ಸಾರಾಂಶ
ಅಧ್ಯಯನಶೀಲತೆಯಿಂದ ಕಲಿತಾಗ ಮಾತ್ರ ಉತ್ತಮ ಬದುಕು ನಿರ್ಮಿಸಿಕೊಳ್ಳಲು ಸಾಧ್ಯ.
ಶಿಕ್ಷಕರ ದಿನಾಚರಣೆ ಮತ್ತು ಸರ್ಕಾರಿ ನೌಕರರ ಸಮಾಗಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಟ್ಟೂರುಅಧ್ಯಯನಶೀಲತೆಯಿಂದ ಕಲಿತಾಗ ಮಾತ್ರ ಉತ್ತಮ ಬದುಕು ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಇಲ್ಲಿನ ದಿ ಪ್ರೀಸ್ಟಿನ್ ಸ್ಕೂಲ್ ಕಾರ್ಯದರ್ಶಿ ಎಂಎಂಜೆ ಶೋಭಿತ್ ಹೇಳಿದರು.
ಪಟ್ಟಣದ ರೇಣುಕ ಸಭಾಂಗಣದಲ್ಲಿ ಕೊಟ್ಟೂರು ಸರ್ಕಾರಿ ನೌಕರರ ಸಂಘ ಶುಕ್ರವಾರ ಸಂಜೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಸರ್ಕಾರಿ ನೌಕರರ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು ಅದರಲ್ಲೂ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ಕಲಿಕೆಗೆ ಅರ್ಪಿಸಿಕೊಂಡ ಕಾರಣಕ್ಕಾಗಿ ಮಕ್ಕಳು ಉತ್ತಮ ಸಾಧನೆ ತೋರುತ್ತಿದ್ದಾರೆ ಎಂದರು.
ಉಪನ್ಯಾಸಕ ಬಸವರಾಜ ಮಾತನಾಡಿ, ಕಲಿಕೆಯಲ್ಲಿ ಜಾತಿ, ಮತ, ಧರ್ಮ ನೋಡದೆ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ಶಿಕ್ಷಕರು ಅರ್ಪಿಸಿದ್ದಾರೆ. ಈ ದಿನಗಳಲ್ಲಿ ಗುರುಗಳ ಬಗ್ಗೆ ಗೌರವ ಕಡಿಮೆಯಾಗುವುದರ ಜೊತೆಗೆ ಕೆಲವರು ನಕಾರಾತ್ಮಕ ಗುಣ ಅಳವಡಿಸಿಕೊಳ್ಳುತ್ತಿರುವುದು ಅಧಃಪಥನಕ್ಕೆ ಕಾರಣವಾಗಲಿದೆ ಎಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯೋಗೇಶ್ವರ ದಿನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧ ಕೋಸ್‌ರ್ಗೆ ಆಯ್ಕೆಯಾ ದಸರ್ಕಾರಿ ನೌಕರರ ಸಂಘದ ಮಕ್ಕಳಾದ ಆರ್ಯನ್ ಕಾಮಶೆಟ್ಟಿ, ಸಂಜಯ, ಎಸ್. ಸ್ನೇಹ, ಡಾ. ಎಸ್. ಸ್ಪೂರ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು .ಪಿಯು ಕಾಲೇಜಿನ ಉಪನ್ಯಾಸಕ ಡಾ. ಜಗದೀಶ್ ಚಂದ್ರಬೋಸ್, ಶಶಿಕಲಾ ಎಚ್., ಎಂ. ಸೋಮಶೇಖರ ರಾಜ, ಜಿ ಸಿದ್ದಪ್ಪ, ಶಿವಕುಮಾರ್ ಎಂ., ಚನ್ನೇಶಪ್ಪ ಎಸ್., ಎಸ್.ಎ.ವಿ. ಗುರುಬಸರಾಜ ಮತ್ತು ಪ್ರಸಕ್ತ ಸಾಲಿನ ಜಿಲ್ಲಾ ಪ್ರಶಸ್ತಿ ಪಡೆದ ಕೆಂಚಮ್ಮ, ಸಹ ಶಿಕ್ಷಕ ಮರೂರು ಅವರನ್ನು ಸನ್ಮಾನಿಸಲಾಯಿತು.
ಬಿ. ಮಂಜುನಾಥ ಸ್ವಾಗತಿಸಿದರು. ಸಿ.ಮ ಗುರುಬಸವರಾಜ ನಿರೂಪಿಸಿದರು. ನಂತರ ಕಾರ್ಯಕ್ರಮದಲ್ಲಿ ಸ್ನೇಹಲೋಕ ಮೆಲೋಡಿಸ್‌ನಿಂದ ಸಂಗೀತ ಕಾರ್ಯಕ್ರಮ ಮತ್ತು ಹಂಸಪ್ರಿಯ ನಾಟ್ಯ ಶಾಲೆಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಶಿಕ್ಷಕರು ಮತ್ತು ಸರ್ಕಾರಿ ನೌಕರರು ಭಾಗವಹಿಸಿದ್ದರು.