ಧಾರವಾಡ:

ಕರ್ನಾಟಕ ವಿವಿ ವಿಶ್ರಾಂತ ಕುಲಪತಿ ಡಾ. ಎಚ್.ಬಿ. ವಾಲೀಕಾರ ಅಭಿನಂದನಾ ಸಮಾರಂಭ ಹಾಗೂ ರಾಷ್ಟ್ರೀಯ ಸಮ್ಮೇಳನವನ್ನು ಏ. 11 ಮತ್ತು 12ರಂದು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯೋಜಕ ಪ್ರೊ. ಎ.ಬಿ. ವೇದಮೂರ್ತಿ, ಪಾವಟೆ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್, ಗಣಕಯಂತ್ರ ವಿಭಾಗ, ಸಂಖ್ಯಾಶಾಸ್ತ್ರ ವಿಭಾಗಗಳ ಸಹಯೋಗದ ಸಮಾರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಮಿಸಲಿದ್ದಾರೆ ಎಂದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಕೆ.ಎಚ್. ಪಾಟೀಲ, ಸಂತೋಷ ಲಾಡ್, ಎಚ್.ಎಂ. ರೇವಣ್ಣ, ಉದ್ಯಮಿ ವಿಜಯ ಸಂಕೇಶ್ವರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ, ಎಸ್.ವಿ. ಸಂಕನೂರ, ಎಫ್.ಎಚ್. ಜಕ್ಕಪ್ಪನವರ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್ ಪಾಲ್ಗೊಳ್ಳಲಿದ್ದು, ಕುಲಪತಿ ಡಾ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಏ. 12ರ ಬೆಳಗ್ಗೆ 10ಕ್ಕೆ ನಡೆಯುವ ಗಣಿತ-ವಿಜ್ಞಾನ ಮತ್ತು ಅವುಗಳ ಅನ್ವಯಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಭಾರತೀಯ ಗಣಿತ ಸೊಸೈಟಿ ಕಾರ್ಯದರ್ಶಿ ಪ್ರೊ. ಎಂ.ಎಂ. ಶಿಕರೆ ಚಾಲನೆ ನೀಡಲಿದ್ದು, ಡಾ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸುವರು. ಕುಲಸಚಿವ ಡಾ. ಶಂಕರೆಪ್ಪ ವಣಿಕ್ಯಾಳ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರದೀಪಕುಮಾರ, ಕವಿವಿ ಜೈವಿಕ ತಂತ್ರಜ್ಞಾನ-ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ಎ.ಬಿ. ವೇದಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಪ್ರೊ. ಎಸ್.ಸಿ. ಶಿರಾಳಶೆಟ್ಟಿ, ಪ್ರೊ. ಸುಭಾಷ ನಾಟೀಕಾರ್, ಪ್ರೊ. ಜೆ.ಎಂ.ಚಂದುನವರ ಇದ್ದರು.