ವಿರೋಧ ಪಕ್ಷದಲ್ಲಿ ಬಿ.ಎಸ್.ಯೂಡಿವರಪ್ಪನವರು ಬಿಟ್ಟರೆ ತೂಕವಾಗಿ ಮಾತನಾಡುವರು ಬೇರೆ ಯಾರು ಇಲ್ಲ ಸದ್ಯ ಅಧಿಕೃತವಾಗಿ ವಿರೋಧ ಪಕ್ಷದಲ್ಲಿರುವವರು ಬೈಲಾಟ ಆಡುವುದಕ್ಕೆ ಸರಿಯಾಗಿದ್ದಾರೆ ಎಂದು ಗುಬ್ಬಿ ಶಾಸಕ ಎಸ್ .ಆರ್. ಶ್ರೀನಿವಾಸ್ ತೀವ್ರ ವಾಗ್ದಾಳಿ ದೋಸ್ತಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ವಿರೋಧ ಪಕ್ಷದಲ್ಲಿ ಬಿ.ಎಸ್.ಯೂಡಿವರಪ್ಪನವರು ಬಿಟ್ಟರೆ ತೂಕವಾಗಿ ಮಾತನಾಡುವರು ಬೇರೆ ಯಾರು ಇಲ್ಲ ಸದ್ಯ ಅಧಿಕೃತವಾಗಿ ವಿರೋಧ ಪಕ್ಷದಲ್ಲಿರುವವರು ಬೈಲಾಟ ಆಡುವುದಕ್ಕೆ ಸರಿಯಾಗಿದ್ದಾರೆ ಎಂದು ಗುಬ್ಬಿ ಶಾಸಕ ಎಸ್ .ಆರ್. ಶ್ರೀನಿವಾಸ್ ತೀವ್ರ ವಾಗ್ದಾಳಿ ದೋಸ್ತಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಗುಬ್ಬಿನ ತಾಲ್ಲೂಕಿನ ಪತ್ರೆ ಮತ್ತಿಘಟ್ಟ , ಕರೆಕುರಿಹಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು ಕುಮಾರಸ್ವಾಮಿ ಅವರು ಹತ್ತು ಸಾವಿರ ಓಟು ಅನರ್ಹ ಎಂದು ಒಂದು ಕೋಮಿನವರನ್ನು ದೂರುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ನೀಡುತ್ತಿದ್ದ ಮುಸ್ಲಿಂ ಬಾಂಧವರು ಈ ಮೊದಲು ಬೇಕಿತ್ತು. ಈಗ ಮತ ಹಾಕಲಿಲ್ಲ ಎಂದು ದೂರುವುದು ಸರಿಯಲ್ಲ. ಶೀಘ್ರದಲ್ಲಿ ನಮ್ಮ ಸರ್ಕಾರ ಸ್ಥಳೀಯ ಚುನಾವಣೆ ನಡೆಸಲಿದೆ. ಮೀಸಲಾತಿ ಮಾತ್ರ ಬಾಕಿ ಇದೆ ಎಂದರು.ಎಸ್ಐಆರ್ ವಿರುದ್ಧವೇ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳು ಆಯೋಗಕ್ಕೆ ದೂರು ನೀಡುತ್ತಿರುವುದು ವಿಪರ್ಯಾಸ . ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವರಾಗಿದ್ದಾರೆ. ಮಾತನಾಡುವಾಗ ತೂಕದ ಮಾತು ಆಡಬೇಕು. ಬೇರೆ ದೇಶಗಳಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಿದ್ದರು. ಆದರೆ ಕರ್ನಾಟಕದಲ್ಲಿ ತೆಗೆಯಲು ಆಗುತ್ತಿಲ್ಲವೆಂದು ಬಿಜೆಪಿ ಜೆಡಿಎಸ್ ನಾಟಕವಾಡುತ್ತಿದ್ದಾರೆ. ಬಾಂಗ್ಲಾದೇಶದವರು ರಾಜ್ಯದಲ್ಲಿ 10,000 ಮತದಾರರು ಇದ್ದಾರೆ ಅಂತ ಹೇಳುತ್ತಿದ್ದಾರೆ. ಹೀಗೆ ಮಾತಾನಾಡಬಾರದು ಕುಮಾರಸ್ವಾಮಿಗೆ ನೈತಿಕತೆ ಇಲ್ಲ ಎಂದರು. ಅಚ್ಚುಕಟ್ಟಾಗಿ ನಡೆದ ಎಸ್ಐಆರ್ ಕಾರ್ಯದಲ್ಲಿ ಗೊಂದಲ ಮೂಡಿಸುವ ಬಿಜೆಪಿಯ ಡೋಂಗಿ ಆಟ ಏನೂ ಎಂದು ತಿಳಿಯಲಾಗುತ್ತಿಲ್ಲ ಎಂದು ಕುಟುಕಿದರು. ಈ ವೇಳೆ ಮುಖಂಡರಾದ ಪತ್ರೆ ದಿನೇಶ್, ಹೇಮಂತ್, ದೇವರಾಜ್, ರವಿ, ಸಿದ್ದರಾಜು, ಪಾಂಡುರಂಗಯ್ಯ, ಭದ್ರಯ್ಯ, ಲಕ್ಕಣ್ಣ, ಲಕ್ಷ್ಮಣ್, ಗೋಪಾಲ್, ಹಿಮಾಮ್ ಸಾಬ್, ಗುತ್ತಿಗೆದಾರರಾದ ಸಂಪ್ರೀತ್, ಶ್ರೀನಿವಾಸ್ ಗೌಡ ಇತರರು ಇದ್ದರು.