ಜೆಎಸ್‌ಸ್ ಸಂಗೀತ ಸಂಗೀತ ಎನ್ನುವುದು ಮಹಾನ್ ಮಾರ್ಗದರ್ಶನವಾಗಿ ಬೆಳೆದು ಬಂದಿದೆ. ರಾಜಾಶ್ರಯದ ಬಳಿಕ ಸುತ್ತೂರು ಪರಂಪರೆ ಸಂಗೀತ ಪರಂಪರೆ ಬೆಳೆಸುವ ಕೆಲಸ ಆಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆ ಅಂಗವಾಗಿ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಆಯೋಜಿಸಿದ್ದ ಸಂಗೀತ ಸಮ್ಮೇಳನವು ಶನಿವಾರ ಸಂಪನ್ನಗೊಂಡಿತು.ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಐದು ದಿನಗಳ ಕಾಲ ನಡೆದ ಸಂಗೀತ ಸಮ್ಮೇಳನ ಸಂಗೀತಾಂಜಲಿ, ವಿದ್ವತ್ ಗೋಷ್ಠಿಗಳ ಮೂಲಕ ಸಂಗೀತ ಪ್ರಿಯರ ಮನ ತಣಿಸಿ ಶಾಸ್ತ್ರೀಯ ಸಂಗೀತ ಹಿರಿಮೆ ಸಾರಿತು.
ಸಮ್ಮೇಳನಾಧ್ಯಕ್ಷೆ ಡಾ.ಟಿ.ಎಸ್. ಸತ್ಯವತಿ ಅವರಿಗೆ ಸಂಗೀತ ವಿದ್ಯಾನಿಧಿ ಪ್ರಶಸ್ತಿ ಪ್ರದಾನ ಮತ್ತು ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.ಪ್ರಶಸ್ತಿ ಸ್ವೀರಿಸಿದ ವಿದುಷಿ ಡಾ.ಟಿ.ಎಸ್. ಸತ್ಯವತಿ ಮಾತನಾಡಿ, ಉದಾತ್ತ ಭಾವನೆಯಿಂದ ಇನ್ನೊಬ್ಬರನ್ನು ಕಾಣಬೇಕು ಎಂಬುದನ್ನು ಸುತ್ತೂರು ಮಠ ಕಲಿಸಲಿದೆ. ನುಡಿ ನಡೆ ಒಂದಾಗಿರುವ ಅಪರೂಪದ ಸಂಗಮ ದೇಶಿಕೇಂದ್ರ ಸ್ವಾಮೀಜಿ ಎಂದು ಬಣ್ಣಿಸಿದರು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸಿ.ಎ. ಶ್ರೀಧರ್ ಮಾತನಾಡಿ, ಹೃದಯ ಮತ್ತು ಬುದ್ಧಿ ಪ್ರಚೋದಕವಾದ ಗೋಷ್ಠಿಗಳು ಸಂಗೀತಾಸ್ತರನ್ನು ಚಿಂತನಶೀಲರನ್ನಾಗಿ ಮಾಡಿದೆ. ಕಾಲಾವಕಾಶ ಕಡಿಮೆ ಇದ್ದರೂ ಬಹು ವಿದ್ವತ್ ಪೂರ್ಣವಾಗಿ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಜೆಎಸ್‌ಸ್ ಸಂಗೀತ ಸಂಗೀತ ಎನ್ನುವುದು ಮಹಾನ್ ಮಾರ್ಗದರ್ಶನವಾಗಿ ಬೆಳೆದು ಬಂದಿದೆ. ರಾಜಾಶ್ರಯದ ಬಳಿಕ ಸುತ್ತೂರು ಪರಂಪರೆ ಸಂಗೀತ ಪರಂಪರೆ ಬೆಳೆಸುವ ಕೆಲಸ ಆಗುತ್ತಿದೆ ಎಂದರು.ಮದ್ರಸ್‌ನಲ್ಲಿ ಸಂಗೀತ ಅಕಾಡೆಮಿ ಇದೆ. ಬೆಂಗಳೂರಿನಲ್ಲಿ ಸಂಗೀತ ಸಮಾಜ ಇದೆ. ಸಂಗೀತ ಸಮ್ಮೇಳನ ಮತ್ತು ವಿದ್ವತ್ ಗೋಷ್ಠಿ ಮೈಸೂರಿನಲ್ಲಿ ಅವಶ್ಯವಾಗಿದೆ ಎಂದು ಮಹಾದೇವಪ್ಪ ಅವರಿಗೆ ಮನವಿ ಮಾಡಿದೆ. ಮಹಾದೇವಪ್ಪ ಮನೆ ಮನೆ ಜೋಳಿಗೆ ಇಟ್ಟುಕೊಂಡು ವಿದ್ವಂಸರಿಂದ ದೇಣಿಗೆ ಸಂಗ್ರಹಿಸಿ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಗೆ ಸದಸ್ಯರನ್ನಾಗಿ ಮಾಡಿದರು. ಇಂದು ಮಹಾನ್ ಸಂಘಟನೆಯಾಗಿ ಬೆಳೆದಿದೆ. ಸುತ್ತೂರು