ಬಡವರ ‘ಗ್ಯಾರಂಟಿ’ಗೆ ಶ್ರೀಮಂತರ ತಗಾದೆ: ಶಾಸಕ ಕೆ.ಎಸ್.ಆನಂದ್

| Published : Feb 10 2024, 01:47 AM IST / Updated: Feb 10 2024, 02:41 PM IST

Congress
ಬಡವರ ‘ಗ್ಯಾರಂಟಿ’ಗೆ ಶ್ರೀಮಂತರ ತಗಾದೆ: ಶಾಸಕ ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಟ್ಟಿ ಭಾಗ್ಯಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಶ್ರೀಮಂತರು ಟೀಕೆ ಮಾಡುತ್ತಾರೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಅದಾನಿ, ಅಂಬಾನಿಯವರ ನಾಲ್ಕು ಲಕ್ಷ ಕೋಟಿ ರು,ಸಾಲವನ್ನೇಕೆ ಮನ್ನಾ ಮಾಡಿತು ಎಂದು ಶಾಸಕ ಕೆ.ಎಸ್.ಆನಂದ್ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಕಡೂರು

ಗ್ಯಾರಂಟಿಗಳ ಮೂಲಕ ಬಡವರಿಗೆ ಸವಲತ್ತು ನೀಡುವ ಮೂಲಕ ಅವರನ್ನು ಸಮಾಜದ ಮೇಲೆ ಸರಕಾರದ ಕ್ರಮಕ್ಕೆ ಶ್ರೀಮಂತ ವರ್ಗವು ವಿರೋಧಿಸುತ್ತಿದೆ ಎಂದು ಕಡೂರು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಗಂಭೀರ ಆರೋಪ ಮಾಡಿದರು ಅವರು ಶುಕ್ರವಾರ ಕಡೂರು ವಿಧಾನಸಭಾ ಕ್ಷೇತ್ರದ ಹಿರೇನಲ್ಲೂರು ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರಿಂದ ಅರ್ಜಿ ಸ್ವೀಕರಿಸಿ ಸ್ಥಳದಲ್ಲಿ ಪರಿಹರಿಸುವ ವಿಶೇಷ ಕಾರ್ಯಕ್ರಮ ಈ ಜನಸ್ಪಂದನ ಕಾರ್ಯಕ್ರಮ. ಜನಸಾಮಾನ್ಯರ ನೋವು ಕುಂದು ಕೊರತೆಗಳನ್ನು ಆಲಿಸಿ ಈ ಸಭೆಯಲ್ಲಿ ಪರಿಹರಿಸಲಾಗುವುದು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳ ಕುರಿತ ಜನಸ್ಪಂದನ ಯಾತ್ರೆಯಲ್ಲಿ ಕೈಬಿಟ್ಟು ಹೋಗಿರುವ ನಿಜವಾದ ಫಲಾನುಭವಿಗಳಿಗೆ ಮರು ಸೇರ್ಪಡೆ ಮಾಡಿ ತಾಂತ್ರಿಕ ದೋಷಗಳನ್ನು ನಿವಾರಿಸಿ ಸವಲತ್ತು ಸಿಗುವಂತೆ ಮಾಡುವುದು, ಬಡವರ ಮಕ್ಕಳು ಕೂಡ ಶಿಕ್ಷಣ ಪಡೆದು ಸಮಾನವಾಗಿ ಇರಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಬಡವರಿಗೆ ನೀಡಲು ಕೇಂದ್ರ ಸರ್ಕಾರವು ಅಕ್ಕಿಯನ್ನು ಕೊಡಲಿಲ್ಲ. ಗ್ಯಾರಂಟಿಗಳ ಜಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದನ್ನ ಮಾಡಲು ಸಾಧ್ಯವಿಲ್ಲ. ಬಿಟ್ಟಿ ಭಾಗ್ಯಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡುತ್ತಾರೆ. 

ಆದರೆ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಅದಾನಿ, ಅಂಬಾನಿಯವರ ನಾಲ್ಕು ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿತು. ಇಷ್ಟು ದಿನ ನಿಮ್ಮ ತೋಟ ಜಮೀನುಗಳಿಗೆ ಕೆಲಸ ಮಾಡಿದ ಬಡವರು ಕೂಡ ಸ್ವಲ್ಪ ವಿಶ್ರಮಿಸಲಿ. ಜಮೀನಿಗೆ, ಮನೆಗೆ ಕೆಲಸದವರು ಸಿಗುವುದಿಲ್ಲ ಅನ್ನೋ ಕಾರಣಕ್ಕೆ ವಿರೋಧಿಸುತ್ತೀರಿ. 

