ಸಾರಾಂಶ
ತರೀಕೆರೆಯಲ್ಲಿ ಕಾನೂನು ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಶ್ರಮವಿಲ್ಲದ ಯಾವುದೇ ಕೆಲಸ ಯಶಸ್ವಿಯಾಗಲ್ಲ, ಅದರಲ್ಲೂ ವಕೀಲ ವೃತ್ತಿಯಲ್ಲಿ ಹೆಚ್ಚು ಶ್ರಮ ಪಡಬೇಕು ಎಂದು ಬೆಂಗಳೂರು ಕರ್ನಾಟಕ ನ್ಯಾಯಿಕಾ ತರಬೇತಿ ಕೇಂದ್ರ ಡಿ.ಆರ್.ವೆಂಕಟಸುದರ್ಶನ ಹೇಳಿದ್ದಾರೆ.
ಸೋಮವಾರ ವಕೀಲರ ಸಂಘ ತರೀಕೆರೆ, ತಾಲೂಕು ಕಾನೂನು ಸೇವೆಗಳ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ವಕೀಲರ ಸಂಘದಲ್ಲಿ ಭಾರತೀಯ ಸುರಕ್ಷಾ ಸಂಹಿತೆ 2023 ವಿಷಯ ಕುರಿತು ಏರ್ಪಡಿಸಿದ್ದ ಕಾನೂನು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಶ್ರಮ ಇಲ್ಲದೆ ಯಾವದೇ ಕೆಲಸ ಯಶಸ್ವಿಯಾಗಲು ಸಾಧ್ಯವಿಲ್ಲ, ಅದರಲ್ಲೂ ಕಿರಿಯ ವಕೀಲರು ಹೆಚ್ಚೆಚ್ಚು ಓದಬೇಕು, ಕಾನೂನು ಕಲಂಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಈಗ ಸಮಸ್ಯೆ ಎದುರಾಗಬಹುದು, ಶ್ರಮ ವಹಿಸಿದಷ್ಟು ಮುಂದೆ ನಿಮ್ಮ ಜೀವನವನ್ನು ಭಗವಂತ ಒಳ್ಳೆಯದು ಮಾಡುತ್ತಾನೆ. ವಿದ್ಯೆ ಸಂಪಾದನೆ ಮಾಡಬೇಕು, ಚೆನ್ನಾಗಿ ಓದಿ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಲಿದರು.
ಇಂದು ಕಂಪ್ಯೂಟರ್ ಯುಗ ಹಾಗಾಗಿ ಪ್ರತಿಯೊಂದು ಕೇಸುಗಳನ್ನು ಚೆನ್ನಾಗಿ ನಡೆಸಬೇಕು, ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತಾ ನಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕಾನೂನು ಉಪನ್ಯಾಸ ಕಾರ್ಯಕ್ರಮ ಅರ್ಥಪೂರ್ಣವಾದ ಕಾರ್ಯಕ್ರಮ. ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಶೇಖರ್ ನಾಯ್ಕ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಸುರೇಶ್ ಚಂದ್ರ ಮಾತನಾಡಿದರು. ಅಪರ ಸರ್ಕಾರಿ ವಕೀಲರು ಟಿ.ಜೆ.ಜಗದೀಶ್, ಎ.ಪಿ.ಪಿ.ತ್ಯಾಗರಾಜ್ ವಕೀಲರ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಕೀಲರು ಪ್ರಕಾಶ್ ಸ್ವಾಗತಿಸಿದರು. ವಕೀಲರು ಶಿವಶಂಕರ್ ನಾಯ್ಕ ಪ್ರಾರ್ಥಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಸುರೇಶ್ ಚಂದ್ರ ನಿರೂಪಿಸಿದರು. ವಕೀಲರು ಎನ್.ವೀರಭದ್ರಪ್ಪ ವಂದಿಸಿದರು.8ಕೆಟಿಆರ್.ಕೆ.3ಃತರೀಕೆರೆಯಲ್ಲಿ ಏರ್ಪಡಿಸಿದ್ದ ಕಾನೂನು ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ನೆರವೇರಿಸಿದರು. ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಡಿ.ಆರ್.ವೆಂಕಟಸುದರ್ಶನ ವಕೀಲರ ಸಂಘದ ಅಧ್ಯಕ್ಷ ಶೇಖರ್ ನಾಯ್ಕ, ಅಪರ ಸರ್ಕಾರಿ ವಕೀಲ ಟಿ.ಜೆ.ಜಗದೀಶ್, ಎ.ಪಿ.ಪಿ.ತ್ಯಾಗರಾಜ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಸುರೇಶ್ ಚಂದ್ರ ಮತ್ತಿತರರು ಇದ್ದರು.