ಮಹಾತ್ಮರ ಜೀವನ ಸಂದೇಶ ಅಳವಡಿಸಲು ಉತ್ಸಾಹ ತೋರಬೇಕು-ಶಾಸಕ ಮಾನೆ

| Published : Aug 12 2024, 01:06 AM IST

ಮಹಾತ್ಮರ ಜೀವನ ಸಂದೇಶ ಅಳವಡಿಸಲು ಉತ್ಸಾಹ ತೋರಬೇಕು-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮರು, ಸತ್ಪುರುಷರು, ಸಮುದಾಯಗಳ ನಾಯಕರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲು ತೋರುವ ಉತ್ಸಾಹವನ್ನು ಅವರ ಜೀವನ ಸಂದೇಶಗಳನ್ನೂ ಅಳವಡಿಸಲು ತೋರಬೇಕಿದೆ. ಅಂದಾಗ ಮಾತ್ರ ಸಶಕ್ತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಮಹಾತ್ಮರು, ಸತ್ಪುರುಷರು, ಸಮುದಾಯಗಳ ನಾಯಕರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲು ತೋರುವ ಉತ್ಸಾಹವನ್ನು ಅವರ ಜೀವನ ಸಂದೇಶಗಳನ್ನೂ ಅಳವಡಿಸಲು ತೋರಬೇಕಿದೆ. ಅಂದಾಗ ಮಾತ್ರ ಸಶಕ್ತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕು ಗಂಗಾಮತಸ್ಥರ ಸಂಘ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪುತ್ಥಳಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನೇರ, ನಿಷ್ಠುರವಾದಿಯಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ತಮ್ಮ ವಚನಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು ತಿದ್ದಿದ್ದಾರೆ. ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಸಾರಿದ್ದಾರೆ. ಸಮ ಸಮಾಜ ನಿರ್ಮಿಸುವಲ್ಲಿ ಅವರ ಕ್ರಾಂತಿಕಾರಿ ವಚನಗಳು ಸಹಕಾರಿಯಾಗಿವೆ. ಇಂಥ ನಿಜಶರಣನ ಪುತ್ಥಳಿ ಹಾನಗಲ್ ನಗರದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವುದು ಸಂತಸ ತಂದಿದೆ. ಪ್ರತಿಷ್ಠಾಪನೆಗೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ತಾಲೂಕು ಗೌರವಾಧ್ಯಕ್ಷ ರಾಜೇಂದ್ರ ಬಾರ್ಕಿ, ಅಧ್ಯಕ್ಷ ಪ್ರದೀಪ ಶೇಷಗಿರಿ, ಪ್ರಧಾನ ಕಾರ್ಯದರ್ಶಿ ರವಿ ನಿಂಬಕ್ಕನವರ, ಕಾರ್ಯದರ್ಶಿ ಲೋಕೇಶ ಕೊಂಡೋಜಿ, ಸಂಚಾಲಕ ನಾರಾಯಣಪ್ಪ ಕಠಾರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಭರಮಣ್ಣ ಉಳಗಿ, ಮುಖಂಡರಾದ ಚಂದ್ರಪ್ಪ ಜಾಲಗಾರ, ಮಂಜು ಗೊರಣ್ಣನವರ, ಗುರುರಾಜ್ ನಿಂಗೋಜಿ, ಅಣ್ಣಪ್ಪ ಚಾಕಾಪೂರ, ಫಕ್ಕಿರೇಶ ಸಾಲಿ, ಪ್ರವೀಣ ಚಿಕ್ಕಣ್ಣನವರ, ಪ್ರವೀಣ ತುಮರಿಕೊಪ್ಪ, ಲಕ್ಷö್ಮಣ ವರ್ದಿ, ಪರಶುರಾಮ ನಿಂಗೋಜಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.