ಸಾರಾಂಶ
ದೇವಾಲಯಗಳಲ್ಲಿ ವಿಶೇಷ ಪೂಜೆ । ಪಟಾಕಿ ಸಿಡಿಸಿ ಸಂಭ್ರಮಾಚರಣೆ,
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುನೆರೆಯ ಪಾಕಿಸ್ಥಾನದ ಉಗ್ರರ ತಾಣಗಳ ಮೇಲೆ ಭಾರತೀಯ ಸೈನಿಕರು ಯಶಸ್ವಿ ಕಾರ್ಯಾಚರಣೆ ನಡೆಸಿದ ಹಿನ್ನಲೆಯಲ್ಲಿ ಕಾಫಿ ನಾಡಿನಾದ್ಯಂತ ಬುಧವಾರ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಚಿಕ್ಕಮಗಳೂರು, ಎನ್.ಆರ್.ಪುರ, ಬೀರೂರು ಹಾಗೂ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು.ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶಂಕರಮಠದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಬಳಿಕ ದೇವಾಲಯದ ಹೊರ ಭಾಗದಲ್ಲಿ ಭಾರತೀಯ ಸೇನೆಗೆ ಜಯಘೋಷ ಹಾಕಿದರು.
ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬೀರೂರಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಎನ್.ಆರ್.ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.ತಕ್ಕ ಶಾಸ್ತಿ : ಪಹಲ್ಗಾಮ್‌ನಲ್ಲಿ ಭಾರತೀಯರ ಸಿಂಧೂರಕ್ಕೆ ಕೈ ಹಾಕಿದ ಪಾಕ್ ಉಗ್ರರಿಗೆ ಆಪರೇಷನ್ ಸಿಂಧೂರದಿಂದ ತಕ್ಕ ಶಾಸ್ತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಸೇನೆ ಪ್ರತೀಕಾರ ತೆಗೆದುಕೊಂಡ ಬಗ್ಗೆ ಪಹಲ್ಗಾಮ್ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತು ತಪ್ಪೋದಿಲ್ಲ ಎಂಬ ನಂಬಿಕೆ ಇತ್ತು. ಅಲ್ಲದೇ ಭಾರತೀಯ ಸೇನೆ ಮೇಲೂ ಅಪಾರ ನಂಬಿಕೆ ಇತ್ತು, 1971ರಲ್ಲಿ ಯುದ್ಧ ಗೆದ್ದೆವು. ಆದರೆ, ಸಂಧಾನದಲ್ಲಿ ಸೋತಿದ್ದೆವು ಭಾರತೀಯ ಸಹೋದರಿಯ ಸಿಂಧೂರ ಅಳಿಸಲು ಬಂದವರನ್ನು ಅಳಿಸಿದ್ದೇವೆ ಎಂದು ಹೇಳಿದರು.ಪ್ರಧಾನಿ ಮೋದಿ ಭಾರತೀಯ ಸಿಂಧೂರ ಎಂಬ ಹೆಸರಿಗೆ ಬೆಲೆ ತಂದುಕೊಟ್ಟಿದ್ದಾರೆ. ನಮ್ಮ ದೇಶದ ಸೈನಿಕರು ಪಾಕ್ ಉಗ್ರರನ್ನು ಪೂರ್ಣ ನಿರ್ನಾಮ ಮಾಡಿ, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಆದರೆ, ಒಂದು ಸಲ ಭಯೋತ್ಪಾದಕರನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಟ್ವಿಟ್ ಡಿಲೀಟ್ ಬಗ್ಗೆ ಮಾತನಾಡಿದ ಅವರು, ನಾಗರಿಕರ ನಡುವೆ ಶಾಂತಿ ಇರಬೇಕು. ಶತ್ರುಗಳನ್ನು ಮಟ್ಟ ಹಾಕುವುದು ಶಾಂತಿಯೇ, ಶಾಶ್ವತ ಶಾಂತಿಗೆ ಕಾರಣವಾಗುತ್ತದೆ. ರಾಜ್ಯ ಕಾಂಗ್ರೆಸ್ಸಿಗೆ ನಾನು ಸಹ ಟ್ವಿಟ್ ಮಾಡಿದ್ದೆ. ರಾಜ್ಯ ಕಾಂಗ್ರೆಸ್ ಟ್ವಿಟ್ ಡಿಲೀಟ್ ಮಾಡಿರುವುದನ್ನು ನೋಡಿದ್ದೇನೆ. ಇದು ಬದಲಾಗಿರುವ ಕಾಂಗ್ರೆಸ್ ಮನಸ್ಥಿತಿ ಎಂದರು.ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಯೋಗ್ಯತೆಯನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಮೇಲೆ ಜನರಿಗೆ ಅಪನಂಬಿಕೆ, ಜಿಗುಪ್ಸೆ ಮೂಡಿಸುತ್ತಿದೆ ಎಂದು ಆರೋಪಿಸಿದರು.
