ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳ ದ್ವೇಷ: ಸಿ.ಡಿ.ಗಂಗಾಧರ್

| Published : Aug 05 2024, 12:37 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳ ದ್ವೇಷ: ಸಿ.ಡಿ.ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ಆ.6ರಂದು ಜನಾಂದೋಲನ ಸಮಾವೇಶವನ್ನು ನಗರದ ಗಿರಿಜ ಚಿತ್ರಮಂದಿರದ ಎದುರು ಹಮ್ಮಿಕೊಳ್ಳಲಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ಪಕ್ಷ 3-4 ಸಾವಿರ ಮಂದಿ ಕಾಂಗ್ರೆಸ್-ರೈತಸಂಘದ ಕಾರ್‍ಯಕರ್ತರು ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಬಿಜೆಪಿ-ಜೆಡಿಎಸ್‌ನವರು ಮೂಡಾ ಹಗರಣದ ವಿಚಾರವಾಗಿ ಪಾದಯಾತ್ರೆ ಮಾಡುವ ಮೂಲಕ ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ವಿರುದ್ದ ದ್ವೇಷ ಸಾಧಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಭ್ರಷ್ಟಚಾರವನ್ನು ಸಹಿಸೋ ಮಾತೆಯೇ ಇಲ್ಲ. ವಾಲ್ಮೀಕಿ ಹಗರಣದಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದರು.

ಮಂಡ್ಯದಲ್ಲಿ ಆ.6ರಂದು ಜನಾಂದೋಲನ ಸಮಾವೇಶವನ್ನು ನಗರದ ಗಿರಿಜ ಚಿತ್ರಮಂದಿರದ ಎದುರು ಹಮ್ಮಿಕೊಳ್ಳಲಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ಪಕ್ಷ 3-4 ಸಾವಿರ ಮಂದಿ ಕಾಂಗ್ರೆಸ್-ರೈತಸಂಘದ ಕಾರ್‍ಯಕರ್ತರು ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಸಿ.ಸ್ವಾಮೀಗೌಡ, ಡಿ.ಹುಚ್ಚೇಗೌಡ, ಕಣಿವೆರಾಮು, ಬಸವರಾಜು, ಪುರಸಭೆ ಸದಸ್ಯ ಉಮಾಶಂಕರ್, ಭರತ್‌ಪಟೇಲ್, ರಾಜೇಶ್(ಲೋಕೇಶ್) ಹಾಜರಿದ್ದರು.ಆಸ್ಪತ್ರೆ ಆವರಣದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಿ ಆಗ್ರಹ

ಭಾರತೀನಗರ:ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿರುವ ವಿಪರೀತ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ.

ಈ ಕುರಿತು ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿ, ನಿತ್ಯ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆ ಆವರಣದಲ್ಲಿ ಗಿಡ, ಗೆಂಟೆಗಳು ಬೆಳದಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಿದೆ ಎಂದು ತಿಳಿಸಿದ್ದಾರೆ.ಕೂಡಲೇ ಕಳೆ ಗಿಡ, ಗೆಂಟೆಗಳನ್ನು ತೆಗೆಯಿಸಿ ಆಸ್ಪತ್ರೆ ಆವರಣಕ್ಕೆ ಸೊಳ್ಳೆಗಳನ್ನು ನಿಯಂತ್ರಿಸಬಹುದಾದ ಔಷಧಿ ಸಿಂಪರಣೆಗೆ ಕ್ರಮ ಕೈಗೊಳ್ಳಬೇಕು.ಸಾರ್ವಜನಿಕ ಶೌಚಾಲಯ ಗಬ್ಬು ನಾರುತ್ತಿದೆ. ಶೀಘ್ರವೇ ಸರಿಪಡಿಸಿ ಶುಚಿತ್ವ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿದ ಜಗದೀಶ್, ತಮ್ಮ ಎಲ್ಲಾ ಮನವಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ದಸಂಸ ಮುಖಂಡರಾದ ಕರಡಕೆರೆ ಯೋಗೇಶ್, ಗುಡಿಗೆರೆ ಬಸವರಾಜು, ಮುಡೀನಹಳ್ಳಿ ತಿಮ್ಮಯ್ಯ, ಬಾನುಕುಮಾರ್, ರುದ್ರಯ್ಯ, ಅಮೀನ್ ಶಿವಲಿಂಗಯ್ಯ, ಬಸವರಾಜು ಮತ್ತಿತರರಿದ್ದರು.