ಹೊರದೇಶದಲ್ಲೂ ಅಧ್ಯಯನ ಅವಕಾಶ: ಅಶೋಕ್ ಹಾರನಹಳ್ಳಿ

| Published : Mar 15 2024, 01:20 AM IST

ಸಾರಾಂಶ

ನಗರದ ಸಾಲಗಾಮೆಯಲ್ಲಿರುವ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಲ್ಯೂಮ್ನಿ ಹಾಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಲೆನಾಡು ಎಂಜಿನಿಯರಿಂಗ್ ಕಾಲೇಜ್ ಹಾಗೂ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲೈಫ್ ಪ್ರೈವೇಟ್ ಲಿಮಿಟೆಡ್ ಫೆಡರೇಷನ್ ಯೂನಿವರ್ಸಿಟಿ ಜತೆಗಿನ ಒಪ್ಪಂದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ । ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಜತೆ ಒಪ್ಪಂದ

ಕನ್ನಡಪ್ರಭ ವಾರ್ತೆ ಹಾಸನ

ಕೇವಲ ತರಗತಿಯಲ್ಲಿ ಪಾಠ ಕಲಿಯುವುದಕ್ಕೆ ಆಗುವುದಿಲ್ಲ. ಯಾವ ತರಬೇತಿ ಅವಶ್ಯಕತೆ ಇದೆಯೋ ಅಂತಹ ತರಬೇತಿ ಕೊಡಬೇಕಾಗಿದ್ದು, ವಿದ್ಯಾರ್ಥಿಗಳಿಗೆ ಹೊರದೇಶದಲ್ಲೂ ಸಹ ಅಧ್ಯಯನ ಮಾಡಲು ಅವಕಾಶ ಸಿಗಬೇಕು. ಆ ದೃಷ್ಟಿಯಲ್ಲಿ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲೈಫ್ ಪ್ರೈವೇಟ್ ಲಿಮಿಟೆಡ್ ಫೆಡರೇಷನ್ ಯೂನಿವರ್ಸಿಟಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು,

ನಗರದ ಸಾಲಗಾಮೆಯಲ್ಲಿರುವ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಲ್ಯೂಮ್ನಿ ಹಾಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಲೆನಾಡು ಎಂಜಿನಿಯರಿಂಗ್ ಕಾಲೇಜ್ ಹಾಗೂ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲೈಫ್ ಪ್ರೈವೇಟ್ ಲಿಮಿಟೆಡ್ ಫೆಡರೇಷನ್ ಯೂನಿವರ್ಸಿಟಿ ಜತೆಗಿನ ಒಪ್ಪಂದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

ತಾಂತ್ರಿಕ ಶಿಕ್ಷಣ ಎಂದರೆ ಬರೀ ತರಗತಿಯಲ್ಲಿ ಪಾಠ ಕಲಿಯುವುದು ಮಾತ್ರವಲ್ಲ. ಇಂಡಸ್ಟ್ರಿಯಲ್ ಜತೆ ಕೆಲಸ ಮಾಡಬೇಕು. ಯಾವ ಕಂಪನಿಯಲ್ಲಿ ಏನು ತರಬೇತಿ ಅವಶ್ಯಕತೆ ಇದೆಯೋ ಅಂತಹ ತರಬೇತಿ ಕೊಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೂ ಸಹ ಹೊರದೇಶದಲ್ಲೂ ಸಹ ಅಧ್ಯಯನ ಮಾಡಲು ಅವಕಾಶ ಸಿಗಬೇಕು ಎಂದು ಹೇಳಿದರು.