-- ಬಾಕ್ಸ್ ---ಕೊಪ್ಪದಲ್ಲಿ ಆಪರೇಷನ್ ಸಿಂಧೂರದ ವಿಜಯೋತ್ಸವಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರದ ವಿಜಯೋತ್ಸವನ್ನು ಬಸರೀಕಟ್ಟೆಯಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ, ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ಪ್ರತಿಯೊಬ್ಬ ದೇಶವಾಸಿ ಭಾರತ ಸರ್ಕಾರ ಹಾಗೂ ರಾಷ್ಟ್ರದ ಸೈನಿಕರೊಂದಿಗೆ ಸದಾ ನಿಲ್ಲಲಿದೆ ಎಂದರು.ಕಳೆದ ಏ. 22 ರಂದು ಪಾಕಿಸ್ತಾನ ಪ್ರಯೋಜಿತ ಭಯೋತ್ಪಾದಕರು ದೇಶದ ಮುಕುಟ ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ದೇಶದ ಹೆಣ್ಣು ಮಕ್ಕಳ ಸಿಂಧೂರವನ್ನು ಅಳಿಸಿ ದೇಶವಾಸಿಗಳ ನರಮೇಧಕ್ಕೆ ಇಂದು ಭಾರತ ದೇಶ ಪಾಕಿಸ್ತಾನಕ್ಕೆ ನುಗ್ಗಿ ಒಂಬತ್ತು ಕಡೆಗಳಲ್ಲಿ ವಾಯುದಾಳಿ ಮಾಡಿ ದೇಶ ವಾಸಿಗಳ ಆತ್ಮ ಸ್ಥೈರ್ಯ ಹೆಚ್ಚುವಂತೆ ಮಾಡಿದೆ. ಜಾಗತಿಕವಾಗಿ ಬಹುತೇಕ ಎಲ್ಲಾ ದೇಶದ ಬೆಂಬಲದೊಂದಿಗೆ ದೇಶದ ಪ್ರಧಾನಿ ಯಶಸ್ವಿಯಾಗಿದ್ದಾರೆ. ಸೈನಿಕರೊಂದಿಗೆ ಸದಾ ದೇಶದ ಜನತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಸಿಎಲ್‌ಡಿ ನಿರ್ದೇಶಕ ಕಿರಣ್ ಕುಂಬಾರ್ ಕೊಡಿಗೆ, ಅತ್ತಿಕೊಡಿಗೆ ಪಾಕ್ಸ್ ನಿರ್ದೇಶಕರ ಗುರುರಾಜ್ ಪಟೇಲ್, ಗ್ರಾಪಂ ಸದಸ್ಯೆ ಅಶ್ವಿನಿ ಮಣಿಕಂಠನ್, ಡಾ. ಅರುಣ್ ಕುಮಾರ್, ಧರ್ಮರಾಜ್, ಕಿರಣ್ ಕಾರ್ಲೋ , ಜೆರಾಲ್ಡ್, ಮಹೇಶ್, ನವ್ಯ ಪ್ರಶಾಂತ್ ಹಾಗೂ ಕಾರ್ಯಕರ್ತರು ಇದ್ದರು. 7 ಕೆಸಿಕೆಎಂ 3ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶಂಕರಮಠ ಎದುರು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.