ಶ್ರೀಗಳು ಕಲೆಯನ್ನು ಪೋಷಿಸುವ ಮಹಾನೀಯರು ಎಂಬುದಾಗಿ ಅವರು ತಿಳಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನಸ್ಸಿನ ಒತ್ತಡ, ದುಖಃವಾದಾಗ ಮನಃ ಪರಿವರ್ತನೆಗೊಳಿಸುವ ಸಿದೌಷಧ ಸಂಗೀತ. ಸಂಗೀತವೂ ಮನಸ್ಸುಗಳಿಗೆ ಸಾಂತ್ವನಗಳನ್ನು ಹೇಳಲಿದೆ. ಭಾರತವು ಜಗತ್ತಿಗೆ ನೀಡಿದ ಅಪೂರ್ವ ಕೊಡುಗೆಗಳಲ್ಲಿ ಸಂಗೀತ-ನೃತ್ಯ-ಕಲೆ ಪರಂಪರೆ ಒಂದಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿರುವ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತವಿದೆ. ಆದರೆ, ಮನರಂಜನೆಗಾಗಿ ಮಾಡುವ ಸಂಗೀತ ಆಕರ್ಷಣೆಯಿಂದ ಶಾಸ್ತ್ರೀಯ ಸಂಗೀತಕ್ಕೆ ಹಿನ್ನಡೆಯಾಗಿದೆ ಎಂದರು.ಪ್ರಸ್ತುತ ವಿದೇಶಿದಲ್ಲಿ ನೆಲೆಸಿರುವ ಭಾರತೀಯರು ದೇಶದ ಕಲೆ, ಸಂಸ್ಕೃತಿ, ಸಂಗೀತದ ಮಹತ್ವವನ್ನು ಹೆಚ್ಚು ಸಾರಿ ವಿದೇಶಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇದು ಭಾರತೀಯರು ಹೆಮ್ಮೆ ಪಡುವ ಸಂಗತಿ. ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿ ಬೆಳೆಸಬೇಕು. ಸಂಗೀತ ವಿದ್ವಂಸರಾಗುವುದು ತಪ್ಪಸ್ಸು. ಇಡೀ ಬದುಕನ್ನೆ ಸಂಗೀತ ಸಮರ್ಪಿಸುವುದು ಸುಲಭವಲ್ಲ ಎಂದು ಅವರು ಹೇಳಿದರು.
ಸಂಗೀತ ಸ್ಪರ್ಧೆ ವಿಜೇತರು:ವಚನ ಗಾಯನ ಸೀನಿಯರ್ ವಿಭಾಗದಲ್ಲಿ ಅಂಜನಾ ಮಠಂ (ಪ್ರ), ಎ.ಜಿ. ಪುನೀತ್ (ದ್ವಿ), ವಚನ ಗಾಯನ ಜೂನಿಯರ್ ವಿಭಾಗದಲ್ಲಿ ಚಾರ್ವಿ ಸತೀಶ್ (ಪ್ರ), ಎನ್. ವಿಧಾತ್ರಿ (ದ್ವಿ), ಶಾಸ್ತ್ರೀಯ ಸಂಗೀತ ಸೀನಿಯರ್ ವಿಭಾಗದಲ್ಲಿ ಅಂಜನಾ ಮಠಂ (ಪ್ರ), ಅನಘಾ ಭಾರಧ್ವಾಜ್ (ದ್ವಿ), ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಲಲಿತ ಶ್ರೀರಾಮ್ (ಪ್ರ), ಶ್ರೀಹಾನ್ ಸುಹಾಸ್ ಕರ್ವೆ (ದ್ವಿ), ಶಾಸ್ತ್ರೀಯ ವಾದ್ಯ ಸಂಗೀತ ವಯೋಲಿನ್ ಸೀನಿಯರ್ ವಿಭಾಗದಲ್ಲಿ ಎ.ಜಿ. ಪುನೀತ್ (ಪ್ರ), ಪಿ.ಎಸ್. ಶೃತ (ದ್ವಿ), ಜೂನಿಯರ್ ವಿಭಾಗದಲ್ಲಿ ಲಲಿತ ಶ್ರೀರಾಮ್ (ಪ್ರ), ವಿ. ಸಮರ್ಥ್ (ದ್ವಿ), ಶಾಸ್ತ್ರೀಯ ವಾದ್ಯ ಸಂಗೀತ-ವೀಣೆ ಜೂನಿಯರ್ ವಿಭಾಗದಲ್ಲಿ ಶ್ರೀರಂಗ ವಿ.ಚಕ್ರವರ್ತಿ (ಪ್ರ), ಎಂ.ಬಿ. ರಾಘವಿ (ದ್ವಿ), ಕೊಳಲು ಜೂನಿಯರ್ ವಿಭಾಗದಲ್ಲಿ ಬಿ. ಓಂಕಾರ್ (ಪ್ರ), ಮೃದಂಗ ಜೂನಿಯರ್ ವಿಭಾಗದಲ್ಲಿ ಕೆ. ಪ್ರಹಲ್ಲಾದ್ ದಾಸ್ (ಪ್ರ), ನಿರುಪಮ ದಿವಾಕರ್ (ದ್ವಿ) ಬಹುಮಾನ ಪಡೆದರು.