ನಿತ್ಯನೂತನ, ಸನಾತನ ಬದುಕಾಗಬೇಕು: ರಾಘವೇಶ್ವರಶ್ರೀ

| Published : Feb 19 2024, 01:36 AM IST

ಸಾರಾಂಶ

ಶ್ರೀ ಶ್ರೀಧರ ಸ್ವಾಮಿಗಳು ಸಂಚರಿಸಿದ ಸ್ಥಳವಿದು. ಶ್ರೀ ಸದಾನಂದ ಸರಸ್ವತಿ ಸ್ವಾಮಿಗಳವರ ಸಾಧನಾ ಕ್ಷೇತ್ರ ಮತ್ತು ಅನೇಕ ರೀತಿಯಲ್ಲಿ ಪಾವಿತ್ರ್ಯವನ್ನು ಹೊಂದಿರುವ ಪುಣ್ಯಭೂಮಿಯಾಗಿದೆ. ಇಲ್ಲಿ ಅನಂತಶ್ರೀ ಗೋಶಾಲೆ ಇರುವುದು ಅರ್ಥಪೂರ್ಣವಾಗಿದೆ. ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆಗಳು ಸಾಕಾರಗೊಳ್ಳಬೇಕು. ಸಮಾಜಕ್ಕೆ ಬೆಳಕನ್ನು ಕೊಡುವ ನೆಲೆಯಾಗಬೇಕು ಎಂದು ಅವರು ಆಶಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು ಸೂರ್ಯ, ನದಿ ನಿತ್ಯ ನೂತನವಾಗಿರುತ್ತದೆ. ಪ್ರಕೃತಿಯೇ ಹಾಗೆ. ಪ್ರತಿಯೊಬ್ಬರ ಬದುಕೂ ನಿತ್ಯನೂತನ ಮತ್ತು ಸನಾತನ ಬದುಕಾಗಬೇಕು. ಬದುಕು ಜಡವಾಗಬಾರದು. ಮಂಗಳೂರು ಸಮುದ್ರದ ಪಕ್ಕದಲ್ಲೇ ಇದೆ. ಸಮುದ್ರದಂತೆ ಸಾಧ್ಯತೆಗಳೂ ಅಗಾಧವಾಗಿವೆ ಎಂದು ಶ್ರೀಸಂಸ್ಥಾನ ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಇತ್ತೀಚೆಗೆ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆವರಣದಲ್ಲಿ ನವೀಕೃತ ಶಂಕರಶ್ರೀ ಸಭಾಭವನ ಮತ್ತು ಶ್ರೀ ಶ್ರೀಧರ ಸ್ವಾಮಿಗಳ ಕಟ್ಟೆಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಶ್ರೀ ಶ್ರೀಧರ ಸ್ವಾಮಿಗಳು ಸಂಚರಿಸಿದ ಸ್ಥಳವಿದು. ಶ್ರೀ ಸದಾನಂದ ಸರಸ್ವತಿ ಸ್ವಾಮಿಗಳವರ ಸಾಧನಾ ಕ್ಷೇತ್ರ ಮತ್ತು ಅನೇಕ ರೀತಿಯಲ್ಲಿ ಪಾವಿತ್ರ್ಯವನ್ನು ಹೊಂದಿರುವ ಪುಣ್ಯಭೂಮಿಯಾಗಿದೆ. ಇಲ್ಲಿ ಅನಂತಶ್ರೀ ಗೋಶಾಲೆ ಇರುವುದು ಅರ್ಥಪೂರ್ಣವಾಗಿದೆ. ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆಗಳು ಸಾಕಾರಗೊಳ್ಳಬೇಕು. ಸಮಾಜಕ್ಕೆ ಬೆಳಕನ್ನು ಕೊಡುವ ನೆಲೆಯಾಗಬೇಕು ಎಂದು ಅವರು ಆಶಿಸಿದರು. ಕರ್ಣಾಟಕ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್​., ನಿವೃತ್ತ ಜಿಎಂ ಮಹಾಲಿಂಗೇಶ್ವರ ಭಟ್​, ಆರ್‌ಎಸ್‌ಎಸ್‌ ಮುಖಂಡ ಪಿ.ಎಸ್​.ಪ್ರಕಾಶ್​, ಉದ್ಯಮಿ ರಾಜೀವ ಶೆಟ್ಟಿ, ಶಂಕರ ಶಗ್ರಿತ್ತಾಯ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಆಡಳಿತ ಖಂಡದ ಸಂಯೋಜಕ ಹಾರಕರೆ ನಾರಾಯಣ ಭಟ್​, ಪಿಆರ್​ಒ ಹರಿಪ್ರಸಾದ್​ ಪೆರಿಯಾಪು, ಮಹಾಮಂಡಲ ಕಾರ್ಯದರ್ಶಿ ಉದಯಶಂಕರ ಭಟ್​ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್​ ಪೆದಮಲೆ, ಕಾಲೇಜು ಸೇವಾ ಸಮಿತಿ ಕಾರ್ಯಾಧ್ಯಕ್ಷ ಗಣೇಶ ಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್​, ವಲಯಗಳ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್​ ಕಬೆಕ್ಕೋಡು, ಡಿ.ವಿಶ್ವೇಶ್ವರ ಭಟ್​, ಡಾ.ಶಿವಶಂಕರ ಭಟ್​, ಮಂಗಳೂರು ಹವ್ಯಕ ಮಂಡಲ ಉಪಾಧ್ಯಕ್ಷ ರಾಜಶೇಖರ ಭಟ್​ ಕಾಕುಂಜೆ, ಮಂಗಳೂರು ಪ್ರಾಂತ್ಯ ಮಾತೃತ್ವಮ್​ ಅಧ್ಯಕ್ಷೆ ಸುಮಾ ರಮೇಶ್​, ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್​ ಕಾಶಿಮಠ, ಮಂಡಲ, ವಲಯ, ವಿವಿವಿ ಸಮಿತಿ ಪದಾಧಿಕಾರಿಗಳು, ಶ್ರೀ ಭಾರತೀ ಸಮೂಹ ಸಂಸ್ಥೆಯ ಪ್ರಾಂಶುಪಾಲೆ ಗಂಗಾರತ್ನ ಮತ್ತಿತರರಿದ್ದರು. ಸ್ವರ್ಣಪಾದುಕಾ ಪೂಜೆ :ಬೆಳಗ್ಗೆ ಕರ್ಣಾಟಕ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸ್ವರ್ಣಪಾದುಕಾ ಪೂಜೆ ಮತ್ತು ಶ್ರೀ ಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ ಶ್ರೀಗುರುಪಾದುಕಾ ಪೂಜೆ ನಡೆಯಿತು. ಬಿಜೈ ಕಾಪಿಕಾಡು ನಿವಾಸಿ ಸರವು ರಮೇಶ ಭಟ್​ ಅವರ ಶ್ರೀರಾಮ ನಿವಾಸದಲ್ಲಿ ಶ್ರೀಗುರುಭಿಕ್ಷಾ ಸೇವೆ, ಸಪರಿವಾರ ಶ್ರೀರಾಮ ದೇವರಿಗೆ ಪೂಜೆ ನಡೆಯಿತು.

ಕಾಲೇಜು ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಸ್ವಾಗತಿಸಿ, ನಿರೂಪಿಸಿದರು.