ಸಾರಾಂಶ
ವೈದ್ಯರ ಮುಷ್ಕರದ ಮಧ್ಯೆಯೂ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಲಭ್ಯವಿದೆ. ತುರ್ತು ಚಿಕಿತ್ಸೆಗೆ ಆಗಮಿಸುತ್ತಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಸಮಸ್ಯೆಯಾಗದಂತೆ ವೈದ್ಯರು ಕ್ರಮ ವಹಿಸಿದ್ದಾರೆ.
ಮದ್ದೂರು: ಕೋಲ್ಕತ್ತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪಟ್ಟಣದಲ್ಲಿ ಓಪಿಡಿ ಸೇವೆ ಬಂದ್ ಮಾಡಿ ವೈದ್ಯರು ಪ್ರತಿಭಟನೆ ನಡೆಸಿದರು. ದೇಶಾದ್ಯಂತ ನಡೆಯುತ್ತಿರುವ ಮುಷ್ಕರಕ್ಕೆ ಬೆಂಬಲ ನೀಡಿದ ವೈದ್ಯರು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆ.17ರ ಬೆಳಗ್ಗೆ 6ರಿಂದ ಆ.18ರ ಬೆಳಗ್ಗೆ 6ರವರೆಗೆ ಮುಷ್ಕರ ನಡೆಲು ತೀರ್ಮಾನಿಸಿದ್ದಾರೆ.
24 ಗಂಟೆಗಳ ಕಾಲ ನಡೆಯುವ ಮುಷ್ಕರದ ವೇಳೆ ಹೊರ ರೋಗಿ ವಿಭಾಗ, ವೈದ್ಯಕೀಯ ಸೇವೆಗಳು, ರೋಗಿಗಳ ದಾಖಲಾತಿ ಸಹಿತ ಪ್ರಮುಖ ಸೇವೆಗಳನ್ನು ಬಂದ್ ಮಾಡಲಾಗಿದೆ.ವೈದ್ಯರ ಮುಷ್ಕರದ ಮಧ್ಯೆಯೂ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಲಭ್ಯವಿದೆ. ತುರ್ತು ಚಿಕಿತ್ಸೆಗೆ ಆಗಮಿಸುತ್ತಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಸಮಸ್ಯೆಯಾಗದಂತೆ ವೈದ್ಯರು ಕ್ರಮ ವಹಿಸಿದ್ದಾರೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ದಾದಿಯರು ಎಂದಿನಂತೆ ಒಳರೋಗಿಗಳಿಗೆ ಹಾಗೂ ತುರ್ತು ಅಗತ್ಯ ಇದ್ದವರಿಗೆ ಸೇವೆ ನೀಡುತ್ತಿರುವುದು ಕಂಡು ಬಂದಿತು.