ಅನೇಕ ಕೈಗಾರಿಕೆಗಳ ಜತೆ ಅಲ್ಲಿರುವ ಪರಿಸ್ಥಿತಿಗಳನ್ನು ಅಧ್ಯಯನ ಮಾಡುವ ದೃಷ್ಟಿಯಲ್ಲಿ ಆಸ್ಟ್ರೇಲಿಯಾ ಫೆಡರೇಷನ್ ಯುನಿವರ್ಸಿಟಿಯ ಮುಖ್ಯಸ್ಥರ ಜತೆ ಒಡಂಬಡಿಕೆ ಮಾಡಲಾಗಿದ್ದು ಅವರು ಕಾಲೇಜಿನಲ್ಲಿ ತಮ್ಮ ಕಚೇರಿಯನ್ನು ತೆರೆಯುತ್ತಾರೆ. ಎಂಸಿಇ ಕಾಲೇಜು ಸಂಸ್ಥೆಯು ಆಸ್ಟ್ರೇಲಿಯಾದಲ್ಲಿ ಒಂದು ಕಚೇರಿಯನ್ನು ತೆರೆದು ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಆಸ್ಟ್ರೇಲಿಯಾಕ್ಕೆ ಹೋಗುವ ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ಭಾರತ ದೇಶದಲ್ಲೆ ಅನೇಕ ಕೈಗಾರಿಕೆಗಳಲ್ಲಿ ಹೋಗಿ ಅನುಭವ ಪಡೆದುಕೊಳ್ಳುವ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಕಾಲೇಜಿನಲ್ಲಿ ಒಳ್ಳೆಯ ಕೆಲಸ ಸಿಗಬೇಕು. ಅನೇಕ ಅವಕಾಶವನ್ನು ಸೃಷ್ಟಿ ಮಾಡಬೇಕು. ಓದಿದವರಿಗೆಲ್ಲಾ ಒಂದು ಕೆಲಸ ಸಿಗಬೇಕು ಎನ್ನುವ ದೃಷ್ಟಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಸಿಗುತ್ತದೆ ಎಂದು ಹೇಳಿದರು.

‘ಆಸ್ಟ್ರೇಲಿಯಾದಿಂದ ಅವರೇ ಬಂದು ಯಾವ ಯಾವ ರೀತಿಯಲ್ಲಿ ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇವೆ ಎನ್ನುವ ವಿಚಾರದ ಬಗ್ಗೆ ಎಲ್ಲಾ ಅಧ್ಯಾಪಕರಿಗೆ ವಿಷಯವನ್ನು ತಿಳಿಸಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಫೆಡರೇಷನ್ ಯುನಿವರ್ಸಿಟಿಯ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ಕಾರ್ಯಕ್ರಮವನ್ನು ಹಾಕಿಕೊಳ್ಳುವ ಯೋಜನೆ ಇದೆ’ ಎಂದರು.

ಆಸ್ಟ್ರೇಲಿಯಾ ಫೆಡರೇಷನ್ ಯುನಿವರ್ಸಿಟಿಯ ಕಾರ್ಯನಿರ್ವಹಣಾಧಿಕಾರಿ ಡಾ ಮನೀಷ್ ಮಲ್ಹೋತ್ರಾ, ಸಹ ಕಾರ್ಯನಿರ್ವಹಣಾಧಿಕಾರಿ ಎಂಪ್ಲಾಯಿಬಿಲಿಟಿ ಲೈಪ್ ರಾಜದಾಸ್ ಗುಪ್ತ, ಸಮಿತಿಯ ಉಪಾಧ್ಯಕ್ಷ ಎಂಪ್ಲಾಯಿಬಿಲಿಟಿ ಲ್ಯೆಫ್ ರುಚಿಕಾ ಸನ್ರ್, ನಿರ್ದೇಶಕರಾದ ಅನಿರುದ್ಧ ಫಾಗ್ಟೆ, ಮ್ಯಾನೇಜರ್ ಅರುಣ್ ಹಿರಣ್ಣಯ್ಯ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡ, ಮ್ಯಾನೇಜರ್ ಶಿವರಾಮ್ ಕೃಷ್ಣಯ್ಯ, ಸಂಸ್ಥೆಯ ನಿರ್ದೇಶಕರಾದ ಪಾರ್ಶ್ವನಾಥ, ಡಿ.ಬಿ.ಹೇಮಂತ್ ಕುಮಾರ್, ಚೌಡವಳ್ಳಿ ಜಗದೀಶ್, ಹೆಚ್.ಎಲ್. ಗುರು ಮೂರ್ತಿ, ಜಿ.ಟಿ. ಕುಮಾರ್, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಎಸ್.ಪ್ರದೀಪ್, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ. ಕಾರ್ಯಕ್ರಮದ ಸಂಯೋಜಕರಾದ ಪ್ರಾಧ್ಯಾಪಕ ಡಾ ಶ್ರೀನಾಥ್ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಇದ್ದರು.ಹಾಸನದ ಸಾಲಗಾಮೆಯಲ್ಲಿನ ಮಲೆನಾಡು ಎಂಜಿನಿಯರಿಂಗ್ ಕಾಲೇಜ್ ಹಾಗೂ ಆಸ್ಟ್ರೇಲಿಯಾದ ಯೂನಿವರ್ಸಿಟಿ ಒಪ್ಪಂದ ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಹಾರನಹಳ್ಳಿ ನೆರವೇರಿಸಿದರು.