ಸಾರಾಂಶ
ಹೈ ಬೀಂ ಎಲ್‌ಇಡಿ ಬಲ್ಬುಗಳಿಂದ ಎದುರಿನಿಂದ ಬರುವ ವಾಹನಗಳಿಗೆ ಸ್ಪಷ್ಟವಾಗಿ ರಸ್ತೆ ಗೋಚರಿಸದೆ ಅಪಾಯ ತಂದೊಡ್ಡುತ್ತಿತ್ತು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಹೈ ಬೀಂ ಎಲ್‌ಇಡಿ ಲೈಟ್‌ನಿಂದ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಏರಿಕೆ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಬ್ರಿಯ ಠಾಣಾಧಿಕಾರಿ ಮಹೇಶ್ ಟಿ.ಎಂ. ನೇತೃತ್ವದಲ್ಲಿ ಹೆಬ್ರಿ ತಾಲೂಕಿನ ನಾಡ್ಪಾಲು, ಸೋಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್‌ಇಡಿ ಬಳಸಿದ ವಾಹನಗಳನ್ನು ತಪಾಸಣೆ ಮಾಡಿ ದಂಡ ವಿಧಿಸಿದ್ದಾರೆ.ಹೈ ಬೀಂ ಎಲ್‌ಇಡಿ ಬಲ್ಬುಗಳಿಂದ ಎದುರಿನಿಂದ ಬರುವ ವಾಹನಗಳಿಗೆ ಸ್ಪಷ್ಟವಾಗಿ ರಸ್ತೆ ಗೋಚರಿಸದೆ ಅಪಾಯ ತಂದೊಡ್ಡುತ್ತಿತ್ತು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಕನ್ನಡಪ್ರಭದ ಜೊತೆ ಮಾತನಾಡಿದ ಹೆಬ್ರಿಯ ಠಾಣಾಧಿಕಾರಿ ಮಹೇಶ್ ಟಿ.ಎಂ., ಆಗುಂಬೆ ಸೇರಿದಂತೆ ಶಿವಮೊಗ್ಗ, ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಸಂಚರಿಸುವ ವಾಹನಗಳಲ್ಲಿ ಹೆಚ್ಚುವರಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದ್ದು, ಎದುರಿನಿಂದ ಬರುವ ವಾಹನಗಳಿಗೆ ಇದು ತೊಂದರೆಯಾಗುತಿದೆ. ಇದರಿಂದ ಅಪಘಾತ ನಡೆಯುತ್ತಿದೆ. ನಮ್ಮಂತೆಯೆ ಎಲ್ಲರೂ ಬದುಕಬೇಕು ಅದಕ್ಕಾಗಿ ಅಪಘಾತ ತಡೆಯಬೇಕು. ಎಲ್ಲ ವಾಹನ ಸವಾರರು ಕಾನೂನಿಗೆ ಗೌರವ ನೀಡಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಎಂದರು.