ಕೆ.ಆರ್. ನಗರದಲ್ಲಿ ಬಿಜೆಪಿಯಿಂದ ಅಭಿಯಾನ

| Published : Jul 04 2024, 01:06 AM IST

ಸಾರಾಂಶ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರ ಕರೆಯ ಮೇರೆಗೆ ಈ ಕಾರ್ಯಕ್ರಮವು ರಾಜ್ಯಾದ್ಯಂತ ಈ ದಿನ ನಡೆಯುತ್ತಿದ್ದು,

ಫೋಟೋ- 3ಎಂವೈಎಸ್ 47

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿ ವತಿಯಿಂದ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿ ಘಟಕದ ಕರೆಯ ಮೇರೆಗೆ ಬುಧವಾರ ಕೆ.ಆರ್. ನಗರ ಮಂಡಲದ ಬೂತ್ ಸಂಖ್ಯೆ - 16 ರಲ್ಲಿ ಏಕ್ ಪೇಯ್ಡ್ ಏಕ್ ಮಾಕ ನಾಮ್ ಪೇ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹತ್ತು ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂತೆಯೇ ಕೆ.ಆರ್. ತಾಲೂಕಿನಲ್ಲಿ 252 ಬೂತ್ ಗಳಲ್ಲಿಯೂ ಕೂಡ ಬೂತ್ ಅಧ್ಯಕ್ಷರು ಈ ಕಾರ್ಯಕ್ರಮವನ್ನು ತಮ್ಮ ತಮ್ಮ ಮಾತೃ ಹೇಗೋ ಪರಿಸರವೂ ಹಾಗೆಯೇ ಎಂಬ ದೃಷ್ಟಿಕೋನದಿಂದ ಈ ಕಾರ್ಯಗಾರ ಮಾಡಬೇಕು ಎಂದು ತಿಳಿಸಿದರು.

ಈಗಾಗಲೇ 154 ಬೂತ್ ಗಳಲ್ಲಿ ಈ ಕಾರ್ಯಕ್ರಮ ನೆರವೇರಿದ್ದು ಉಳಿದ ಎಲ್ಲಾ ಬೂತ್ ಗಳಲ್ಲಿಯೂ ಆಯಾ ಬೂತ್ ಅಧ್ಯಕ್ಷರುಗಳು ಜವಾಬ್ದಾರಿಯುತವಾಗಿ ನೆರವೇರಿಸಿಕೊಡಬೇಕು ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರ ಕರೆಯ ಮೇರೆಗೆ ಈ ಕಾರ್ಯಕ್ರಮವು ರಾಜ್ಯಾದ್ಯಂತ ಈ ದಿನ ನಡೆಯುತ್ತಿದ್ದು, ನಮ್ಮ ತಾಯಿ ಹೇಗೋ ಹಾಗೆಯೇ ನಮ್ಮ ಸುತ್ತಮುತ್ತಲ ವಾತಾವರಣ. ಈ ಒಂದು ಉತ್ತಮ ಕಾರ್ಯಕ್ರಮದಿಂದ ನಮ್ಮ ಪರಿಸರವು ಸಮೃದ್ಧ ಭರಿತವಾಗಿ ಮುಂದಿನ ಪೀಳಿಗೆಯವರೆಗೂ ಉಳಿಯುತ್ತದೆ. ಅದನ್ನು ಬೆಳೆಸಬೇಕಾದದ್ದು ಪ್ರಜ್ಞಾವಂತ ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ ಎಂದು ಅವರು ತಿಳಿಸಿದರು.

ಜಿಲ್ಲೆಯ ಪ್ರತೀ ತಾಲೂಕಿನ ಮಂಡಲ ಹಾಗೂ ಬೂತ್ ಗಳಲ್ಲಿ ಜು.6 ರವರೆಗೆ ನಡೆಸಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರಸ್ತುತ ದಿವಾಳಿಯತ್ತ ಹೊರಟಿದ್ದು ಗೃಹ ಲಕ್ಷ್ಮಿ ಯೋಜನೆ ಫ್ರೀ ಸ್ಕೀಂ ಗಳು ಕಾಲಕ್ರಮೇಣ ಜನಗಳು ಮರೆತು ಹೋಗುವ ನಿಟ್ಟಿನಲ್ಲಿದ್ದು ಇಡೀ ರಾಜ್ಯದಲ್ಲಿ ಅಭಿವೃದ್ಧಿ ನೆಲಕಚ್ಚುತ್ತಿರುವುದರಲ್ಲಿ ಅನುಮಾನ ಬೇಡ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.

ದಿನನಿತ್ಯ ಬಳಸುವ ತರಕಾರಿ ಬೆಲೆಗಳು ಗಗನಕ್ಕೆ ಜಿಗಿಯುತ್ತಿದ್ದು ಹಾಲಿನ ದರದ ಏರಿಕೆಯೂ ರಾಜ್ಯದ ಜನತೆಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿರುವುದನ್ನು ಜನ ನೋಡಿ ಶಪಿಸಿದ್ದಾರೆ ಎಂದರು.

ರಾಜ್ಯದ ರೈತರ ಮಕ್ಕಳಿಗೆ ವಿದ್ಯಾನಿಧಿ ಬಿಡುಗಡೆಯಾಗುತ್ತಿಲ್ಲ,ಯಡಿಯೂರಪ್ಪ ಅವರು ತಮ್ಮ ಸರ್ಕಾರದಲ್ಲಿ ಕೃಷಿ ಸಮ್ಮಾನ್ ಯೋಜನೆಗೆ 4000 ಸಹಾಯಧನ ನೀಡುತ್ತಿದ್ದರು,ಈ ಸರ್ಕಾರ ಬಂದನಂತರ ಅದನ್ನು ನಿಲ್ಲಿಸಿ ರೈತರ ಜೀವನೋಪಾಯಕ್ಕೆ ಮುಳುವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿರುವುದು ವಾಸ್ತವಾಗಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಅದರಿಂದ ತಪ್ಪಿಸುಕೊಳ್ಳಲು ಹರಸಾಹಸ ಪಡುತ್ತಿದ್ದು ಈಗಾಗಲೇ ಇದು ಜಗಜ್ಜಾಯಿರಾಗಿದೆ ಎಂದು ಅವರು ಆರೋಪಿಸಿದರು.

ಈ ವೇಳೆ ಕೆ.ಆರ್. ನಗರ ಮಂಡಲ ಅಧ್ಯಕ್ಷ ಹೊಸೂರು ಧರ್ಮ, ಸಾಲಿಗ್ರಾಮ ಮಂಡಲ ಅಧ್ಯಕ್ಷ ತಿಲಕ್, ಜಿಲ್ಲಾ ಉಪಾಧ್ಯಕ್ಷ ಸ್ವಪ್ನಾ ನಾಗೇಶ್, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಮಾದೇವು,ಕೆ.ಆರ್. ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬುಜಾ, ಮುಖಂಡರಾದ ಶಿವಕುಮಾರ್ ಮೊದಲಾದವರು ಇದ್ದರು.