆಯಾದ ಟ್ರ್ಯಾಲಿಇದೇ ರಸ್ತೆಯಲ್ಲಿ ಹಲವು ವರ್ಷದಿಂದ ಯಾವುದೋ ಕೈಗಾರಿಕೆಗೆ ಸಂಬಂಧಪಟ್ಟ ಟ್ರ್ಯಾಲಿಯೊಂದು ನಿಲ್ಲಿಸಲಾಗಿದೆ. ಇದು ಹಗಲು ರಾತ್ರಿ ಕುಡುಕರಿಗೆ ವೇದಿಕೆಯಾಗಿದೆ. ರಾತ್ರಿಯಾದರೆ ಈ ಟ್ರ್ಯಾಲಿ ಮೇಲೆ ನಾಲ್ಕಾರು ಮಂದಿ ಕುಳಿತು ಕುಡಿಯುತ್ತಿರುತ್ತಾರೆ. ಕುಡಿದ ಬಾಟಲು, ಲೋಟಗಳನ್ನು ರಸ್ತೆಯಲ್ಲೆ ಎಸೆದು ಹೋಗುತ್ತಾರೆ. ಇದರಿಂದ ಈ ರಸ್ತೆಯಲ್ಲಿ ಓಡಾಡಲು ಸಹ ಸಾರ್ವಜನಿಕರು ಭಯ ಪಡುತ್ತಾರೆ. ಪೊಲೀಸರು ಈ ಕೂಡಲೇ ಟ್ರ್ಯಾಲಿಯನ್ನು ತೆರವುಗೊಳಿಸಿ, ಕುಡುಕರ ಹಾವಳಿ ತಪ್ಪಿಸುವಂತೆ ಸ್ಥಳೀಯರು ಕೋರಿದ್ದಾರೆ.