ತಾವುಗಳು ಬೀದಿಗೆ ಬಂದು ನಿಮ್ಮ ಹೆಂಡತಿ ಮಕ್ಕಳ ಜೊತೆ ದುಡಿಮೆ ಮಾಡಿರಿ ಎಂದು ಹೇಳಿ ಬಡವರು ಸ್ವಲ್ಪ ವಿರಾಮ ತೆಗೆದುಕೊಳ್ಳಲಿ ಎಂದು ಶ್ರೀಮಂತರಿಗೆ ಕುಟುಕಿದ ಅವರು, 2013ರಲ್ಲಿ ಕೃಷಿ ಭಾಗ್ಯ ಯೋಜನೆಯಲ್ಲಿ ಲಾಭ ಪಡೆದವರು ಶ್ರೀಮಂತರೇ ಹೊರತು ಬಡ ರೈತರಲ್ಲ ಎಂದು ಕಟಕಿಯಾಡಿದರು.

ಹಿರೇನಲ್ಲೂರು ಹೋಬಳಿಯಲ್ಲಿ 37 00 ರೇಶನ್ ಕಾರ್ಡ್ ಇದ್ದು, 12726 ಜನರಿಗೆ ಒಂದು ತಿಂಗಳಿಗೆ 2,05 ಕೋಟಿ ರೂ ಅನ್ನ ಭಾಗ್ಯಕ್ಕೆ ನೀಡುತ್ತಿದೆ. ಗಿರಿಯಾಪುರದಲ್ಲಿ ಎಲ್ಲರೂ ಕೂಡ ಕಾರ್ಡನ್ನು ಹೊಂದಿದ್ದು, ಕೇವಲ ನಾಲ್ಕು ಮನೆಗಳಿಗೆ ಮಾತ್ರ ಕಾರ್ಡು ಇಲ್ಲ. ಶ್ರೀಮಂತ ವರ್ಗ ಇರುವ ಗಿರಿಯಾಪುರದಲ್ಲಿ ಉಮಾಮಹೇಶ್ವರಪ್ಪ ಸೇರಿದಂತೆ ಎಲ್ಲರೂ ಅನ್ನ ಭಾಗ್ಯ, ಗೃಹ ಜ್ಯೋತಿ ಲಾಭ ಪಡೆಯುತ್ತಿದ್ದಾರೆ. 

ಪ್ರತೀ ತಿಂಗಳು 4 ಕೋಟಿರೂ ಕ್ಷೇತ್ರದ 70 36,000 ಮಹಿಳೆಯರಿಗೆ ಹಣ ಬಂದಿದೆ. ಇಡೀ ಕಡೂರು ತಾಲೂಕಿಗೆ 130 ಕೋಟಿ ಪ್ರತಿ ವರ್ಷ ಗೃಹಲಕ್ಷ್ಮಿ ಯಿಂದ ಬರಲಿದೆ. ಬಡವರು ಸೇರಿದಂತೆ ಶ್ರೀಮಂತರು ಕೂಡ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಗಿರಿಯಾಪುರದಲ್ಲಿ ಯಾರಾದರೂ ಸವಲತ್ತು ಬೇಡ ಎಂದು ಬರೆದು ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕವಿರಾಜ್, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ಪ್ರವೀಣ್,ಹಿರೇನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಾ, ಕಾಮನಕೆರೆಯ ಶೇಖರ್, ಬಾಸೂರು ಗ್ರಾ.ಪಂ. ಸುಧಾ, ಪ್ರಿಯ ಮುಖಂಡರದ ಆಸಂದಿ ಕಲ್ಲೇಶ್,ಜಿಪ ಪ್ರಭು ಕುಮಾರ್, ಪುಟ್ಟಪ್ಪ ಮತ್ತಿತರರು ಇದ್ದರು.

ಬಸವಣ್ಣನ ಆದೇಶ ಪಾಲನೆಯಾಗಲಿ: ಶಾಸಕ
ಗಿರಿಯಾಪುರದಲ್ಲಿ ಗ್ರಾ.ಪಂ.ಯಲ್ಲಿ ಇಂದಿಗೂ ಕೂಡ ಒಂದು ಮಹಿಳಾ ಪರಿಶಿಷ್ಟ ವರ್ಗದ ಮಹಿಳಾ ಸ್ಥಾನವನ್ನು ಅರ್ಜಿ ಹಾಕದಂತೆ ನೋಡಿಕೊಂಡು ಬರಲಾಗುತ್ತದೆ ಪ್ರಜಾಪ್ರಭುತ್ವಕ್ಕೆ ಇದು ಮಾರಕ. 

ಬಸವಣ್ಣನವರ ಆದೇಶ ಪಾಲನೆ ಆಗಬೇಕಾದರೆ ಕಟ್ಟಕಡೆಯ ವ್ಯಕ್ತಿಗಳು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ, ಮೂರು ಅವಧಿಯಿಂದ ಗ್ರಾಮದಲ್ಲಿ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಸ್ಥಾನ ಕೊಡುವುದಿಲ್ಲ ಎಂದರೆ ಅವರ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸಮಾಧಾನ ವ್ಯಕ್ತಪಡಿಸಿ ತಹಸೀಲ್ದಾರರು ಈ ಬಗ್ಗೆ ಚುನಾವಣೆ ಕಾಲ್ ಮಾಡಿ ಚುನಾವಣೆ ನಡೆಸಬೇಕು ಎಂದು ಶಾಸಕರು ಸೂಚನೆ ನೀಡಿದರು.