17ರಂದು ಮಂಗಳೂರು, ಮೂಡುಬಿದಿರೆಯಲ್ಲಿ ‘ಬೈ ಬೈ ಎನೀಮಿಯಾ’ ಬಸ್‌ ಶಿಬಿರ

| Published : Feb 15 2025, 12:31 AM IST

17ರಂದು ಮಂಗಳೂರು, ಮೂಡುಬಿದಿರೆಯಲ್ಲಿ ‘ಬೈ ಬೈ ಎನೀಮಿಯಾ’ ಬಸ್‌ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯನ್‌ ಅಕಾಡೆಮಿ ಆಫ್‌ ಪೀಡಿಯಾಟ್ರಿಕ್ಸ್‌ (ಐಎಪಿ)ನ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಮಕ್ಕಳಲ್ಲಿ ರಕ್ತಹೀನತೆ ನಿವಾರಣೆಗಾಗಿ ‘ಬೈ ಬೈ ಎನಿಮಿಯಾ’ ಎಂಬ ಅಭಿಯಾನದ ಯಾತ್ರಾ ಬಸ್‌ ಶಿಬಿರವನ್ನು ಫೆ.17ರಂದು ಮಂಗಳೂರು ಮತ್ತು ಮೂಡಬಿದಿರೆಯಲ್ಲಿ ಆಯೋಜಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಎಪಿ ಜಿಲ್ಲಾಧ್ಯಕ್ಷೆ ಡಾ. ಸ್ವಾತಿ ರಾವ್‌, ಮಕ್ಕಳಲ್ಲಿ ರಕ್ತಹೀನತೆಯ ನಿವಾರಣೆಗೆ ಐಎಪಿಯ ರಾಷ್ಟ್ರೀಯ ಅಭಿಯಾನದ ಭಾಗವಾಗಿ ಈ ಶಿಬಿರ ಆಯೋಜಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಇಂಡಿಯನ್‌ ಅಕಾಡೆಮಿ ಆಫ್‌ ಪೀಡಿಯಾಟ್ರಿಕ್ಸ್‌ (ಐಎಪಿ)ನ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಮಕ್ಕಳಲ್ಲಿ ರಕ್ತಹೀನತೆ ನಿವಾರಣೆಗಾಗಿ ‘ಬೈ ಬೈ ಎನಿಮಿಯಾ’ ಎಂಬ ಅಭಿಯಾನದ ಯಾತ್ರಾ ಬಸ್‌ ಶಿಬಿರವನ್ನು ಫೆ.17ರಂದು ಮಂಗಳೂರು ಮತ್ತು ಮೂಡಬಿದಿರೆಯಲ್ಲಿ ಆಯೋಜಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಎಪಿ ಜಿಲ್ಲಾಧ್ಯಕ್ಷೆ ಡಾ. ಸ್ವಾತಿ ರಾವ್‌, ಮಕ್ಕಳಲ್ಲಿ ರಕ್ತಹೀನತೆಯ ನಿವಾರಣೆಗೆ ಐಎಪಿಯ ರಾಷ್ಟ್ರೀಯ ಅಭಿಯಾನದ ಭಾಗವಾಗಿ ಈ ಶಿಬಿರ ಆಯೋಜಿಸಲಾಗುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿರುವ ಯಾತ್ರೆಯ ಬಸ್‌ ಬಳ್ಳಾರಿಯಿಂದ ಮಂಗಳೂರಿಗೆ ಆಗಮಿಸಲಿದೆ ಎಂದು ತಿಳಿಸಿದರು.

ಫೆ.17ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮಂಗಳೂರಿನ ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ರಕ್ತಹೀನತೆ ತಪಾಸಣೆ ನಡೆಸಲಾಗುವುದು. ಚಿಕಿತ್ಸೆ ಮತ್ತು ನಂತರದ ಆರೈಕೆಗಾಗಿ ಉಚಿತ ಸಮಾಲೋಚನೆ ಜತೆಗೆ ರಕ್ತಹೀನತೆ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ, ಶೈಕ್ಷಣಿಕ ಮಾಹಿತಿ ನೀಡಲಾಗುವುದು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್‌, ಮೇಯರ್‌ ಮನೋಜ್‌ ಕುಮಾರ್‌, ಮುಂಬೈನ ರಾಷ್ಟ್ರೀಯ ಐಎಪಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಯೋಗೀಶ್‌ ಪಾರಿಕ್‌, ಶಾರದಾ ಶಿಕ್ಷಣ ಸಮೂಹದ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ರಾಜೇಶ್‌ ಬಿ.ವಿ. ಭಾಗವಹಿಸಲಿದ್ದಾರೆ ಎಂದರು.

ಮೂಡಬಿದಿರೆ ಪ್ರಾಂತ್ಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಮೂಡುಬಿದಿರೆ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಶಿಬಿರ ನಡೆಯಲಿದೆ. ಆಳ್ವಾಸ್‌ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ. ವಸಂತ್‌ ಟಿ., ರೋಟರಿ ಅಧ್ಯಕ್ಷ ರವಿಪ್ರಸಾದ್‌ ಉಪಾಧ್ಯಾಯ, ಕಾರ್ಯದರ್ಶಿ ರತ್ನಾಕರ್‌ ಜೈನ್‌ ಮತ್ತು ವಲಯ 4ರ ಸಹಾಯಕ ಗವರ್ನರ್‌ ಡಾ. ಮುರಳಿಕೃಷ್ಣ ಆರ್‌.ವಿ. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಐಎಪಿ ಕಾರ್ಯಕಾರಿ ಮಂಡಳಿ ಸದಸ್ಯ ಡಾ. ಶ್ರೀಕೃಷ್ಣ ಜಿ.ಎನ್‌., ಐಎಪಿ ಜಿಲ್ಲಾ ಕಾರ್ಯದರ್ಶಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿ ಡಾ. ನಿಖಿಲ್‌ ಶೆಟ್ಟಿ ಇದ್ದರು.