ಕಮತಗಿ ಪಟ್ಟಣದ ಹೊರವಯಲದಲ್ಲಿನ ಲಾಯದಗುಂದಿ ಲೇಔಟ್‌ದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಯ್ಯಪ್ಪಸ್ವಾಮಿ ದೇವಸ್ಥಾನ ಹಾಗೂ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಡಿ.11, 12ರಂದು ಹಮ್ಮಿಕೊಳ್ಳಲಾಗಿದೆ.

ಕಮತಗಿ: ಪಟ್ಟಣದ ಹೊರವಯಲದಲ್ಲಿನ ಲಾಯದಗುಂದಿ ಲೇಔಟ್‌ದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಯ್ಯಪ್ಪಸ್ವಾಮಿ ದೇವಸ್ಥಾನ ಹಾಗೂ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಡಿ.11, 12ರಂದು ಹಮ್ಮಿಕೊಳ್ಳಲಾಗಿದೆ.

ಸೋಮವಾರ ನೂತನ ಅಯ್ಯಪ್ಪಸ್ವಾಮಿ ದೇವಸ್ಥಾನದದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಹಾಗೂ ಖ್ಯಾತ ಜ್ಯೋತಿಷಿ ಡಾ.ಗಣೇಶ ಚಿತ್ರಗಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.11ರಂದು ಬೆಳಗ್ಗೆ 10ಗಂಟೆಗೆ ಹೊಳೆ ಹುಚ್ಚೇಶ್ವರಮಠದಿಂದ ನೂತನ ಅಯ್ಯಪ್ಪಸ್ವಾಮಿ ಮೂರ್ತಿಯ ಮೆರವಣಿಗೆ ಪಟ್ಟಣದಲ್ಲಿ ಕುಂಭ, ಕಳಸಾರತಿಯೊಂದಿಗೆ ಹಾಗೂ ಸಕಲ ವಾದ್ಯ ಮೇಳಗಳೊಂದಿಗೆ ನಡೆಯಲಿದ್ದು, ಡಿ.12ರಂದು ಬೆಳಗ್ಗೆ 6 ಗಂಟೆಗೆ ಅಯ್ಯಪ್ಪಸ್ವಾಮಿಯ ಮೂರ್ತಿಗೆ ಲಕ್ಷ ಬಿಲ್ವಾರ್ಚಣೆ ಹಾಗೂ ರುದ್ರಾಭಿಷೇಕ ನಡೆಯಲಿದೆ. ನಂತರ ನೂತನ ಅಯಪ್ಪಸ್ವಾಮಿಯ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಕಾಶಿನಾಥ ಸ್ವಾಮೀಜಿ, ಕಮತಗಿ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ.ನಿಲಕಂಠ ಶಿವಾಚಾರ್ಯ ಸ್ವಾಮೀಜಿ, ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ ಸಾನ್ನಿಧ್ಯ ವಹಿಸುವವರು.ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಹಾಗೂ ಖ್ಯಾತ ಜ್ಯೋತಿಷಿ ಡಾ.ಗಣೇಶ ಚಿತ್ರಗಾರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಡಾ.ವಿಶ್ವನಾಥ ವಂಶಾಕೃತಮಠ ಭಾಗವಹಿಸುವರು.

ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಅನಿಲ ಹುಚ್ಚೇಶ್ವರಮಠ, ಕಲ್ಲಯ್ಯ ದಾರವಾಡ, ಬಸವರಾಜ ಡೋಣುರ, ಸಂತೋಷ ಜಾಲಿಹಾಳ, ತಿಮ್ಮಣ್ಣ ಹಗೇದಾಳ, ಹನುಮಂತ ವಡ್ಡರ ಸುದ್ದಿಗೋಷ್ಠಿಯಲ್ಲಿದ್ದರು.