ಹೊಸಕೋಟೆ: ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಆಗಿದ್ದ ಪುಟ್ಪಾತ್ ಅತಿಕ್ರಮಣ ತೆರವಿಗೆ ನಗರಾಯುಕ್ತ ನೀಲಾ ಲೋಚನ ಪ್ರಭು ನೇತೃತ್ವದಲ್ಲಿ ಹೊಸಕೋಟೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾಲನೆ ನೀಡಿದರು

ಹೊಸಕೋಟೆ: ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಆಗಿದ್ದ ಪುಟ್ಪಾತ್ ಅತಿಕ್ರಮಣ ತೆರವಿಗೆ ನಗರಾಯುಕ್ತ ನೀಲಾ ಲೋಚನ ಪ್ರಭು ನೇತೃತ್ವದಲ್ಲಿ ಹೊಸಕೋಟೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾಲನೆ ನೀಡಿದರು.

ಜೆಸಿಬಿಗಳೊಂದಿಗೆ ಪೊಲೀಸ್‌ ಭದ್ರತೆಯಲ್ಲಿ ಪುಟ್ಪಾತ್ ತೆರವಿಗೆ ಮುಂದಾಗಿರುವ ಅಧಿಕಾರಿಗಳು ಕಾಲೇಜು ರಸ್ತೆ, ಮಾರುಕಟ್ಟೆ ರಸ್ತೆ, ಮೇಲಿನ ಪೇಟೆ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಪುಟ್ಪಾತ್ ತೆರವು ಮಾಡಿದ್ದಾರೆ.

ಮುಂಜಾನೆ ೯ ಗಂಟೆಗೆ ಆರಂಭಗೊಂಡ ತೆರವು ಕಾರ್ಯ ಸಂಜೆವರೆಗೆ ನಿರಂತರವಾಗಿ ನಡೆಯಿತು. ಕೆಲ ಭಾಗದಲ್ಲಿ ಅಂಗಡಿ ಮಾಲೀಕರು ನಾವೇ ತೆರವು ಮಾಡುತ್ತೇವೆಂದರೂ ಕೇಳದೆ ಜೆಸಿಬಿಗಳ ಹೊಡೆದುರುಳಿಸಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ನಗರದಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಆಯ್ದ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಗಂಗಮ್ಮ ಗುಡಿ ರಸ್ತೆ, ಕಣ್ಣೂರಹಳ್ಳಿ ರಸ್ತೆ, ಚಿಕ್ಕೇಗೌಡ ಕಲ್ಯಾಣ ಮಂಟಪ ರಸ್ತೆ ಸೇರಿದಂತೆ ಹಲವಾರು ರಸ್ತೆಗಳಲ್ಲಿ ಏಕ ಮುಖ ಸಂಚಾರದಿಂದ ವಾಹನ ದಟ್ಟಣೆ ನಿಯಂತ್ರಣಕ್ಕೆ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ.

ಫೋಟೋ: ೨೫ ಹೆಚ್‌ಎಸ್‌ಕೆ ೪ ಮತ್ತು ೫

೪: ಹೊಸಕೋಟೆಯ ಮೇಲಿನಪೇಟೆ ಮುಖ್ಯ ರಸ್ತೆಯ ರಸ್ತೆ ಬದಿ ಅಂಗಡಿಯ ಮೇಲ್ಚಾವಣಿ ತೆರವುಗೊಳಿಸುತ್ತಿರುವ ದೃಶ್ಯ.

೪: ಹೊಸಕೋಟೆ ನಗರದ ಬಸ್ ನಿಲ್ದಾಣದ ಬಳಿ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.