ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜನಪರ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ವಿರೋಧ ಪಕ್ಷ ಒಂದು ವರ್ಗದ ಪರ ಎಂದು ಮಾಡಿರುವ ಆರೋಪ ನಿರಾಧಾರ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಫಲಾಹಾರಸ್ವಾಮಿ ಮಠದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ, ಪಿಆರ್‌ಇಡಿ, ಎಸ್‌ಸಿಪಿ ಯೋಜನೆ ಮತ್ತು ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿ ₹2.25 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ₹57 ಸಾವಿರ ಕೋಟಿ ನೀಡಿ, ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡಿ ಸಮರೋಪಾದಿಯಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ರಾಜ್ಯಸರ್ಕಾರ ಎಲ್ಲಾ ವರ್ಗದ ಬಡವರ ಪರವಾಗಿ ಕ್ರಿಯಾಶೀಲ ಯೋಜನೆಗಳ ಮೂಲಕ ಆಡಳಿತ ನಡೆಸುತ್ತಿದ್ದು, ಒಂದು ವರ್ಗದ ಪರ ಎಂಬ ಸರ್ಕಾರದ ಆಡಳಿತ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆ ಆಧಾರ ರಹಿತವಾದುದು ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಇಲಾಖೆ ಸಚಿವ ಜಾರಕಿಹೊಳಿ ಇವರ ಸಹಕಾರದೊಂದಿಗೆ ಅನುದಾನ ತಂದು ಜನಪರ ಕೆಲಸಕ್ಕೆ ಬಳಸುತ್ತಿರುವುದಾಗಿ ತಿಳಿಸಿದರು.ಫಲಾಹಾರಸ್ವಾಮಿ ರಸ್ತೆ ₹30 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು. ಈಗಾಗಲೇ ಮುಖ್ಯ ಮಂತ್ರಿ ಗಳ ವಿಶೇಷ ನಿಧಿಯಿಂದ ₹3 ಕೋಟಿ ಬಿಡುಗಡೆಯಾಗಿದೆ. ಬಜೆಟ್‌ನಲ್ಲಿ ಜಿಲ್ಲೆಗೆ ₹50 ಕೋಟಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.ಮುತ್ತಿನಪುರ ವೀರಭದ್ರೇಶ್ವರ ದೇವಸ್ಥಾನದ ಭಕ್ತರಿಗೆ ಸಂತೋಷವಾಗುವಂತೆ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್‌ ಮನವೊಲಿಸಿ ₹20ಲಕ್ಷ ಮರು ಮಂಜೂರಾತಿ ಆದೇಶ ಕೊಡಿಸಿರುವುದಾಗಿ ಎಂದು ತಿಳಿಸಿದರು.ಸುಮಾರು ₹7 ಕೋಟಿ ಅನುದಾನವನ್ನು ತಾರತಮ್ಯ ಮಾಡದೆ ಸಮಾನವಾಗಿ ಕಂಡು ಎಲ್ಲಾ ವರ್ಗದ ಬಡವರ ವಿವಿಧ ಧರ್ಮದ ಸಮುದಾಯ ಭವನಗಳಿಗೆ ನೀಡಲಾಗಿದೆ. ₹3 ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ನೀಡಿದ್ದಾರೆಂದು ತಿಳಿಸಿದರು.


ಫಲಾಹಾರಸ್ವಾಮಿ ಮಠದ ಪೀಠಾಧ್ಯಕ್ಷ ಮುರುಗೇಂದ್ರ ಸ್ವಾಮೀಜಿ, ಸಿಡಿಎ ಅಧ್ಯಕ್ಷ ಹಂಪಾಪುರ ಮಂಜೇಗೌಡ, ಸ್ಥಳೀಯ ಮುಖಂಡರಾದ ಬೆಟ್ಟಗೆರೆ ಪ್ರವೀಣ್, ಜೈರಾಜ್ ಅರಸ್, ಮಲ್ಲೇನಹಳ್ಳಿ ಕಲ್ಲೇಶ್, ತಿಮ್ಮಯ್ಯ, ಪ್ರವೀಣ್, ನಂದೀಶ್, ಶಶಿಧರ ಆರಾಧ್ಯ, ಸುರೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ, ಶಿವಕುಮಾರ್, ಗಿರೀಶ್ ಉಪಸ್ಥಿತರಿದ್ದರು.

--ಕೋಟ್‌---ಮಧ್ಯಪ್ರಾಚ್ಯ ದೇಶಗಳಿಂದ ಉಂಟಾಗಿರುವ ಅಡಿಗೆ ಅನಿಲ ಪೂರೈಕೆ ವ್ಯತ್ಯಯ ಜಿಲ್ಲೆಯಲ್ಲಿ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ

- ಎಚ್‌.ಡಿ. ತಮ್ಮಯ್ಯ, ಶಾಸಕ ಚಿಕ್ಕಮಗಳೂರು ( ಫೋಟೊ ಬಳಸಿ)